ಭಾರತ ಬದಲಾಗುವ ಭರವಸೆ ಇತ್ತು, ಆದರೆ ಹೆಸರುಗಳು ಮಾತ್ರ ಬದಲಾಗುತ್ತಿದೆ: ಸಿಎಂ ಎಂಕೆ ಸ್ಟಾಲಿನ್

'INDIA'ವನ್ನು 'ಭಾರತ' ಎಂದು ಬದಲಾಯಿಸಲು ಬಿಜೆಪಿ ಬಯಸಿದೆ ಎಂದು ಆರೋಪಿಸಿರುವ ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಕೇಸರಿ ಪಕ್ಷವು ವಿರೋಧ ಪಕ್ಷದ ಹೆಸರಾದ 'ಇಂಡಿಯಾ' ಎಂಬ ಪದದಿಂದ ಕೆರಳಿದೆ ಎಂದು ಹೇಳಿದ್ದಾರೆ.
ಎಂಕೆ ಸ್ಟಾಲಿನ್
ಎಂಕೆ ಸ್ಟಾಲಿನ್

ಚೆನ್ನೈ: 'INDIA'ವನ್ನು 'ಭಾರತ' ಎಂದು ಬದಲಾಯಿಸಲು ಬಿಜೆಪಿ ಬಯಸಿದೆ ಎಂದು ಆರೋಪಿಸಿರುವ ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಕೇಸರಿ ಪಕ್ಷವು ವಿರೋಧ ಪಕ್ಷದ ಹೆಸರಾದ 'ಇಂಡಿಯಾ' ಎಂಬ ಪದದಿಂದ ಕೆರಳಿದೆ ಎಂದು ಹೇಳಿದ್ದಾರೆ.

ಫ್ಯಾಸಿಸ್ಟ್ ಬಿಜೆಪಿ ಆಡಳಿತವನ್ನು ಕಿತ್ತೊಗೆಯಲು ಬಿಜೆಪಿಯೇತರ ಶಕ್ತಿಗಳು ಒಂದಾದ ನಂತರ ಮತ್ತು ಅವರ ಮೈತ್ರಿಗೆ ಸೂಕ್ತವಾಗಿ #INDIA ಎಂದು ಹೆಸರಿಸಿದ ನಂತರ, ಈಗ ಬಿಜೆಪಿ 'INDIA'ವನ್ನು 'ಭಾರತ' ಎಂದು ಬದಲಾಯಿಸಲು ಬಯಸಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.

'ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಬದಲಾಯಿಸುವ ಬಿಜೆಪಿ ಭರವಸೆ ನೀಡಿತ್ತು. ಆದರೆ ನಮಗೆ ಸಿಕ್ಕಿದ್ದು 9 ವರ್ಷಗಳ ನಂತರ ಸಿಕ್ಕಿದ್ದು ಬರೀ ಹೆಸರು ಬದಲಾವಣೆ ಟ್ವೀಟ್ ಮಾಡಿದ್ದಾರೆ.

'ಇಂಡಿಯಾ' ಎಂಬ ಒಂದೇ ಪದ ಬಿಜೆಪಿಯ ನಿದ್ದೆ ಕೆಡಿಸಿದಂತೆ ತೋರುತ್ತಿದೆ. ಏಕೆಂದರೆ ಅವರು ವಿರೋಧದೊಳಗಿನ ಒಗ್ಗಟ್ಟಿನ ಶಕ್ತಿಯನ್ನು ಗುರುತಿಸುತ್ತಾರೆ. ಚುನಾವಣೆಯ ಸಮಯದಲ್ಲಿ, 'INDIA' ಬಿಜೆಪಿಯನ್ನು ಅಧಿಕಾರದಿಂದ ಓಡಿಸುತ್ತದೆ! #IndiaStaysIndia," ಅವರು ಹೇಳಿದರು.

ಏತನ್ಮಧ್ಯೆ, ಸ್ಟಾಲಿನ್ ಅವರ ಸಹೋದರಿ ಮತ್ತು ಡಿಎಂಕೆ ಲೋಕಸಭಾ ಸಂಸದ ಕನಿಮೊಳಿ ಅವರು ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಉದ್ದೇಶಿತ ಆಹ್ವಾನದ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com