14 ಟಿವಿ ಆ್ಯಂಕರ್‌ಗಳನ್ನು INDIA ಮೈತ್ರಿಕೂಟ ಬಹಿಷ್ಕಾರದ ಐಡಿಯಾ ಇಲ್ಲ: ಸಿಎಂ ನಿತೀಶ್ ಕುಮಾರ್

14 ಟಿವಿ ಆ್ಯಂಕರ್‌ಗಳನ್ನು INDIA ಮೈತ್ರಿಕೂಟ ಬಹಿಷ್ಕರಿಸುವ ಕುರಿತ ಯಾವುದೇ ಐಡಿಯಾವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್  ಶನಿವಾರ ನಿರಾಕರಿಸಿದ್ದಾರೆ.
ಬಿಹಾರ ಸಿಎಂ ನಿತೀಶ್ ಕುಮಾರ್
ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: 14 ಟಿವಿ ಆ್ಯಂಕರ್‌ಗಳನ್ನು INDIA ಮೈತ್ರಿಕೂಟ ಬಹಿಷ್ಕರಿಸುವ ಕುರಿತ ಯಾವುದೇ ಐಡಿಯಾವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್  ಶನಿವಾರ ನಿರಾಕರಿಸಿದ್ದಾರೆ. ವಿಪಕ್ಷಗಳ ಮೈತ್ರಿಕೂಟದ ಕೆಲವು ಸದಸ್ಯರಿಗೆ ಟಿವಿ ಆಂಕರ್‌ಗಳೊಂದಿಗೆ ಕೆಲವು ಸಮಸ್ಯೆಗಳಿರಬಹುದು ಹೀಗಾಗಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು ಎಂದು ಕುಮಾರ್ ಹೇಳಿದರು.

"ನನಗೆ ಈ ಬಗ್ಗೆ ಯಾವುದೇ ಐಡಿಯಾ ಇಲ್ಲ.  ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವವರಿಂದ ಆಕ್ರಮಣಕ್ಕೆ ಒಳಗಾಗುತ್ತಿರುವ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ನಾನು ಯಾವಾಗಲೂ ಇದ್ದೇನೆ. ಕೇಂದ್ರದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವವರನ್ನು ಸೋಲಿಸಿದ ನಂತರ ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತೇವೆ ಎಂದರು. 

"ನಾನು ಪತ್ರಕರ್ತರ ಬೆಂಬಲಕ್ಕೆ ಇದ್ದೇನೆ. ಎಲ್ಲರಿಗೂ ಸಂಪೂರ್ಣ ಮುಕ್ತ ಸ್ವಾತಂತ್ರ್ಯ ಸಿಕ್ಕಾಗ ಪತ್ರಕರ್ತರು ತಮಗೆ ಬೇಕಾದುದನ್ನು ಬರೆಯುತ್ತಾರೆ. ಅವರನ್ನು ನಿಯಂತ್ರಿಸಲಾಗುತ್ತದೆಯೇ?ನಾನು ಅದನ್ನು ಮಾಡಿದ್ದೇನೆಯೇ? ಅವರಿಗೆ ಹಕ್ಕುಗಳಿವೆ, ನಾನು ಯಾರ ವಿರುದ್ಧವೂ ಅಲ್ಲ ಎಂದು ಅವರು ಹೇಳಿದರು.

INDIA ಮೈತ್ರಿಕೂಟದ ಮಾಧ್ಯಮ ಮೇಲಿನ ಕಾರ್ಯಕಾರಿ ಗುಂಪು ಗುರುವಾರ 14 ಟಿವಿ ಆ್ಯಂಕರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವರ ಕಾರ್ಯಕ್ರಮಗಳಲ್ಲಿ ಘಟಕಗಳು ತಮ್ಮ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ಹೇಳಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com