ಭಯೋತ್ಪಾದನೆ ಕೊನೆಯಾಗದ ಹೊರತು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಇಲ್ಲ: ಕೇಂದ್ರ ಸರ್ಕಾರ ಖಡಕ್ ಮಾತು!

ಭಯೋತ್ಪಾದನೆ ಕೊನೆಯಾಗದ ಹೊರತೂ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಇಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.
ಅನುರಾಗ್ ಠಾಕೂರ್
ಅನುರಾಗ್ ಠಾಕೂರ್

ನವದೆಹಲಿ: ಭಯೋತ್ಪಾದನೆ ಕೊನೆಯಾಗದ ಹೊರತೂ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಇಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.

ಭಾರತ-ಪಾಕಿಸ್ತಾನ ಎರಡು ತಂಡಗಳು ಐಸಿಸಿ ಮತ್ತು ಕಾಂಟಿನೆಂಟಲ್ ಈವೆಂಟ್‌ಗಳಲ್ಲಿ ಪಂದ್ಯಗಳನ್ನು ಮಾತ್ರ ಆಡುವುದರೊಂದಿಗೆ ಎರಡು ನೆರೆಹೊರೆಯವರ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳನ್ನು ವರ್ಷಗಳವರೆಗೆ ಸ್ಥಗಿತಗೊಳಿಸಲಾಗಿದೆ. ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧ ಮತ್ತೆ ಬೆಳೆಸುವ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒತ್ತಾಯಿಸುತ್ತಿರುವಂತೆಯೇ ಈ ಬಗ್ಗೆ ಕೇಂದ್ರ ಸರ್ಕಾರ ಭಯೋತ್ಪಾದನೆ ಕೊನೆಯಾಗದ ಹೊರತೂ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಇಲ್ಲ ಎಂದು ಹೇಳಿದೆ.

ಈ ಕುರಿತು ಮಾತನಾಡಿರುವ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು, 'ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಭಾರತದಲ್ಲಿ ಉಗ್ರರ ಒಳನುಸುಳುವಿಕೆ ನಿಲ್ಲಿಸುವವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಇರುವುದಿಲ್ಲ ಎಂದು ಬಿಸಿಸಿಐ ಬಹಳ ಹಿಂದೆಯೇ ನಿರ್ಧರಿಸಿದೆ ಎಂದು  ಹೇಳಿದ್ದಾರೆ.

ಕ್ರೀಡೆಗೆ ಸಂಬಂಧಿಸಿದಂತೆ, ಒಳನುಸುಳುವಿಕೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೆ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಪಂದ್ಯಗಳನ್ನು ನಡೆಸುವುದಿಲ್ಲ ಎಂದು ಬಿಸಿಸಿಐ ಬಹಳ ಹಿಂದೆಯೇ ನಿರ್ಧರಿಸಿತ್ತು. ಇದು ಈ ದೇಶದ ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಭಾವನೆ ಎಂದು ನಾನು ಭಾವಿಸುತ್ತೇನೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಶುಕ್ರವಾರ ಹೇಳಿದ್ದಾರೆ.

ಅನಂತ್ ನಾಗ್ ಎನ್ಕೌಂಟರ್ ಬಳಿಕ ಮತ್ತೆ ಇಂಡೋ-ಪಾಕ್ ಕ್ರಿಕೆಟ್ ಮೇಲೆ ಕರಿನೆರಳು
ಇನ್ನು ಇತ್ತೀಚೆಗಷ್ಟೇ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ನೇತೃತ್ವದಲ್ಲಿ ಬಿಸಿಸಿಐ ತಂಡ ಪಾಕಿಸ್ತಾನ ಭೇಟಿ ಮಾಡಿತ್ತು. ಈ ವೇಳೆ ಉಭಯ ಮಂಡಳಿಗಳ ಅಧಿಕಾರಿಗಳು ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧ ಪುನಾರಂಭಿಸುವ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು. ಆದರೆ ಇದೀಗ ಇತ್ತೀಚೆಗೆ ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ನ ಆರ್ಮಿ ಕರ್ನಲ್, ಮೇಜರ್ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು, ಮತ್ತೋರ್ವ ಸೈನಿಕ ಸಾವನ್ನಪ್ಪಿದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಬಾಂಧವ್ಯದ ಮೇಲೆ ಮತ್ತೆ ಕರಿನೆರಳು ಬಿದ್ದಿದೆ.

ಭಾರತೀಯ ಪುರುಷರ ಕ್ರಿಕೆಟ್ ತಂಡವು ಪ್ರಸ್ತುತ ಶ್ರೀಲಂಕಾದಲ್ಲಿದ್ದು ಅಲ್ಲಿ ಅವರು ಏಷ್ಯಾ ಕಪ್ 2023 ರಲ್ಲಿ ಭಾಗವಹಿಸುತ್ತಿದ್ದಾರೆ. ಹಾಲಿ ಟೂರ್ನಿಯಲ್ಲಿ ಭಾರತ ತಂಡ ಎರಡು ಬಾರಿ ಪಾಕಿಸ್ತಾನ ತಂಡವನ್ನು ಎದುರಿಸಿದ್ದು, ಒಂದು ಪಂದ್ಯ ಮಳೆಗಾಹುತಿಯಾಗಿ ಒಂದು ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಈ ಹಿಂದೆ ಏಷ್ಯಾ ಕಪ್ 2023 ಅನ್ನು ಮೂಲತಃ ಸಂಪೂರ್ಣವಾಗಿ ಪಾಕಿಸ್ತಾನದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಭಾರತ ಸರ್ಕಾರದಿಂದ ಅನುಮತಿ ನಿರಾಕರಣೆಯನ್ನು ಉಲ್ಲೇಖಿಸಿ ತನ್ನ ತಂಡವನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿತ್ತು. ಹೀಗಾಗಿ ಪಿಸಿಬಿ ಮತ್ತು ಬಿಸಿಸಿಐ ಸಂಧಾನ ಮಾತುಕತೆ ನಡೆಸಿ ಶ್ರೀಲಂಕಾದಲ್ಲಿ ಭಾರತ ತಂಡದ ಪಂದ್ಯಗಳ ಆಯೋಜನೆಗೆ ಒಪ್ಪಿಗೆ ಸೂಚಿಸಿದ್ದವು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com