ಯುಕೆ ಪ್ರಧಾನಿ ರಿಷಿ ಸುನಕ್ ಮಕ್ಕಳು ಹಿಂದಿ ಕಲಿತಿದ್ದಾರೆ: ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ

ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಹಿಂದಿ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ ಮತ್ತು ಅವರ ಮಕ್ಕಳು ಹಿಂದಿಯನ್ನು ಕಲಿತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ

ಗುವಾಹಟಿ: ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಹಿಂದಿ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ ಮತ್ತು ಅವರ ಮಕ್ಕಳು ಹಿಂದಿಯನ್ನು ಕಲಿತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಶರ್ಮಾ ಅವರು ಶನಿವಾರ ರಾತ್ರಿ ಜಿ20 ಔತಣಕೂಟದಲ್ಲಿ ಪಾಲ್ಗೊಂಡು, ಅಲ್ಲಿ ಸುನಕ್ ಅವರೊಂದಿಗೆ ಚರ್ಚೆ ನಡೆಸಿದರು.

ಭಾನುವಾರ ಸಂಜೆ ಗುವಾಹಟಿಯಲ್ಲಿ ಬಿಜೆಪಿಯ ಮಹಿಳಾ ವಿಭಾಗದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ, 'ನಾನು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿಯನ್ನು ಭೇಟಿಯಾದೆ ಮತ್ತು ಕೆಲವು ವಿಚಾರಗಳ ಕುರಿತು ಚರ್ಚೆ ನಡೆಸಿದೆ. ಅವರು ಬ್ರಿಟನ್‌ನಲ್ಲಿದ್ದರೂ ಕೂಡ ತಮ್ಮ ಮಕ್ಕಳಿಗೆ ಹಿಂದಿ ಕಲಿಸುತ್ತಿರುವುದಾಗಿ ಹೇಳಿದರು ಎಂದರು.

'ಆ ಔತಣಕೂಟದಲ್ಲಿ ಕೆಲವು ಮುಖ್ಯಮಂತ್ರಿಗಳ ಮುಂದೆ ಪ್ರಧಾನ ಮಂತ್ರಿ ಸುನಕ್ ಇದನ್ನು ಪ್ರಸ್ತಾಪಿಸಿದರು. ಭಾರತದಲ್ಲಿದ್ದರು ತಮ್ಮ ಮಕ್ಕಳಿಗೆ ಹಿಂದಿ ಕಲಿಸಲು ಪೋಷಕರು ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ, ಅವರು

ಇಂಗ್ಲೆಂಡ್‌ನಲ್ಲಿದ್ದುಕೊಂಡು ಹಿಂದಿ ಭಾಷೆಯ ಪ್ರಾಮುಖ್ಯತೆ ಅರಿತು ಮಕ್ಕಳಿಗೆ ಹಿಂದಿ ಕಲಿಸಿದ್ದಾರೆ' ಇದು ನಂಬಲಸಾಧ್ಯ' ಎಂದರು.

ಸುನಕ್ ಜೊತೆಗೆ, ಶರ್ಮಾ ಅವರು ಸಿಂಗಾಪುರದ ಪ್ರಧಾನ ಮಂತ್ರಿ ಲೀ ಸೀನ್ ಲೂಂಗ್ ಅವರೊಂದಿಗೂ ಮಾತನಾಡಿದರು. ಅಸ್ಸಾಂನಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ನರ್ಸಿಂಗ್ ತರಬೇತಿಯಲ್ಲಿ ಲೀ ಆಸಕ್ತಿ ಹೊಂದಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

'ರಷ್ಯಾ-ಉಕ್ರೇನ್ ಯುದ್ಧದ ವಾತಾವರಣದಲ್ಲಿ, ಇಂದು ಅಮೆರಿಕ, ರಷ್ಯಾ ಮತ್ತು ಚೀನಾ ಯಾವುದನ್ನೂ ಒಪ್ಪಿಕೊಳ್ಳುವುದು ಅಪರೂಪ. ಆದರೆ, ಆ ದೇಶಗಳು ಜಿ20ಯಲ್ಲಿ ಭಾರತದ ಘೋಷಣೆಗೆ ಸಹಿ ಹಾಕಿವೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಈ ಘೋಷಣೆಯು ಇತಿಹಾಸದ ದಾಖಲೆಯಾಗಿ ಉಳಿಯಲಿದೆ' ಎಂದು ಅವರು ಹೇಳಿದರು.

ಮತ್ತೊಂದೆಡೆ, ಆಫ್ರಿಕನ್ ಯೂನಿಯನ್ ಅನ್ನು ಜಿ20 ಗೆ ಸೇರಿಸುವ ನಿರ್ಧಾರವು ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದ ಮಾತ್ರ ಸಾಧ್ಯವಾಯಿತು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

'ಅಂತರರಾಷ್ಟ್ರೀಯ ಜೈವಿಕ ಇಂಧನ ಒಕ್ಕೂಟವನ್ನು ರಚಿಸಲು ನಿರ್ಧರಿಸಲಾಗಿದೆ. ಭವಿಷ್ಯಕ್ಕಾಗಿ ಬಿದಿರಿನಿಂದ ಇಂಧನವನ್ನು ಉತ್ಪಾದಿಸುವ ವ್ಯವಸ್ಥೆ ಇರುತ್ತದೆ. ಈ ನಿರ್ಧಾರವು ಭವಿಷ್ಯದಲ್ಲಿ ಅಸ್ಸಾಂಗೆ ಮುಖ್ಯವಾಗಿದೆ' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com