ತೆಲಂಗಾಣ ಚುನಾವಣೆ: ಕಾಂಗ್ರೆಸ್ ನೊಂದಿಗೆ ವೈಎಸ್ಆರ್ ಟಿಪಿ ವಿಲೀನ ಇಲ್ಲ, ಉಲ್ಟಾ ಹೊಡೆದ ಶರ್ಮಿಳಾ!

ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ವೈಎಸ್ಆರ್ ಟಿಪಿ ವಿಲೀನವಾಗುವುದಾಗಿ ಇತ್ತೀಚಿಗೆ ಹೇಳಿಕೆ ನೀಡಿದ್ದ ಪಕ್ಷದ ಸಂಸ್ಥಾಪಕಿ ವೈಎಸ್ ಶರ್ಮಿಳಾ ಇದೀಗ ಉಲ್ಟಾ ಹೊಡೆದಿದ್ದಾರೆ.
ಶರ್ಮಿಳಾ
ಶರ್ಮಿಳಾ

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ವೈಎಸ್ಆರ್ ಟಿಪಿ ವಿಲೀನವಾಗುವುದಾಗಿ ಇತ್ತೀಚಿಗೆ ಹೇಳಿಕೆ ನೀಡಿದ್ದ ಪಕ್ಷದ ಸಂಸ್ಥಾಪಕಿ ವೈಎಸ್ ಶರ್ಮಿಳಾ ಇದೀಗ ಉಲ್ಟಾ ಹೊಡೆದಿದ್ದಾರೆ. ಹೌದು, ಕಾಂಗ್ರೆಸ್ ಜೊತೆಗೆ ವಿಲೀನ ಇಲ್ಲ, ಎಲ್ಲಾ 119 ಸ್ಥಾನಗಳಲ್ಲಿ ತಮ್ಮ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ತಾವು ಪಲೇರ್ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ. 

ಪಕ್ಷದ ಸಭೆಯಲ್ಲಿ ಮಾತನಾಡಿದ ಶರ್ಮಿಳಾ, ಕಾಂಗ್ರೆಸ್ ಜೊತೆಗೆ ಮೈತ್ರಿಗಾಗಿ ಕಾಂಗ್ರೆಸ್ ನಾಯಕತ್ವದಿಂದ ಪ್ರತಿಕ್ರಿಯೆಗಾಗಿ ನಾಲ್ಕು ತಿಂಗಳ ಕಾಲ ಕಾದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ವೈಎಸ್‌ಆರ್‌ಟಿಪಿ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪತಿ ಅನಿಲ್ ಕುಮಾರ್ ಮತ್ತು ತಾಯಿ ವಿಜಯಮ್ಮ ಕೂಡ ಸ್ಪರ್ಧಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಂದ ಬೇಡಿಕೆಯಿದೆ ಎಂದು ಅವರು ಹೇಳಿದರು.

ತೆಲಂಗಾಣದಲ್ಲಿ ನವೆಂಬರ್ 30 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. 2019 ರ ಆಂಧ್ರಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಶರ್ಮಿಳಾ ತನ್ನ ಸಹೋದರ ಜಗನ್‌ ಪರವಾಗಿ ತೀವ್ರವಾಗಿ ಪ್ರಚಾರ ಮಾಡಿದ್ದರು ಮತ್ತು ನಂತರ ತೆಲಂಗಾಣದಲ್ಲಿ ತಮ್ಮದೇ ಪಕ್ಷವಾದ ವೈಎಸ್ ಆರ್ ಟಿಪಿ ಹುಟ್ಟುಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com