ಮುಂಬೈನ ಬೀದಿಯಲ್ಲಿ ಅಚ್ಚರಿಯ ಘಟನೆ: ಫ್ಲಿಪ್‌ಕಾರ್ಟ್‌ ಟ್ರಕ್ ನಲ್ಲಿ ಸುರಿದ ಕರೆನ್ಸಿ ನೋಟುಗಳು! ವಿಡಿಯೋ

ವಾಣಿಜ್ಯ ನಗರಿ ಮುಂಬೈನ ಗೇಟ್‌ವೇ ಸೇರಿದಂತೆ ಕೆಲವು ಬೀದಿಗಳಲ್ಲಿ ಶನಿವಾರ ಅಚ್ಚರಿಯ ಘಟನೆಯೊಂದು ನಡೆದಿದೆ. ಫ್ಲಿಪ್ ಕಾರ್ಟ್ ಟ್ರಕ್ ವೊಂದು ರೂ. 2,000 ನೋಟುಗಳನ್ನು ಗಾಳಿಯಲ್ಲಿ ಮಳೆ ಸುರಿಸಿದಂತೆ ಸುರಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
ಫ್ಲಿಪ್ ಕಾರ್ಟ್ ಟ್ರಕ್ ನಲ್ಲಿ ಹಣ ಚೆಲ್ಲುತ್ತಿರುವ ಚಿತ್ರ
ಫ್ಲಿಪ್ ಕಾರ್ಟ್ ಟ್ರಕ್ ನಲ್ಲಿ ಹಣ ಚೆಲ್ಲುತ್ತಿರುವ ಚಿತ್ರ
Updated on: 

ಮುಂಬೈ: ವಾಣಿಜ್ಯ ನಗರಿ ಮುಂಬೈನ ಗೇಟ್‌ವೇ ಸೇರಿದಂತೆ ಕೆಲವು ಬೀದಿಗಳಲ್ಲಿ ಶನಿವಾರ ಅಚ್ಚರಿಯ ಘಟನೆಯೊಂದು ನಡೆದಿದೆ. ಫ್ಲಿಪ್ ಕಾರ್ಟ್ ಟ್ರಕ್ ವೊಂದು ರೂ. 2,000 ನೋಟುಗಳನ್ನು ಗಾಳಿಯಲ್ಲಿ ಮಳೆ ಸುರಿಸಿದಂತೆ ಸುರಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಚಲನಚಿತ್ರದ ದೃಶ್ಯದಂತೆ ಕರೆನ್ಸಿ ನೋಟುಗಳು ಗಾಳಿಯಲ್ಲಿ ತೇಲಿಬರುತ್ತಿದ್ದರೆ, ಜನರು ಕುತೂಹಲಭರಿತವಾಗಿ ನೋಡತೊಡಗಿದರು. ಇದೊಂದು ರೀತಿಯ ಉತ್ಸಾಹ ಮತ್ತು ವಿಸ್ಮಯದ ವಾತಾವರಣಕ್ಕೆ ಕಾರಣವಾಯಿತು. ಅಲ್ಲದೇ ಜನರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಬಿಬಿಡಿ ಪ್ರಚಾರಕ್ಕಾಗಿ ಈ ರೀತಿ ಮಾಡಿತೇ? ಅಥವಾ ಆಕ್ಮಸಿಕವಾಗಿ ಆದ ಘಟನೆಯೇ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುತ್ತಿದ್ದಾರೆ. 

ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಫ್ಲಿಪ್ ಕಾರ್ಟ್, ಸದ್ಯದಲ್ಲೇ ಸ್ಪಷ್ಟನೆ ನೀಡಲಿದ್ದೇವೆ ಎಂದು ತಿಳಿಸಿದೆ. ಅಂದಹಾಗೆ ಫ್ಲಿಪ್ ಕಾರ್ಟ್ ಬಿಗ್ ಬಿಲಿಯಾನ್ ಡೇಸ್ ಸೇಲ್ ಅಭಿಯಾನ ಅಕ್ಟೋಬರ್ 8 ರಿಂದ 15ರವರೆಗೆ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com