ಭಾರತ ಆಯೋಜನೆಯ ಜಿ-20 ಶೃಂಗಸಭೆ ಯಶಸ್ಸಿಗೆ ಎಲ್ಲಾ ರಾಷ್ಟ್ರಗಳೊಂದಿಗೆ ಶ್ರಮಿಸಲು ಸಿದ್ಧ: ಚೀನಾ

ಈ ಬಾರಿ ಜಿ 20 ಶೃಂಗಸಭೆ ಆಯೋಜಿಸುತ್ತಿರುವ ಭಾರತವನ್ನು ಬೆಂಬಲಿಸುವುದಾಗಿ ಚೀನಾ ಮಂಗಳವಾರ ಹೇಳಿದೆ. ನವದೆಹಲಿಯಲ್ಲಿ ಈ ವಾರದಿಂದ ನಡೆಯಲಿರುವ ಉನ್ನತ ಮಟ್ಟದ ಜಾಗತಿಕ ಸಮ್ಮೇಳನದ ಯಶಸ್ಸಿಗಾಗಿ ಎಲ್ಲಾ ರಾಷ್ಟ್ರಗಳೊಂದಿಗೆ ಶ್ರಮಿಸಲು ಸಿದ್ಧವಾಗಿರುವುದಾಗಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್: ಈ ಬಾರಿ ಜಿ 20 ಶೃಂಗಸಭೆ ಆಯೋಜಿಸುತ್ತಿರುವ ಭಾರತವನ್ನು ಬೆಂಬಲಿಸುವುದಾಗಿ ಚೀನಾ ಮಂಗಳವಾರ ಹೇಳಿದೆ. ನವದೆಹಲಿಯಲ್ಲಿ ಈ ವಾರದಿಂದ ನಡೆಯಲಿರುವ ಉನ್ನತ ಮಟ್ಟದ ಜಾಗತಿಕ ಸಮ್ಮೇಳನದ ಯಶಸ್ಸಿಗಾಗಿ ಎಲ್ಲಾ ರಾಷ್ಟ್ರಗಳೊಂದಿಗೆ ಶ್ರಮಿಸಲು ಸಿದ್ಧವಾಗಿರುವುದಾಗಿ ತಿಳಿಸಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಬದಲಿಗೆ ಪ್ರೀಮಿಯರ್ ಲಿ ಕಿಯಾಂಗ್ ಜಿ 20 ಶೃಂಗಸಭೆಯಲ್ಲಿ ತಮ್ಮ ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಘೋಷಿಸಿದ ಒಂದು ದಿನದ ನಂತರ ಚೀನಾ ವಕ್ತಾರರು ಸುದ್ದಿಗಾರರಿಗೆ ಹೀಗೆ ತಿಳಿಸಿದರು. 

ಇದೇ ತಿಂಗಳ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆ ಸಮಾವೇಶ ಜಾಗತಿಕ ಆರ್ಥಿಕ ಸಹಕಾರಕ್ಕೆ ಪ್ರಮುಖ ವೇದಿಕೆಯಾಗಲಿದೆ. ಚೀನಾ-ಭಾರತ ಸಂಬಂಧಗಳು ಒಟ್ಟಾರೆಯಾಗಿ ಸ್ಥಿರವಾಗಿವೆ. ವಿವಿಧ ಹಂತಗಳಲ್ಲಿ ಉಭಯ ರಾಷ್ಟ್ರಗಳು ಸಂಭಾಷಣೆ ಹಾಗೂ ಸಂವಹನ ನಡೆಸುತ್ತಿರುವುದಾಗಿ ಅವರು ಗಡಿ ವಿವಾದವನ್ನು ಉಲ್ಲೇಖಿಸದೆ ತಿಳಿಸಿದರು.

ಮುಂದುವರೆದ ಚೀನಾ-ಭಾರತ ಸಂಬಂಧಗಳು ಉಭಯ ದೇಶ ಮತ್ತು ಜನರ ಸಾಮಾನ್ಯ ಹಿತಾಸಕ್ತಿಗಳನ್ನು ಪೂರೈಸುತ್ತದೆ. ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಸುಧಾರಿಸಲು ಮತ್ತು ಮುನ್ನಡೆಸಲು ನಾವು ಭಾರತದೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.

ಜೂನ್ 2020 ರಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಮಾರಣಾಂತಿಕ ಘರ್ಷಣೆಯಿಂದ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ತೀವ್ರ ಹದಗೆಟ್ಟಿತ್ತು. ವ್ಯಾಪಕವಾದ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ನಂತರ ಉಭಯ ರಾಷ್ಟ್ರಗಳು ಹಲವಾರು ಪ್ರದೇಶಗಳಿಂದ ಸೇನೆಯನ್ನು ಹಿಂತೆಗೆದುಕೊಂಡರೂ ಪೂರ್ವ ಲಡಾಖ್‌ನ ಕೆಲವು ಘರ್ಷಣೆಯ ಬಿಂದುಗಳಲ್ಲಿನ ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ. ಪ್ರೀಮಿಯರ್ ಲಿ ಅವರು  ಸೆಪ್ಟೆಂಬರ್ 5 ರಿಂದ 8 ರವರೆಗೆ ಇಂಡೋನೇಷ್ಯಾದಲ್ಲಿ ನಡೆಯಲಿರುವ ಆಸಿಯಾನ್ ಶೃಂಗಸಭೆಯಲ್ಲಿ ಚೀನಾವನ್ನು ಪ್ರತಿನಿಧಿಸಲಿದ್ದಾರೆ .ಜಕಾರ್ತದಲ್ಲಿ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಅವರು ಭಾರತಕ್ಕೆ ಪ್ರಯಾಣಿಸಲಿದ್ದಾರೆ.

ಯುಎಸ್ ಅಧ್ಯಕ್ಷ ಜೋ ಬಿಡೆನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಯುಕೆ ಪ್ರಧಾನಿ ರಿಷಿ ಸುನಕ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಮತ್ತಿತರ ಜಿ-20 ನಾಯಕರು ಜಿ-20 ಶೃಂಗಸಭೆಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com