ದೆಹಲಿಯಲ್ಲಿ ಜಿ20 ಶೃಂಗಸಭೆ ಅಂತ್ಯ, ಮುಂದಿನ ವರ್ಷ ಬ್ರೆಜಿಲ್ ನಲ್ಲಿ: ಅಧಿಕಾರ ದಂಡವನ್ನು ಬ್ರೆಜಿಲ್ ಅಧ್ಯಕ್ಷರಿಗೆ ಹಸ್ತಾಂತರಿಸಿದ ಪ್ರಧಾನಿ ಮೋದಿ

ಮುಂದಿನ ವರ್ಷ ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಗೆ ವರ್ಗಾಯಿಸುವ ಮೂಲಕ ದೆಹಲಿಯಲ್ಲಿ ಎರಡು ದಿನಗಳ ಜಿ20 ಶೃಂಗಸಭೆ ಇಂದು ಭಾನುವಾರ ಮುಕ್ತಾಯಗೊಂಡಿದೆ.
ಅಧಿಕಾರದ ದಂಡವನ್ನು ಬ್ರೆಜಿಲ್ ಅಧ್ಯಕ್ಷರಿಗೆ ಹಸ್ತಾಂತರಿಸಿದ ಪ್ರಧಾನಿ ಮೋದಿ
ಅಧಿಕಾರದ ದಂಡವನ್ನು ಬ್ರೆಜಿಲ್ ಅಧ್ಯಕ್ಷರಿಗೆ ಹಸ್ತಾಂತರಿಸಿದ ಪ್ರಧಾನಿ ಮೋದಿ
Updated on

ನವದೆಹಲಿ: ಮುಂದಿನ ವರ್ಷ ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಗೆ ವರ್ಗಾಯಿಸುವ ಮೂಲಕ ದೆಹಲಿಯಲ್ಲಿ ಎರಡು ದಿನಗಳ ಜಿ20 ಶೃಂಗಸಭೆ ಇಂದು ಭಾನುವಾರ ಮುಕ್ತಾಯಗೊಂಡಿದೆ.

ಜಿ 20 ಅಧ್ಯಕ್ಷ ಸ್ಥಾನದ ಅಧಿಕಾರದ ದಂಡವನ್ನು ವಿದ್ಯುಕ್ತವಾಗಿ  ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಹಸ್ತಾಂತರಿಸಿದರು, ಈ ಸಂದರ್ಭದಲ್ಲಿ ಬ್ರೆಜಿಲ್ ಅಧ್ಯಕ್ಷರು, ಆರ್ಥಿಕತೆಗಳ ಹಿತಾಸಕ್ತಿಗಳ ವಿಷಯಗಳಿಗೆ ಧ್ವನಿ ನೀಡುತ್ತಿರುವ ಭಾರತವನ್ನು ಶ್ಲಾಘಿಸಿದರು.

ಸಮಾರೋಪ ಅಧಿವೇಶನದಲ್ಲಿ, ಮೋದಿ ಅವರು ಗೇಲ್ ನ್ನು ಹಸ್ತಾಂತರಿಸಿ ಬ್ರೆಜಿಲ್ ಅಧ್ಯಕ್ಷ ಸ್ಥಾನಕ್ಕೆ ಶುಭ ಹಾರೈಸಿದರು. ಬ್ರೆಜಿಲ್ ಅಧಿಕೃತವಾಗಿ ಈ ವರ್ಷದ ಡಿಸೆಂಬರ್ 1 ರಂದು ಗಣ್ಯ ಗುಂಪಿನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.

ಲುಲಾ ಡ ಸಿಲ್ವಾ ಅವರು ಸಾಮಾಜಿಕ ಸೇರ್ಪಡೆ, ಹಸಿವಿನ ವಿರುದ್ಧದ ಹೋರಾಟ, ಶಕ್ತಿ ಪರಿವರ್ತನೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು G20 ಆದ್ಯತೆಗಳಾಗಿ ಪಟ್ಟಿ ಮಾಡಿದ್ದಾರೆ.

ಯುಎನ್ ಸೆಕ್ಯುರಿಟಿ ಕೌನ್ಸಿಲ್‌ಗೆ ರಾಜಕೀಯ ಬಲವನ್ನು ಮರಳಿ ಪಡೆಯಲು ಶಾಶ್ವತ, ಶಾಶ್ವತವಲ್ಲದ ಸದಸ್ಯರಾಗಿ ಹೊಸ ಅಭಿವೃದ್ಧಿಶೀಲ ರಾಷ್ಟ್ರಗಳ ಅಗತ್ಯವಿದೆ ಎಂದು ಅವರು ಹೇಳಿದರು.ವಿಶ್ವ ಬ್ಯಾಂಕ್ ಮತ್ತು ಐಎಂಎಫ್ ನಲ್ಲಿ ಉದಯೋನ್ಮುಖ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನಾವು ಬಯಸುತ್ತೇವೆ ಎಂದು ಅವರು ಹೇಳಿದರು.

ನವೆಂಬರ್ ನಲ್ಲಿ ವರ್ಚುವಲ್ ಸಭೆ: ನವೆಂಬರ್​​ನಲ್ಲಿ ಜಿ 20 ವರ್ಚುವಲ್ ಅಧಿವೇಶನ ಆಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ. ನವೆಂಬರ್​ವರೆಗೆ ಜಿ 20 ಅಧ್ಯಕ್ಷತೆ ಜವಾಬ್ದಾರಿ ಭಾರತಕ್ಕೆ ಇದೆ. ಈ ಎರಡು ದಿನಗಳಲ್ಲಿ, ವಿಶ್ವ ನಾಯಕರು ಹಲವಾರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೀರಿ ಮತ್ತು ವಿವಿಧ ಪ್ರಸ್ತಾಪಗಳನ್ನು ತಿಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com