'ಹೆಮ್ಮೆಯ ಹಿಂದೂ' ರಿಷಿ ಸುನಕ್ ದಂಪತಿಯಿಂದ ಅಕ್ಷರಧಾಮ ದೇವಾಲಯ ಭೇಟಿ

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಭಾನುವಾರ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ತಾನು ಹೆಮ್ಮೆಯ ಹಿಂದೂ, ತಾನು ಬೆಳೆದ ರೀತಿಯೇ ಹಾಗೆ ಎಂದು ಹೇಳಿಕೊಳ್ಳುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಭಾನುವಾರ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅದರ ಫೋಟೋಗಳು ಸೋಷಿಯಲ್ ಮೀಡಿಯಾಲ್ಲಿ ವೈರಲ್ ಆಗಿದೆ.

Updated on
ಮಹಾತ್ಮ ಗಾಂಧಿ ಅವರ ಸಮಾಧಿಗೆ ಗೌರವ ಸಲ್ಲಿಸಲು ಜಿ 20 ನಾಯಕರು ರಾಜ್‌ಘಾಟ್‌ಗೆ ಭೇಟಿ ನೀಡುವ ಮುನ್ನ, ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದ ಸುನಕ್ ಮತ್ತು ಅವರ ಪತ್ನಿ, ಕುರ್ತಾ ಪೈಜಾಮ ಧರಿಸಿ ಇಂದು ಮುಂಜಾನೆ ದೇವಸ್ಥಾನಕ್ಕೆ ತಲುಪಿದರು. ಅವರಿಗೆ ಸಾಂಪ್ರದಾಯಿಕ ಸ್ವಾಗತವನ್ನು ನೀಡಲಾಯಿತು.

ನಂತರ ಸುನಕ್ ಅವರನ್ನು ಸ್ವಾಮಿಗಳು, ಹಾಗೂ ಅಕ್ಷರಧಾಮ ಮಂದಿರದ ಹಿರಿಯ ಮುಖಂಡರು ಸ್ವಾಗತಿಸಿದರು, ಅವರು ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯ ಆಧ್ಯಾತ್ಮಿಕ ನಾಯಕ ಮಹಂತ್ ಸ್ವಾಮಿ ಮಹಾರಾಜ್ ಅವರ ಪರವಾಗಿ ವಿಶೇಷ ಸಂದೇಶವನ್ನು ಪ್ರಸಾರ ಮಾಡಿದರು.

ದೇವಾಲಯದಲ್ಲಿ ಆರತಿ ಬೆಳಗಿದ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ, ಅವರ ಭೇಟಿಯ ಸಂದರ್ಭದಲ್ಲಿ, ಬ್ರಿಟೀಷ್ ಪ್ರಧಾನಿಗೆ ಸ್ವಾಮಿನಾರಾಯಣ ಅಕ್ಷರಧಾಮದ ಒಂದು ಅವಲೋಕನವನ್ನು ನೀಡಲಾಯಿತು, ಇದು 100-ಎಕರೆ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಕೀರ್ಣವಾಗಿದ್ದು ಅದು ಭಾರತದ ಸಂಪ್ರದಾಯಗಳು ಮತ್ತು ಪ್ರಾಚೀನ ವಾಸ್ತುಶಿಲ್ಪವನ

ಇಂದು ಬೆಳಿಗ್ಗೆ ಸ್ವಾಮಿನಾರಾಯಣ ಅಕ್ಷರಧಾಮಕ್ಕೆ ದರ್ಶನ ಮತ್ತು ಪೂಜೆ ಮಾಡಿ ನಾನು ಮತ್ತು ನನ್ನ ಪತ್ನಿ ಸಂತೋಷಪಟ್ಟೆವು. ಈ ದೇವಾಲಯದ ಸೌಂದರ್ಯ ಮತ್ತು ಶಾಂತಿ, ಸೌಹಾರ್ದತೆ ಮತ್ತು ಉತ್ತಮ ಮಾನವನಾಗುವ ಅದರ ಸಾರ್ವತ್ರಿಕ ಸಂದೇಶದಿಂದ ನಾವು ಆಶ್ಚರ್ಯಚಕಿತರಾದೆವು. ಇದು ಕೇವಲ ಪೂಜಾ ಸ್ಥಳ ಮಾತ್ರವಲ್ಲ, ಭಾರತದ ಮೌಲ್ಯಗಳು,

ಪರಮಪೂಜ್ಯ ಮಹಂತ್ ಸ್ವಾಮಿ ಮಹಾರಾಜ್ ಅವರ ಆಶೀರ್ವಾದವನ್ನು ಪಡೆದಿದ್ದಕ್ಕಾಗಿ ಮನಸ್ಸು ಪುಳಕಿತವಾಗಿದೆ. ಯುಎಸ್ಎಯ ರಾಬಿನ್ಸ್ವಿಲ್ಲೆಯಲ್ಲಿ ಮತ್ತೊಂದು ಸುಂದರವಾದ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವನ್ನು ಶೀಘ್ರದಲ್ಲೇ ಉದ್ಘಾಟಿಸುತ್ತಿದೆ ಎಂದು ಕೇಳಲ್ಪಟ್ಟೆ ಎಂದು ರುಷಿ ಸುನಕ್ ಹೇಳಿದ್ದಾರೆ.

ಸಂಸ್ಥೆಯ ಹಿರಿಯ ಸ್ವಾಮಿಗಳಾದ ಬ್ರಹ್ಮವಿಹಾರಿ ಸ್ವಾಮಿ, ಬ್ರಿಟನ್ ಪ್ರಧಾನಿಯನ್ನು ಸ್ವಾಮಿನಾರಾಯಣ ಅಕ್ಷರಧಾಮಕ್ಕೆ ಸ್ವಾಗತಿಸುವುದು ಮತ್ತು ಮಹಂತ್ ಸ್ವಾಮಿ ಮಹಾರಾಜ್ ಅವರ ಶಾಂತಿ, ಏಕತೆ ಮತ್ತು ಸಾರ್ವಜನಿಕ ಸೇವೆಯ ಸಂದೇಶವನ್ನು ಹಂಚಿಕೊಳ್ಳುವುದು ಗೌರವವಾಗಿದೆ ಎಂದು ಹೇಳಿದರು.

ಭಾರತದೊಂದಿಗೆ ಯುಕೆ ಸಂಬಂಧವನ್ನು ಸ್ನೇಹದ ಬಂಧದ ಮೇಲೆ ನಿರ್ಮಿಸಲಾಗಿದೆ ಮತ್ತು ಸಾಂಸ್ಕೃತಿಕ ವಿನಿಮಯ ಮತ್ತು ಯುಕೆಯಲ್ಲಿನ ಅನಿವಾಸಿ ಭಾರತೀಯರಿಂದ ಪೋಷಿಸಲಾಗಿದೆ ಎಂದು ಅವರು ಹೇಳಿದರು.ಬ್ರಿಟೀಷ್ ಪ್ರಧಾನಿ ದೇವಸ್ಥಾನದಲ್ಲಿ ಸುಮಾರು ಒಂದು ಗಂಟೆ ಕಳೆದರು ಅಲ್ಲಿ ಅವರು 'ದರ್ಶನ ಮತ್ತು ಪೂಜೆ' ಮಾಡಿದರು.

ದೇವಸ್ಥಾನದಲ್ಲಿ ರಿಷಿ ಸುನಕ್ ಹಣೆಗೆ ತಿಲಕವಿಟ್ಟ ಸ್ವಾಮಿಗಳು. ನನ್ನ ಭಾರತೀಯ ಮೂಲ ಮತ್ತು ಭಾರತದೊಂದಿಗೆ ನನ್ನ ಸಂಪರ್ಕಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನನ್ನ ಪತ್ನಿ ಭಾರತೀಯಳು, ನಾನು ಹೆಮ್ಮೆಯ ಹಿಂದೂ, ಭಾರತ ಮತ್ತು ಭಾರತದ ಜನರೊಂದಿಗೆ ಯಾವಾಗಲೂ ಸಂಪರ್ಕವನ್ನು ಹೊಂದಿರುತ್ತೇನೆ ಎಂದು ರುಷಿ ಸುನಕ್ ಹೇಳಿದ್ದಾ

ಕನ್ಸರ್ವೇಟಿವ್ ಪಕ್ಷದ 43 ವರ್ಷದ ನಾಯಕ 2015 ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಅವರನ್ನು ಫೆಬ್ರವರಿ 2020 ರಲ್ಲಿ ಅಂದಿನ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ಹಣಕಾಸು ಮಂತ್ರಿಯಾಗಿ ಮಾಡಿದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಅವರು ಮೊದಲ ಭಾರತೀಯ ಮೂಲದ ಬ್ರಿಟಿಷ್ ಪ್ರಧಾನಿಯಾದರು,

ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಭಾರತದ ಬಿಲಿಯನೇರ್ ಟೆಕ್ ದಿಗ್ಗಜ ನಾರಾಯಣ ಮೂರ್ತಿ ಮತ್ತು ಸಮಾಜಸೇವಕಿ ಮತ್ತು ಶಿಕ್ಷಣತಜ್ಞೆ ಸುಧಾ ಮೂರ್ತಿ ಅವರ ಪುತ್ರಿ.

ದೆಹಲಿಯ ಅಕ್ಷರಧಾಮ ದೇವಾಲಯ ಮುಂದೆ ದಂಪತಿ
ದೆಹಲಿಯ ಅಕ್ಷರಧಾಮ ದೇವಾಲಯ ಮುಂದೆ ದಂಪತಿ
ದೆಹಲಿಯ ಅಕ್ಷರಧಾಮ ದೇವಾಲಯದಲ್ಲಿ ನೆಲಕ್ಕೆ ಬಾಗಿ ನಮಸ್ಕರಿಸಿದ ರುಷಿ ಸುನಕ್

ಐತಿಹಾಸಿಕ G20 ಗೆ ಧನ್ಯವಾದಗಳು ಇಂತಹ ಆತ್ಮೀಯ ಸ್ವಾಗತಕ್ಕಾಗಿ ಭಾರತೀಯ ಜನರಿಗೂ ಅಭಿನಂದನೆ. ಜಾಗತಿಕ ಆಹಾರ ಭದ್ರತೆಯಿಂದ ಅಂತಾರಾಷ್ಟ್ರೀಯ ಪಾಲುದಾರಿಕೆಗಳವರೆಗೆ, ಇದು ಕಾರ್ಯನಿರತ ಯಶಸ್ವಿ ಶೃಂಗಸಭೆಯಾಗಿದೆ ಎಂದು ಬ್ರಿಟನ್ ಗೆ ಬೀಳ್ಕೊಡುವ ಸಂದರ್ಭದಲ್ಲಿ ರಿಷಿ ಸುನಕ್ ಬರೆದುಕೊಂಡಿದ್ದಾರೆ.

ನಿನ್ನೆ ಔಪಚಾರಿಕ ಭೋಜನಕ್ಕೆ ಫ್ರಾಕ್ ನ್ನು ಆಯ್ಕೆ ಮಾಡಿದ ಅಕ್ಷತಾ, ಅಕ್ಷರಧಾಮ ದೇವಾಲಯದ ಭೇಟಿ ಸಂದರ್ಭದಲ್ಲಿ ಪ್ಲಾಜೊ ಮತ್ತು ಕುರ್ತಾದೊಂದಿಗೆ ಹೋಗಿದ್ದರು. ಇಂದು ಭಾರತದಿಂದ ನಿರ್ಗಮಿಸುವ ವೇಳೆ ಸುಂದರವಾದ ಗುಲಾಬಿ ಬಣ್ಣದ ಸೀರೆಯಲ್ಲಿ ಮತ್ತು ಹಣೆಯಲ್ಲಿ ಬಿಂದಿ ಧರಿಸಿ ತೆರಳಿದ್ದಾರೆ.

ದೆಹಲಿಯ ರಾಜ್ ಘಾಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷರ ಜೊತೆ ರುಷಿ ಸುನಕ್

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com