ಜಿ-20 ಶೃಂಗಸಭೆ: ಚೀನಾ ನಿಯೋಗದ ವಿರುದ್ಧ ಟಿಬೆಟಿಯನ್ನರ ಪ್ರತಿಭಟನೆ!

ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಚೀನಾದ ನಿಯೋಗದ ವಿರುದ್ಧ ಟಿಬೆಟಿಯನ್ನರು ಪ್ರತಿಭಟನೆ ನಡೆಸಿದರು.
ಟಿಬೆಟಿಯನ್ನರ ಪ್ರತಿಭಟನೆ
ಟಿಬೆಟಿಯನ್ನರ ಪ್ರತಿಭಟನೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಚೀನಾದ ನಿಯೋಗದ ವಿರುದ್ಧ ಟಿಬೆಟಿಯನ್ನರು ಪ್ರತಿಭಟನೆ ನಡೆಸಿದರು.

ಉತ್ತರ ದಿಲ್ಲಿಯ ಮಜ್ನು ಕಾ ತಿಲಾದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಚೀನಾ ಸರ್ಕಾರದ ವಿರುದ್ಧ ಬ್ಯಾನರ್ ಹಿಡಿದು, ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ನಂತರ ಅಲ್ಲಿಗೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದರು. ಪ್ರತಿಭಟನೆ ಶಾಂತಿಯುತವಾಗಿತ್ತು ಎಂದು ಪೊಲೀಸರು ತಿಳಿಸಿದರು.
 

ಟಿಬೆಟ್‌ನಲ್ಲಿ ಚೀನಾದ ಕಾನೂನುಬಾಹಿರ ಆಕ್ರಮಣದ ವಿರುದ್ಧ ಟಿಬೆಟ್ ಯುವ ಕಾಂಗ್ರೆಸ್ ಅಧ್ಯಕ್ಷ ಗೊನ್ಪೊ ಧುಂಡಪ್  ಗುರುವಾರ ಪ್ರತಿಭಟನೆ ಘೋಷಿಸಿದ್ದರು. ಟಿಬೆಟ್‌ನಲ್ಲಿನ ಕಠಿಣ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಶುಕ್ರವಾರ ಚೀನಾ ನಿಯೋಗ ಬಂದಾಗ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರು. ಆದ್ದರಿಂದ  ಮುಂಚಿತವಾಗಿ ಬ್ಯಾರಿಕೇಡ್ ಹಾಕಿ, ಪೊಲೀಸರು ಅರೆಸೇನಾ ಪಡೆಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com