ಗುಜರಾತ್‌ನ 'ಧೋರ್ಡೊ' ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ: ಪ್ರಧಾನಿ ಮೋದಿ ಶ್ಲಾಘನೆ

ಗುಜರಾತ್‌ನ ಕಛ್ ಜಿಲ್ಲೆಯ ಧೋರ್ಡೊ ಗ್ರಾಮವನ್ನು ‘ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ’ ಎಂದು ವಿಶ್ವ ವ್ಯಾಪಾರ ಸಂಘಟನೆಯು(ಡಬ್ಲ್ಯುಟಿಒ) ಗುರುತಿಸಿದ್ದು, ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಗುಜರಾತ್‌ನ ಧೋರ್ಡೊ ‘ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ’
ಗುಜರಾತ್‌ನ ಧೋರ್ಡೊ ‘ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ’

ನವದೆಹಲಿ: ಗುಜರಾತ್‌ನ ಕಛ್ ಜಿಲ್ಲೆಯ ಧೋರ್ಡೊ ಗ್ರಾಮವನ್ನು ‘ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ’ ಎಂದು ವಿಶ್ವ ವ್ಯಾಪಾರ ಸಂಘಟನೆಯು(ಡಬ್ಲ್ಯುಟಿಒ) ಗುರುತಿಸಿದ್ದು, ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ, ಧೋರ್ಡೊ ಹಳ್ಳಿಯನ್ನು ‘ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ’ ಎಂದು ಡಬ್ಲ್ಯುಟಿಒ ಗುರುತಿಸಿದೆ. ಸುಸ್ಥಿರ ಅಭಿವೃದ್ಧಿಗಾಗಿ ಪ್ರವಾಸೋದ್ಯಮವನ್ನು ಡಬ್ಲ್ಯುಟಿಒ ಉತ್ತೇಜಿಸುವ ಸಂಸ್ಥೆಯಾಗಿದೆ.

ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (ಯುಎನ್‌ಡಬ್ಲ್ಯುಟಿಒ) ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಎಂಬ ಪ್ರಶಸ್ತಿಗೆ ಗುಜರಾತ್‌ನ ಕಚ್ ಜಿಲ್ಲೆಯ ಧೋರ್ಡೊ ಗ್ರಾಮವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.  

ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, "ಗುಜರಾತ್‌ನ ಧೋರ್ಡೊವನ್ನು UNWTO 'ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ' ಎಂದು ಘೋಷಿಸಿದೆ. ಇದು ಪ್ರದೇಶದ ಪ್ರವಾಸೋದ್ಯಮ ಸಾಮರ್ಥ್ಯಕ್ಕೆ ಮಹತ್ವದ ಮನ್ನಣೆಯಾಗಿದೆ. ಇದು ಕಚ್‌ನ ಸೌಂದರ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ" ಎಂದು  ಪೋಸ್ಟ್ ಮಾಡಿದ್ದಾರೆ. ಈ ಗೌರವವು ಭಾರತೀಯ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಮಾತ್ರವಲ್ಲದೆ ಕಚ್‌ನ ಜನರ ಸಮರ್ಪಣೆಯನ್ನೂ ತೋರಿಸುತ್ತದೆ ಎಂದಿದ್ದಾರೆ.

ಉತ್ತಮ ರಸ್ತೆಗಳು, ನೀರು ಮತ್ತು ಇತರ ಸೌಲಭ್ಯ ಹಾಗೂ ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ರಚನಾತ್ಮಕ ಪ್ರಯತ್ನಗಳು ಅಂತಿಮವಾಗಿ ಫಲ ನೀಡಿರುವುದನ್ನು ನೋಡುವುದು ಹರ್ಷದಾಯಕವಾಗಿದೆ. ಈ ಗೌರವವು ನಮ್ಮ ಅಗಾಧ ಪ್ರವಾಸೋದ್ಯಮ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಪ್ರವಾಸೋದ್ಯಮ ಸಚಿವಾಲಯದ ಮಹಾನಿರ್ದೇಶಕ ಮನೀಶಾ ಸಕ್ಸೇನಾ ಅವರು ಧೋರ್ಡೊ ಪರವಾಗಿ ಟ್ರೋಫಿ ಸ್ವೀಕರಿಸಿದ್ದಾರೆ.

ಪ್ರಪಂಚದಾದ್ಯಂತ ಒಟ್ಟು 26 ಹಳ್ಳಿಗಳು "ಪೋಷಣೆಗಾಗಿ" ಈ ವರ್ಷ ಪುರಸ್ಕಾರಗಳನ್ನು ಗಳಿಸಿವೆ. ಗ್ರಾಮೀಣ ಪ್ರದೇಶಗಳು ಮತ್ತು ಭೂದೃಶ್ಯಗಳು, ಸಾಂಸ್ಕೃತಿಕ ವೈವಿಧ್ಯತೆ, ಸ್ಥಳೀಯ ಮೌಲ್ಯಗಳು ಮತ್ತು ಪಾಕಶಾಲೆಯ ಸಂಪ್ರದಾಯಗಳನ್ನು ಸಂರಕ್ಷಿಸುವುದು ಇದರಲ್ಲಿ ಸೇರಿವೆ. ಪಟ್ಟಿಯಲ್ಲಿ ಆಸ್ಟ್ರಿಯಾ, ಪೋರ್ಚುಗಲ್, ತುರ್ಕಿಯೆ, ಹಂಗೇರಿ, ಇಂಡೋನೇಷಿಯಾ, ಈಜಿಪ್ಟ್ ಮತ್ತು ಚೀನಾದ ಹಳ್ಳಿಗಳು ಸೇರಿವೆ. ಭಾರತದಿಂದ ಆಯ್ಕೆಯಾದ ಏಕೈಕ ಗ್ರಾಮ ಧೋರ್ಡೊ.

ಈ ವರ್ಷ, ಸುಮಾರು 260 ಅರ್ಜಿಗಳು ಬಂದಿದ್ದವು. ಇವುಗಳಲ್ಲಿ 54 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಇನ್ನೂ 20 ಹಳ್ಳಿಗಳು ಅಪ್‌ಗ್ರೇಡ್ ಪ್ರೋಗ್ರಾಂಗೆ ಸೇರಿಕೊಂಡಿವೆ ಮತ್ತು ಎಲ್ಲಾ 74 ಹಳ್ಳಿಗಳು ಈಗ UNWTO ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮಗಳ ಜಾಲದ ಭಾಗವಾಗಿದೆ. ಈ ವಾರ ಉಜ್ಬೇಕಿಸ್ತಾನ್‌ನ ಸಮರ್‌ಕಂಡ್‌ನಲ್ಲಿ ನಡೆಯುತ್ತಿರುವ UNWTO ಜನರಲ್ ಅಸೆಂಬ್ಲಿಯಲ್ಲಿ ಗ್ರಾಮಗಳ ಹೆಸರನ್ನು ಘೋಷಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com