ತನಗೆ ಮೋಸ ಮಾಡಿದ ವ್ಯಕ್ತಿಗೆ ಪಕ್ಷ ಬೆಂಬಲ; 25 ವರ್ಷಗಳ ಬಿಜೆಪಿ ಸಖ್ಯ ತೊರೆದ ಖ್ಯಾತ ನಟಿ ಗೌತಮಿ ತಡಿಮಲ್ಲ!

ಖ್ಯಾತ ನಟಿ ಗೌತಮಿ ತಡಿಮಲ್ಲ ಅವರು ಸೋಮವಾರ ಬಿಜೆಪಿಯೊಂದಿಗಿನ ತಮ್ಮ 25 ವರ್ಷಗಳ ಒಡನಾಟವನ್ನು ಕೊನೆಗೊಳಿಸುತ್ತಿರುವುದಾಗಿ ಹೇಳಿದ್ದಾರೆ. ಪಕ್ಷದ ಒಂದು ವಿಭಾಗದಿಂದ ತನಗೆ ಮೋಸ ಮಾಡಿದ ವ್ಯಕ್ತಿಗೆ ಬೆಂಬಲ ಸಿಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಗೌತಮಿ ತಡಿಮಲ್ಲ
ಗೌತಮಿ ತಡಿಮಲ್ಲ
Updated on

ಚೆನ್ನೈ: ಖ್ಯಾತ ನಟಿ ಗೌತಮಿ ತಡಿಮಲ್ಲ ಅವರು ಸೋಮವಾರ ಬಿಜೆಪಿಯೊಂದಿಗಿನ ತಮ್ಮ 25 ವರ್ಷಗಳ ಒಡನಾಟವನ್ನು ಕೊನೆಗೊಳಿಸುತ್ತಿರುವುದಾಗಿ ಹೇಳಿದ್ದಾರೆ. ಪಕ್ಷದ ಒಂದು ವಿಭಾಗದಿಂದ ತನಗೆ ಮೋಸ ಮಾಡಿದ ವ್ಯಕ್ತಿಗೆ ಬೆಂಬಲ ಸಿಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

2021ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡುವ ಭರವಸೆಯನ್ನು ಪಕ್ಷ ನೀಡಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. ಹೀಗಿದ್ದರೂ, ನಾನು ಬಿಜೆಪಿಗೆ ಬದ್ಧವಾಗಿದ್ದೆ ಎಂದು ತಡಿಮಲ್ಲ ಅವರು ಟ್ವೀಟ್‌ನಲ್ಲಿ ಲಗತ್ತಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ಭಾರವಾದ ಹೃದಯ ಮತ್ತು ಭ್ರಮನಿರಸನ'ದಿಂದ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ' ಎಂದಿರುವ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಬಿಜೆಪಿ ತಮಿಳು ನಾಡು ಮುಖ್ಯಸ್ಥ ಕೆ ಅಣ್ಣಾಮಲೈ ಸೇರಿದಂತೆ ಇತರರನ್ನು ಟ್ಯಾಗ್ ಮಾಡಿದ್ದಾರೆ.

'ನಿರ್ದಿಷ್ಟ ವ್ಯಕ್ತಿಯೊಬ್ಬರು 'ನನ್ನ ಹಣ, ಆಸ್ತಿ ಮತ್ತು ದಾಖಲೆಗಳನ್ನು ವಂಚಿಸಿದ್ದಾರೆ'. ನನಗೆ ಪಕ್ಷ ಮತ್ತು ಮುಖಂಡರಿಂದ ಯಾವುದೇ ಬೆಂಬಲ ಸಿಗುತ್ತಿಲ್ಲ. ಆದರೆ, ಅವರಲ್ಲಿ ಹಲವರು ನನ್ನ ನಂಬಿಕೆಗೆ ದ್ರೋಹ ಮಾಡಿದ ಮತ್ತು ಮೋಸ ಮಾಡಿದ ವ್ಯಕ್ತಿಗೆ ಸಹಾಯ ಮತ್ತು ಬೆಂಬಲ ನೀಡುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ' ಎಂದು ಅವರು ವಿವರವಾದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತನಗಾದ ವಂಚನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿದ್ದು, ತನಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಹೇಳಿದ್ದಾರೆ.

2021ರ ಚುನಾವಣೆಯ ಸಮಯದಲ್ಲಿ ರಾಜಪಾಳ್ಯಂ ಕ್ಷೇತ್ರದ ಅಭಿವೃದ್ಧಿಯನ್ನು ತನಗೆ ವಹಿಸಲಾಗಿತ್ತು ಮತ್ತು ಅಲ್ಲಿಂದಲೇ ತನ್ನನ್ನು ಕಣಕ್ಕಿಳಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಟಿಕೆಟ್ ಅನ್ನು ಕೈತಪ್ಪಿಸಲಾಗಿದೆ. ಆಗಲೂ, ನಾನು ಪಕ್ಷಕ್ಕಾಗಿ ದುಡಿದೆ. ಬಳಿಕ ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ನಾನು ಕೆಲಸ ಮಾಡಿದ್ದೇನೆ. ಆದರೆ, ಪಕ್ಷಕ್ಕೆ 25 ವರ್ಷ ಸೇವೆ ಸಲ್ಲಿಸಿದರೂ, ನನಗೆ ಯಾವುದೇ ಬೆಂಬಲ ಸಿಲುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಎಫ್‌ಐಆರ್‌ ದಾಖಲಿಸಿದ ನಂತರವೂ, ಕಳೆದ 40 ದಿನಗಳಿಂದ ತನಗೆ ವಂಚಿಸಿದ ವ್ಯಕ್ತಿ ತಪ್ಪಿಸಿಕೊಳ್ಳಲು ಪಕ್ಷದ ಹಲವಾರು ಹಿರಿಯ ಸದಸ್ಯರು ಸಹಾಯ ಮಾಡುತ್ತಿದ್ದಾರೆ. ತಾನು ರಾಜೀನಾಮೆ ಪತ್ರವನ್ನು 'ಅತ್ಯಂತ ನೋವು ಮತ್ತು ದುಃಖದಿಂದ ಬರೆಯುತ್ತಿದ್ದೇನೆ. ಆದರೆ, ಬಹಳ ದೃಢವಾದ ಸಂಕಲ್ಪದಿಂದ ಬರೆಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com