ಸೆನ್ಸಾರ್ ಮಂಡಳಿ ವಿರುದ್ಧ ನಟ ವಿಶಾಲ್ ಲಂಚ ಆರೋಪ: ತನಿಖೆ ಕೈಗೆತ್ತಿಕೊಂಡ ಸಿಬಿಐ

ನಟ ವಿಶಾಲ್  ಅಭಿನಯದ ಮಾರ್ಕ್ ಆಂಟನಿ ಚಿತ್ರಕ್ಕೆ ಪ್ರಮಾಣಪತ್ರ ಪಡೆಯಲು 6.5 ಲಕ್ಷ ರೂಪಾಯಿ ಪಾವತಿಸಿದ್ದಾರೆ ಎಂಬ ಆರೋಪದ ಮೇಲೆ ಸಿಬಿಐ ಮೂವರು ವ್ಯಕ್ತಿಗಳು ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ನ ಅಧಿಕಾರಿಗಳ ವಿರುದ್ಧ ಗುರುವಾರ ಎಫ್‌ಐಆರ್ ದಾಖಲಿಸಿದೆ.
ಸಿಬಿಐ(ಸಂಗ್ರಹ ಚಿತ್ರ)
ಸಿಬಿಐ(ಸಂಗ್ರಹ ಚಿತ್ರ)

ನವದೆಹಲಿ: ನಟ ವಿಶಾಲ್  ಅಭಿನಯದ ಮಾರ್ಕ್ ಆಂಟನಿ ಚಿತ್ರಕ್ಕೆ ಪ್ರಮಾಣಪತ್ರ ಪಡೆಯಲು 6.5 ಲಕ್ಷ ರೂಪಾಯಿ ಪಾವತಿಸಿದ್ದಾರೆ ಎಂಬ ಆರೋಪದ ಮೇಲೆ ಸಿಬಿಐ ಮೂವರು ವ್ಯಕ್ತಿಗಳು ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ನ ಅಧಿಕಾರಿಗಳ ವಿರುದ್ಧ ಗುರುವಾರ ಎಫ್‌ಐಆರ್ ದಾಖಲಿಸಿದೆ.

ಎಫ್‌ಐಆರ್ ನಲ್ಲಿ ದಾಖಲಿಸಿರುವ ಹೆಸರಿನ ಆರೋಪಿಗಳ ಮನೆ  ಸೇರಿದಂತೆ ಮುಂಬೈನ ನಾಲ್ಕು ಸ್ಥಳಗಳಲ್ಲಿ ಶೋಧ ನಡೆಸಲಾಯಿತು.  ಮೆರ್ಲಿನ್ ಮೆನಗಾ, ಜೀಜಾ ರಾಮದಾಸ್, ರಾಜನ್ ಎಂ ಮತ್ತು ಸಿಬಿಎಫ್‌ಸಿಯ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್‌ಐಆರ್ ದಾಖಲಿಸಿದೆ.

ಮಾರ್ಕ್ ಆ್ಯಂಟನಿ ಸಿನಿಮಾದ ಹಿಂದಿ ಡಬ್ಬಿಂಗ್ ಬಿಡುಗಡೆಗೂ ಮುನ್ನ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್‌ನಿಂದ ಸೆನ್ಸಾರ್ ಪ್ರಮಾಣ ಪತ್ರ ಪಡೆಯಲು ಖಾಸಗಿ ವ್ಯಕ್ತಿಯೊಬ್ಬರು 7 ಲಕ್ಷಕ್ಕೆ ಲಂಚದ ಬೇಡಿಕೆ ಇಟ್ಟಿರುವುದು ನಿಜ ಎಂದು ಸಿಬಿಐ ವಕ್ತಾರರೊಬ್ಬರು ತಿಳಿಸಿದ್ದಾರೆ.

ಆರೋಪಿಗಳು ಆರಂಭದಲ್ಲಿ ಸಿಬಿಎಫ್‌ಸಿ-ಮುಂಬೈ ಅಧಿಕಾರಿಗಳ ಪರವಾಗಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು,  ಮಾತುಕತೆಯ ನಂತರ ಮೊತ್ತವನ್ನು 6.54 ಲಕ್ಷಕ್ಕೆ ಇಳಿಸಲಾಗಿದೆ ಎಂದು ಅವರು ಹೇಳಿದರು.

ಇಬ್ಬರು ಆರೋಪಿಗಳ ಎರಡು ಬ್ಯಾಂಕ್ ಖಾತೆಗಳಲ್ಲಿ ಸಿಬಿಎಫ್ ಸಿ ಮುಂಬೈ ಅಧಿಕಾರಿಗಳ ಪರವಾಗಿ 6,54,000 ರೂ.ಗಳನ್ನು ಲಂಚವಾಗಿ ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ, 26/09/2023 ರಂದು, CBFC, ಮುಂಬೈನಿಂದ ಅಗತ್ಯವಿರುವ ಪ್ರಮಾಣಪತ್ರವನ್ನು ನೀಡಲಾಯಿತು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com