ಮಹಾದೇವ್ ಬೆಟ್ಟಿಂಗ್ ಆಪ್ ಪ್ರಕರಣ: ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಮುಖ ಆರೋಪಿ ಬಂಧನ

ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿರುವ ಮಹಾದೇವ್ ಬೆಟ್ಟಿಂಗ್ ಆಪ್ ಪ್ರಕರಣದ ಪ್ರಮುಖ ಆರೋಪಿಯೋರ್ವನನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.
ಮಹಾದೇವ್ ಬೆಟ್ಟಿಂಗ್ ಆಪ್ ಪ್ರಕರಣ
ಮಹಾದೇವ್ ಬೆಟ್ಟಿಂಗ್ ಆಪ್ ಪ್ರಕರಣ

ಮುಂಬೈ: ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿರುವ ಮಹಾದೇವ್ ಬೆಟ್ಟಿಂಗ್ ಆಪ್ ಪ್ರಕರಣದ ಪ್ರಮುಖ ಆರೋಪಿಯೋರ್ವನನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.

ಮಹಾದೇವ್ ಬೆಟ್ಟಿಂಗ್ ಆಪ್ ಪ್ರಕರಣದ ಪ್ರಮುಖ ಆರೋಪಿ ಮೃಗಾಂಕ್ ಮಿಶ್ರಾ ಎಂಬಾತನನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ದುಬೈನಿಂದ ಬಂದಿಳಿಯುತ್ತಿದ್ದ ವೇಳೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಈ ಬಂಧನ ಪ್ರಕ್ರಿಯೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನಂತರ ರಾಜಸ್ಥಾನದ ಪೊಲೀಸ್ ತಂಡವು ಆತನನ್ನು ಕಸ್ಟಡಿಗೆ ತೆಗೆದುಕೊಂಡಿತು.

ಹಗರಣದಿಂದ ಬಂದ ಹಣವನ್ನು ಬೇರೆಡೆಗೆ ತಿರುಗಿಸಲು ನೂರಾರು ಸಂಶಯಾಸ್ಪದ ಬ್ಯಾಂಕ್ ಖಾತೆಗಳನ್ನು ತೆರೆಯಲು ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರಿಗೆ ಸಹಾಯ ಮಾಡಿದ ಆರೋಪ ಬಂಧಿತ ಮೃಗಾಂಕ್ ಮಿಶ್ರಾ ಮೇಲಿದೆ. ಅಲ್ಲಿ ಆತ ಮಹಾದೇವ್ ಅಪ್ಲಿಕೇಶನ್ ವಿಷಯಕ್ಕೆ ಸಂಬಂಧಿಸಿದಂತೆ ವಂಚನೆ ಮತ್ತು ಫೋರ್ಜರಿ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಆತನ ವಿರುದ್ಧ ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

25ವರ್ಷದ ಮೃಗಾಂಕ್ ಮಿಶ್ರಾನನ್ನು ಶನಿವಾರ ದುಬೈನಿಂದ ಬಂದ ನಂತರ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಬಂಧಿಸಿ ಮುಂಬೈನ ಸಹರ್ ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಜಸ್ಥಾನದ ಪ್ರತಾಪ್‌ಗಢ ಪೊಲೀಸರ ತಂಡ ಭಾನುವಾರ ಮುಂಬೈಗೆ ಬಂದು ಆತನನ್ನು ವಶಕ್ಕೆ ಪಡೆದು ಬಂಧನಕ್ಕೆ ಒಳಪಡಿಸಿದೆ ಎಂದು ಅವರು ಹೇಳಿದರು.

ಬೆಟ್ಟಿಂಗ್‌ನಿಂದ ಬಂದ ಹಣವನ್ನು ಬೇರೆಡೆಗೆ ತಿರುಗಿಸಲು ನೂರಾರು ಸಂಶಯಾಸ್ಪದ ಬ್ಯಾಂಕ್ ಖಾತೆಗಳನ್ನು ತೆರೆಯಲು ಮಹದೇವ್ ಆ್ಯಪ್ ಪ್ರವರ್ತಕರಿಗೆ ಮಿಶ್ರಾ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸರ್ಕಾರದ ವಿವಿಧ ಯೋಜನೆಗಳಿಂದ ಹಣವನ್ನು ಪಡೆಯುವುದಾಗಿ ಭರವಸೆ ನೀಡಿದ ನಂತರ ಅವರು ಸಾಮಾನ್ಯ ಜನರ ಹೆಸರಿನಲ್ಲಿ ಈ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ಮೂಲತಃ ಮಧ್ಯಪ್ರದೇಶದ ರತ್ಲಾಮ್‌ ನಿವಾಸಿಯಾದ ಮಿಶ್ರಾ ಕಳೆದ ಕೆಲವು ತಿಂಗಳುಗಳಿಂದ ಗಲ್ಫ್ ನಗರದಲ್ಲಿ ತಲೆಮರೆಸಿಕೊಂಡಿದ್ದ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com