ಬಿಹಾರ: ಅಪಘಾತದಲ್ಲಿ ಛಿದ್ರಗೊಂಡಿದ್ದ ವ್ಯಕ್ತಿಯ ಮೃತದೇಹ ಕಾಲುವೆಗೆ ಎಸೆದ ಪೊಲೀಸರ ಅಮಾನತು

ಬಿಹಾರದ ಮುಜಫರ್‌ಪುರ ಜಿಲ್ಲೆಯ ಫಕುಲಿ ಔಟ್‌ಪೋಸ್ಟ್ ಪ್ರದೇಶದ ಧೋಧಿ ಕಾಲುವೆ ಸೇತುವೆಯ ಬಳಿ ಅಪಘಾತದಲ್ಲಿ ಛಿದ್ರಗೊಂಡಿದ್ದ ವ್ಯಕ್ತಿಯ ಮೃತದೇಹವನ್ನು ಕಾಲುವೆಗೆ ಎಸೆದ ಮೂವರು ಪೊಲೀಸ್ ಸಿಬ್ಬಂದಿಯನ್ನು ಭಾನುವಾರ...
ವ್ಯಕ್ತಿಯ ಮೃತದೇಹ ಕಾಲುವೆಗೆ ಎಸೆದ ಪೊಲೀಸರು
ವ್ಯಕ್ತಿಯ ಮೃತದೇಹ ಕಾಲುವೆಗೆ ಎಸೆದ ಪೊಲೀಸರು

ಮುಜಫರ್‌ಪುರ: ಬಿಹಾರದ ಮುಜಫರ್‌ಪುರ ಜಿಲ್ಲೆಯ ಫಕುಲಿ ಔಟ್‌ಪೋಸ್ಟ್ ಪ್ರದೇಶದ ಧೋಧಿ ಕಾಲುವೆ ಸೇತುವೆಯ ಬಳಿ ಅಪಘಾತದಲ್ಲಿ ಛಿದ್ರಗೊಂಡಿದ್ದ ವ್ಯಕ್ತಿಯ ಮೃತದೇಹವನ್ನು ಕಾಲುವೆಗೆ ಎಸೆದ ಮೂವರು ಪೊಲೀಸ್ ಸಿಬ್ಬಂದಿಯನ್ನು ಭಾನುವಾರ ಅಮಾನತುಗೊಳಿಸಲಾಗಿದೆ.

ಈ ಮೂವರು ಪೊಲೀಸ್ ಸಿಬ್ಬಂದಿ ಮೃತ ವ್ಯಕ್ತಿಯ ದೇಹವನ್ನು ರಸ್ತೆಯಿಂದ ಎಳೆದು ಕಾಲುವೆಗೆ ಎಸೆಯುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಮೃತ ವ್ಯಕ್ತಿಗೆ ಸೂಕ್ತ ಗೌರವ ನೀಡದೆ, ಅಮಾನವೀಯವಾಗಿ ನಡೆದುಕೊಂಡ ಪೊಲೀಸರ ಕೃತ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

"ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗಿದ್ದು, ಅದು ನಿಜವೆಂದು ತಿಳಿದುಬಂದಿದೆ. ಇದು ದುರದೃಷ್ಟಕರ ಘಟನೆ ಮತ್ತು ಅಲ್ಲಿದ್ದ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಮುಜಾಫರ್‌ಪುರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೃತ ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತ ವ್ಯಕ್ತಿಯ ಗುರುತು ಖಚಿತಪಡಿಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ ಎಂದು ಪ್ರಕಟಣೆ ಹೇಳಿದೆ.

ವಿಡಿಯೋದಲ್ಲಿ ವ್ಯಕ್ತಿಯ ರಕ್ತಸಿಕ್ತ ದೇಹವನ್ನು ಇಬ್ಬರು ಪೊಲೀಸರು ರಸ್ತೆಯ ಮೇಲೆ ಎಳೆದುಕೊಂಡು ಹೋಗಿದ್ದಾರೆ. ಬಳಿಕ ಮತ್ತೊಬ್ಬ ಪೊಲೀಸ್ ಸಿಬ್ಬಂದಿ, ಶವವನ್ನು ಎತ್ತಿ ಕಾಲುವೆಗೆ ಎಸೆಯುವುದಕ್ಕೆ ಅವರಿಗೆ ಸಹಾಯ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com