ತಮಿಳುನಾಡಿನಲ್ಲಿ ರೈಲಿಗೆ ಸಿಲುಕಿ ಕರ್ನಾಟಕದ ಮೂವರು ವಿಕಲಚೇತನ ಮಕ್ಕಳು ಸಾವು!

ಮಂಗಳವಾರ ನಗರದ ಹೊರವಲಯದ ಉರಪಕ್ಕಂ ಬಳಿ ಇಬ್ಬರು ಸಹೋದರರು ಸೇರಿದಂತೆ ಮೂವರು ವಿಕಲಚೇತನ ಮಕ್ಕಳು ಉಪನಗರ ರೈಲಿಗೆ ಸಿಲುಕಿ ಸಾವಿಗೀಡಾಗಿರುವ ದಾರುಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಮಂಗಳವಾರ ನಗರದ ಹೊರವಲಯದ ಉರಪಕ್ಕಂ ಬಳಿ ಇಬ್ಬರು ಸಹೋದರರು ಸೇರಿದಂತೆ ಮೂವರು ವಿಕಲಚೇತನ ಮಕ್ಕಳು ಉಪನಗರ ರೈಲಿಗೆ ಸಿಲುಕಿ ಸಾವಿಗೀಡಾಗಿರುವ ದಾರುಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಮೃತರು 11 ರಿಂದ 15 ವರ್ಷದೊಳಗಿನ ಮಕ್ಕಳಾಗಿದ್ದು, ಕರ್ನಾಟಕದವರು. ಮೃತರನ್ನು ಸುರೇಶ್ (15), ಮತ್ತು ಅವರ ಸಹೋದರ ರವಿ (12) ಮತ್ತು ಮಂಜುನಾಥ್ (11) ಎಂದು ಗುರುತಿಸಲಾಗಿದೆ.

ರೈಲು ಬರುವುದನ್ನು ಗಮನಿಸಿದೆ ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

'ಮೂವರಲ್ಲಿ ಇಬ್ಬರು ಸಹೋದರರು ಕಿವುಡ ಮತ್ತು ಮೂಗರಾಗಿದ್ದರು ಮತ್ತು ಮೂರನೆಯವನಿಗೆ ಮಾತು ಬರುತ್ತಿರಲಿಲ್ಲ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಅವರ ಪೋಷಕರು ಚೆನ್ನೈನಲ್ಲಿ ದಿನಗೂಲಿ ನೌಕರರಾಗಿದ್ದರು. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com