ತಪ್ಪಾಗಿ ವರ್ತಿಸಬೇಡಿ: ಪಾಕ್ ಪಂದ್ಯದ ಹಿನ್ನೆಲೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಗೌತಮ್ ಗಂಭೀರ್ ಸಂದೇಶ

ವಿಶ್ವಕಪ್ ಟೂರ್ನಿಯ ಭಾಗವಾಗಿ ಭಾರತ-ಪಾಕ್ ನಡುವೆ ಅಹ್ಮದಾಬಾದ್ ನಲ್ಲಿ ಪಂದ್ಯ ನಡೆಯುತ್ತಿದೆ. 
ಗೌತಮ್ ಗಂಭೀರ್
ಗೌತಮ್ ಗಂಭೀರ್
Updated on

ಅಹ್ಮದಾಬಾದ್: ವಿಶ್ವಕಪ್ ಟೂರ್ನಿಯ ಭಾಗವಾಗಿ ಭಾರತ-ಪಾಕ್ ನಡುವೆ ಅಹ್ಮದಾಬಾದ್ ನಲ್ಲಿ ಪಂದ್ಯ ನಡೆಯುತ್ತಿದೆ. ಭಾರತೀಯ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನೆರೆದಿದ್ದಾರೆ. 

ಟಾಸ್ ಬಳಿಕ ಮಾತನಾಡಿರುವ ಗೌತಮ್ ಗಂಭೀರ್ ಭಾರತೀಯ ಕ್ರೀಡಾಭಿಮಾನಿಗಳಿಗೆ ಪಾಕ್ ತಂಡದೆಡೆಗೆ ಅಗೌರವದಿಂದ ನಡೆದುಕೊಳ್ಳದಂತೆ  ಕರೆ ನೀಡಿದ್ದಾರೆ. ನಿಮ್ಮ ನೆಚ್ಚಿನ ಕ್ರಿಕೆಟ್ ತಂಡವನ್ನು ಹುರಿದುಂಬಿಸಿ ಆದರೆ ಅತಿಥಿ ತಂಡದೆಡೆಗೆ ತಪ್ಪಾಗಿ ನಡೆದುಕೊಳ್ಳಬೇಡಿ, ಅವರು ನಮ್ಮ ಅತಿಥಿಗಳೆಂಬುದನ್ನು ಮರೆಯಬೇಡಿ ಎಂದು ಗಂಭೀರ್ ಹೇಳಿದ್ದಾರೆ.

 2023ರ ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ 191 ರನ್‌ಗಳಿಗೆ ಆಲೌಟ್ ಆಗಿದೆ. 

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡ ಟೀಂ ಇಂಡಿಯಾದ ಬೌಲರ್‌ಗಳ ದಾಳಿಗೆ ತತ್ತರಿಸಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com