G20 ಶೃಂಗಸಭೆ: ವಿಶ್ವ ನಾಯಕರಿಗೆ ವಿಶೇಷ ಔತಣಕೂಟ, ಪಕ್ಕಾ ಭಾರತೀಯ ಶೈಲಿಯ ಸಸ್ಯಾಹಾರಿ ಖಾದ್ಯಗಳು!

ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ G20 ಶೃಂಗಸಭೆಯಲ್ಲಿ ಬೆಳಗ್ಗಿನಿಂದಲೂ ಸತತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ವಿಶ್ವ ನಾಯಕರಿಗೆ ರಾತ್ರಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ವಿಶೇಷ ಔತಣಕೂಟ ಏರ್ಪಡಿಸಿದ್ದು, ಈ ಔತಣಕೂಟದ ವಿಶೇಷ ತಿನಿಸುಗಳ ಪಟ್ಟಿ ಇದೀಗ ಬಹಿರಂಗಗೊಂಡಿದೆ.
ಔತಣಕೂಟಕ್ಕೆ ಆಗಮಿಸಿದ ಬ್ರಿಟನ್ ಪ್ರಧಾನಿ ಸುನಕ್ ದಂಪತಿಗಳನ್ನು ಆಹ್ವಾನಿಸಿದ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಮುರ್ಮು
ಔತಣಕೂಟಕ್ಕೆ ಆಗಮಿಸಿದ ಬ್ರಿಟನ್ ಪ್ರಧಾನಿ ಸುನಕ್ ದಂಪತಿಗಳನ್ನು ಆಹ್ವಾನಿಸಿದ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಮುರ್ಮು

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ G20 ಶೃಂಗಸಭೆಯಲ್ಲಿ ಬೆಳಗ್ಗಿನಿಂದಲೂ ಸತತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ವಿಶ್ವ ನಾಯಕರಿಗೆ ರಾತ್ರಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ವಿಶೇಷ ಔತಣಕೂಟ ಏರ್ಪಡಿಸಿದ್ದು, ಈ ಔತಣಕೂಟದ ವಿಶೇಷ ತಿನಿಸುಗಳ ಪಟ್ಟಿ ಇದೀಗ ಬಹಿರಂಗಗೊಂಡಿದೆ.

ಹೌದು...  ಜಿ20 ಶೃಂಗಸಭೆಯ ಶನಿವಾರದ ಕಾರ್ಯಕ್ರಮಗಳು, ಸಭೆಗಳ ಮುಕ್ತಾಯದ  ಬಳಿಕ  ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ನಾಯಕರು ಮತ್ತು ಪ್ರತಿನಿಧಿಗಳಿಗಾಗಿ ದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ವಿಶೇಷ ಔತಣಕೂಟ ಏರ್ಪಡಿಸಿದ್ದಾರೆ. ರಾತ್ರಿ  ಭವ್ಯ ಭೋಜನಕೂಟಕ್ಕೆ ನಾಯಕರನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು. 

ಜಿ20 ರಾಷ್ಟ್ರಗಳ ನಾಯಕರಿಗೆ ದೆಹಲಿಯ ‘ಭಾರತ್ ಮಂಟಪಂ’ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಔತಣಕೂಟ ಏರ್ಪಡಿಸಿದ್ದು, ವೆಲ್​ಕಮ್ ಡ್ರಿಂಕ್ಸ್ ನೀಡಲು ಸ್ವರ್ಣಲೇಪಿತ ವಸ್ತುಗಳ ಬಳಕೆ ಮಾಡಲಾಗಿದೆ. 200 ಕುಶಲಕರ್ಮಿಗಳು ಸಿದ್ಧಪಡಿಸಿರುವ 15,000 ಬೆಳ್ಳಿ ವಸ್ತುಗಳ ಬಳಕೆ ಮಾಡಿದ್ದು, ಭಾರತದ ಪಾಕಶಾಲೆಯ ವೈವಿಧ್ಯತೆ ಪ್ರತಿಬಿಂಬಿಸಲಿದೆ ಔತಣಕೂಟ.

ಜಿ20 ನಾಯಕರು ಮತ್ತು ಪ್ರತಿನಿಧಿಗಳಿಗಾಗಿ ಔತಣಕೂಟದಲ್ಲಿ ಸೊಗಸಾದ ಭಾರತೀಯ ಸಸ್ಯಾಹಾರಿ ಆಹಾರಗಳನ್ನು ತಯಾರಿಸಲಾಗಿದ್ದು, ಔತಣಕೂಟದಲ್ಲಿ ವಿಶ್ವ ನಾಯಕರಿಗಾಗಿ ಯಾವೆಲ್ಲಾ ಆಹಾರ ಪದಾರ್ಥಗಳನ್ನು ಸಿದ್ದಪಡಿಸಲಾಗಿದೆ ಎಂಬ ಪಟ್ಟಿ ಇದೀಗ ಬಹಿರಂಗವಾಗಿದ್ದು, ಆ ಪಟ್ಟಿ ಇಲ್ಲಿದೆ.

ಸ್ಟಾರ್ಟರ್ ಗಳು
ಪಾತ್ರಂ: 

ರಾಗಿ ಎಲೆಯ ಗರಿಗರಿಯಾದ ತಿನಿಸು ಅದರ ಮೇಲೆ ಮೊಸರು ಮತ್ತು ಮಸಾಲೆಯುಕ್ತ ಚಟ್ನಿ

ಮುಖ್ಯ ಬೋಜನ
ವನವರ್ಣಂ: 

ಹಲಸಿನ ಹಣ್ಣಿನ ವಿಶೇಷ ತಿನಿಸು (Jackfruit galette) ಅದರ ಮೇಲೆ ಕಾಡಿನ ಅಣಬೆಗಳು, ಅದಕ್ಕೆ ಸ್ವಲ್ಪ ರಾಗಿಯಿಂದ ಗರಿಗರಿ ಒಗ್ಗರಣೆ  ಮತ್ತು ಕರಿಬೇವಿನ ಎಲೆಯಿಂದ ಸುಟ್ಟ ಕೇರಳದ ಕೆಂಪು ಅನ್ನ

ಭಾರತೀಯ ಬ್ರೆಡ್
ಮುಂಬೈ ಪಾವ್: ಈರುಳ್ಳಿ ಬೀಜದ ಸುವಾಸನೆಯ ಮೃದುವಾದ ಬನ್
ಬಕರಖಾನಿ: ಏಲಕ್ಕಿ ಸುವಾಸನೆಯ ಸಿಹಿ ಬ್ರೆಡ್

ಸಿಹಿತಿಂಡಿ
ಮಧುರಿಮಾ: 

ಏಲಕ್ಕಿ ಸುವಾಸನೆಯ ಊದಲು (ಸಿರಿಧಾನ್ಯ) ಪುಡ್ಡಿಂಗ್, ಅಂಜೂರದ ವಿಶೇಷ ಜಾಮ್ ಮತ್ತು ಅಂಬೆಮೊಹರ್ ರೈಸ್ ಕ್ರಿಸ್ಪ್ಸ್ (Ambemohar rice crisps)

ಪಾನೀಯಗಳು
ಕಾಶ್ಮೀರಿ ಕಹ್ವಾ, ಫಿಲ್ಟರ್ ಕಾಫಿ ಮತ್ತು ಡಾರ್ಜಿಲಿಂಗ್ ಚಹಾ
ಇದಲ್ಲದೆ ಚಾಕೊಲೇಟ್ ನಿಂದ ತಯಾರಿಸಲಾದ ವಿಶೇಷ ವಿಳ್ಳೆದೆಲೆಯ ಪಾನ್-ಬೀಡಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com