ಗಾಜಾದಲ್ಲಿ ನಾಲ್ವರು, ವೆಸ್ಟ್ ಬ್ಯಾಂಕ್ ನಲ್ಲಿ 12-13 ಭಾರತೀಯರು ಸಿಲುಕಿದ್ದಾರೆ: ಕೇಂದ್ರ

'ಆಪರೇಷನ್ ಅಜಯ್' ಅಡಿಯಲ್ಲಿ 18 ನೇಪಾಳಿ ಪ್ರಜೆಗಳು ಸೇರಿದಂತೆ ಸುಮಾರು 1,200 ಭಾರತೀಯರನ್ನು ಇಸ್ರೇಲ್‌ನಿಂದ ಕರೆತರಲಾಗಿದೆ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಹೆಚ್ಚಿನ ವಿಮಾನಗಳನ್ನು ನಿಯೋಜಿಸಲಾಗುವುದು...
ಸ್ಫೋಟಗೊಂಡ ಗಾಜಾ ಆಸ್ಪತ್ರೆಯ ಆವರಣ
ಸ್ಫೋಟಗೊಂಡ ಗಾಜಾ ಆಸ್ಪತ್ರೆಯ ಆವರಣ

ನವದೆಹಲಿ: 'ಆಪರೇಷನ್ ಅಜಯ್' ಅಡಿಯಲ್ಲಿ 18 ನೇಪಾಳಿ ಪ್ರಜೆಗಳು ಸೇರಿದಂತೆ ಸುಮಾರು 1,200 ಭಾರತೀಯರನ್ನು ಇಸ್ರೇಲ್‌ನಿಂದ ಕರೆತರಲಾಗಿದೆ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಹೆಚ್ಚಿನ ವಿಮಾನಗಳನ್ನು ನಿಯೋಜಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.

ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಅವರು, 18 ನೇಪಾಳಿ ಪ್ರಜೆಗಳು ಸೇರಿದಂತೆ ಆಪರೇಷನ್ ಅಜಯ್ ಅಡಿಯಲ್ಲಿ ಐದು ವಿಮಾನಗಳಲ್ಲಿ 1,200 ಭಾರತೀಯರು ದೇಶಕ್ಕೆ ಹಿಂತಿರುಗಿದ್ದಾರೆ... ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

"ಅದೃಷ್ಟವಶಾತ್ ಯಾವುದೇ ಸಾವಿನ ಬಗ್ಗೆ ವರದಿಯಾಗಿಲ್ಲ.... ಒಬ್ಬ ಭಾರತೀಯ ಪ್ರಜೆ ಗಾಯಗೊಂಡಿದ್ದಾರೆ ಮತ್ತು ಅವರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಈಗ ಸ್ಥಿರವಾಗಿದೆ" ಎಂದು ಬಾಗ್ಚಿ ಮಾಹಿತಿ ನೀಡಿದ್ದಾರೆ.

ಗಾಜಾದಲ್ಲಿ ನಾಲ್ಕು ಭಾರತೀಯ ಪ್ರಜೆಗಳು ಮತ್ತು ವೆಸ್ಟ್ ಬ್ಯಾಂಕ್ ನಲ್ಲಿ 12-13 ಭಾರತೀಯ ಪ್ರಜೆಗಳು ಸಿಲುಕಿದ್ದಾರೆ ಎಂದು ಅವರು ಹೇಳಿದ್ದಾರೆ.

"ಗಾಜಾದಲ್ಲಿ ಸುಮಾರು ನಾಲ್ವರು ಭಾರತೀಯ ಪ್ರಜೆಗಳಿದ್ದಾರೆ... ನಮ್ಮಲ್ಲಿ ನಿಖರವಾದ ಸಂಖ್ಯೆ ಇಲ್ಲ. ಅವರೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ. ವೆಸ್ಟ್ ಬ್ಯಾಂಕ್‌ನಲ್ಲಿ 12-13 ಭಾರತೀಯ ಪ್ರಜೆಗಳಿದ್ದಾರೆ... ಗಾಜಾದಿಂದ ಹೊರಬರುವುದು ಸ್ವಲ್ಪ ಕಷ್ಟ. ಕೆಲವರು ಈಗಾಗಲೇ ಅಲ್ಲಿಂದ ಹೊರಬಂದಿದ್ದಾರೆ. ಆದರೆ ದೃಢೀಕರಣಕ್ಕಾಗಿ ನಾವು ಕಾಯುತ್ತೇವೆ" ಎಂದು ಬಾಗ್ಚಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com