ಹೊಸ ಭವಿಷ್ಯಕ್ಕಾಗಿ ಹೊಸ ಆರಂಭ: ಹಳೇ ಸಂಸತ್​ ಭವನದಲ್ಲಿ ಕಲಾಪಕ್ಕೆ ವಿದಾಯ; ಪ್ರಧಾನಿ ಮೋದಿ ಭಾಷಣ

ನಾವು ಹೊಸ ಭವಿಷ್ಯಕ್ಕಾಗಿ ಹೊಸ ಆರಂಭ ಮಾಡುತ್ತಿದ್ದೇವೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಬದ್ಧತೆಯನ್ನು ಸಂಸದರು ಪುನರುಚ್ಛರಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದರು.
ಸಂಸತ್​ ಭವನದ ಸೆಂಟ್ರಲ್ ಹಾಲ್​ನಲ್ಲಿ ಭಾಷಣ ಮಾಡುತ್ತಿರುವ ಪ್ರಧಾನಿ ಮೋದಿ.
ಸಂಸತ್​ ಭವನದ ಸೆಂಟ್ರಲ್ ಹಾಲ್​ನಲ್ಲಿ ಭಾಷಣ ಮಾಡುತ್ತಿರುವ ಪ್ರಧಾನಿ ಮೋದಿ.

ನವದೆಹಲಿ: ನಾವು ಹೊಸ ಭವಿಷ್ಯಕ್ಕಾಗಿ ಹೊಸ ಆರಂಭ ಮಾಡುತ್ತಿದ್ದೇವೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಬದ್ಧತೆಯನ್ನು ಸಂಸದರು ಪುನರುಚ್ಛರಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದರು.

ಹಳೇ ಸಂಸತ್​ ಭವನದಲ್ಲಿ ಕಲಾಪಕ್ಕೆ ವಿದಾಯ ಹಿನ್ನೆಲೆ ಸಂಸತ್​ ಭವನದ ಸೆಂಟ್ರಲ್ ಹಾಲ್​ನಲ್ಲಿ ಪ್ರಧಾನಿ ಮೋದಿ ಅವರು ಭಾಷಣ ಮಾಡಿದರು.

ನಮ್ಮ ಚಿಂತನೆಯ ಕ್ಯಾನ್ವಾಸ್ ಅನ್ನು ನಾವು ವಿಸ್ತರಿಸಲು ಸಾಧ್ಯವಾಗದಿದ್ದರೆ, ನಾವು ಭವ್ಯ ಭಾರತದ ಚಿತ್ರವನ್ನು ಬಿಡಿಸಲು ಸಾಧ್ಯವಾಗುವುದಿಲ್ಲ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಬದ್ಧತೆಯನ್ನು ಸಂಸದರು ಪುನರುಚ್ಛರಿಸಬೇಕು. ಸಣ್ಣ ಸಮಸ್ಯೆಗಳಲ್ಲಿ ಸಿಲುಕು ಒದ್ದಾಡುವ ಸಮಯ ಮುಗಿದಿದೆ. ನಾವು ಆತ್ಮನಿರ್ಭರ್ ಆಗುವ ಗುರಿಯನ್ನು ಮುಟ್ಟಬೇಕು. ಇದು ಈ ಕಾಲದ ಅಗತ್ಯ, ಇದು ಪ್ರತಿಯೊಬ್ಬರ ಕರ್ತವ್ಯ. ಇದಕ್ಕೆ ಕೇವಲ ಹೃದಯ ಬೇಕು. ದೇಶಕ್ಕಾಗಿ ಬೇಕಿದೆ ಎಂದು ಹೇಳಿದರು.

ಸಂಸತ್ತಿನಲ್ಲಿ ಮಾಡಿದ ಪ್ರತಿಯೊಂದು ಕಾನೂನು, ಸಂಸತ್ತಿನಲ್ಲಿ ನಡೆಯುವ ಪ್ರತಿಯೊಂದು ಚರ್ಚೆ ಮತ್ತು ಸಂಸತ್ತು ನೀಡುವ ಪ್ರತಿಯೊಂದು ಸಂಕೇತವು ಭಾರತೀಯ ಆಶಯವನ್ನು ಪ್ರೋತ್ಸಾಹಿಸಬೇಕು. ಇದು ನಮ್ಮ ಜವಾಬ್ದಾರಿ ಮತ್ತು ಪ್ರತಿಯೊಬ್ಬ ಭಾರತೀಯನ ನಿರೀಕ್ಷೆಯಾಗಿದೆ. ಇಲ್ಲಿ ಏನೇ ಸುಧಾರಣೆಗಳನ್ನು ಮಾಡಿದರೂ ಭಾರತೀಯ ಆಕಾಂಕ್ಷೆ ಇರಬೇಕು. ಚಿಕ್ಕ ಕ್ಯಾನ್ವಾಸ್‌ನಲ್ಲಿ ನಾವು ದೊಡ್ಡ ಚಿತ್ರವನ್ನು ಬಿಡಿಸಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ, ನಮ್ಮ ಆಲೋಚನೆಯ ಕ್ಯಾನ್ವಾಸ್ ಅನ್ನು ದೊಡ್ಡದಾಗಿಸಲು ಸಾಧ್ಯವಾಗದಿದ್ದರೆ, ಭವ್ಯ ಭಾರತದ ಚಿತ್ರವನ್ನು ಬಿಡಿಸಲು ಸಾಧ್ಯವಾಗುವುದಿಲ್ಲ.

ಇಂದು, ನಾವು ಹೊಸ ಸಂಸತ್ತಿನ ಕಟ್ಟಡದಲ್ಲಿ ಹೊಸ ಭವಿಷ್ಯದ ಆರಂಭ ಮಾಡುತ್ತಿದ್ದೇವೆ. ಇಂದು ನಾವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಪೂರೈಸುವ ಸಂಕಲ್ಪದೊಂದಿಗೆ ಹೊಸ ಕಟ್ಟಡಕ್ಕೆ ಹೋಗುತ್ತಿದ್ದೇವೆ. ಭಾರತವು ಹೊಸತನದಿಂದ ಪುನರುಜ್ಜೀವನಗೊಂಡಿದೆಯ ದೇಶವು ಹೊಸ ಶಕ್ತಿಯಿಂದ ತುಂಬಿದೆ.

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೆಂಪು ಕೋಟೆಯಲ್ಲಿ ಮಾಡಿದ್ದ ಭಾಷಣದಲ್ಲಿ ಹೇಳಿದ್ದೆ. ಯಹಿ ಸಮಯ ಹೈ, ಸಹಿ ಸಮಯ ಹೈ ಎಂದು. ನಾವು ಒಂದರ ನಂತರ ಒಂದರಂತೆ ಬೆಳವಣಿಗೆಗಳನ್ನು ನೋಡಿದರೆ, ಅವುಗಳಲ್ಲಿ ಪ್ರತಿಯೊಂದೂ ಇಂದು ಭಾರತವು ಹೊಸ ರೀತಿಯಲ್ಲಿ ಪುನರುಜ್ಜೀವನಗೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಭಾರತವು ಹೊಸ ಶಕ್ತಿಯಿಂದ ತುಂಬಿದೆ. ಈ ಶಕ್ತಿಯು ಕೋಟ್ಯಂತರ ಜನರ ಕನಸುಗಳನ್ನು ಸಂಕಲ್ಪಗಳಾಗಿ ಬದಲಾಯಿಸಬಹುದು. ಆ ನಿರ್ಣಯಗಳನ್ನು ನನಸಾಗಿಸಬಹುದು ಎಂದು ತಿಳಿಸಿದರು.

ಇದೇ ವೇಳೆ ಹಳೆಯ ಸಂಸತ್ ಕಟ್ಟಡದಲ್ಲಿ ಅಂಗೀಕರಿಸಲಾದ 'ತ್ರಿವಳಿ ತಲಾಖ್' ಮತ್ತು 370 ನೇ ವಿಧಿಯ ರದ್ದತಿ ಸೇರಿದಂತೆ ಹಲವು ಕಾನೂನುಗಳನ್ನು ಮೋದಿಯವರು ಸ್ಮರಿಸಿದರು. ಇದುವರೆಗೆ ಲೋಕಸಭೆ ಮತ್ತು ರಾಜ್ಯಸಭೆ ಸೇರಿ 4 ಸಾವಿರಕ್ಕೂ ಹೆಚ್ಚು ಕಾನೂನುಗಳನ್ನು ಅಂಗೀಕರಿಸಿವೆ ಎಂದರು.

ಈ ಸಂಸತ್ತಿನಿಂದ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರಿಗೆ ನ್ಯಾಯ ಸಿಕ್ಕಿತು, ಇಲ್ಲಿಂದ 'ತ್ರಿವಳಿ ತಲಾಖ್' ವಿರೋಧಿಸುವ ಕಾನೂನನ್ನು ಒಗ್ಗಟ್ಟಿನಿಂದ ಅಂಗೀಕರಿಸಲಾಯಿತು. ಕಳೆದ ಕೆಲವು ವರ್ಷಗಳ ಹಿಂದೆ ಸಂಸತ್ತು ಕೂಡ ತೃತೀಯಲಿಂಗಿಗಳಿಗೆ ನ್ಯಾಯ ನೀಡುವ ಕಾನೂನುಗಳನ್ನು ಅಂಗೀಕರಿಸಿದೆ. ವಿಶೇಷಚೇತನರಿಗೆ ಉಜ್ವಲ ಭವಿಷ್ಯವನ್ನು ಖಾತರಿಪಡಿಸುವ ಕಾನೂನುಗಳನ್ನು ನಾವು ಒಗ್ಗಟ್ಟಿನಿಂದ ಅಂಗೀಕರಿಸಿದ್ದೇವೆ. ಸಂಸತ್ತಿನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವ ಅವಕಾಶವನ್ನು ನಾವು ಪಡೆದುಕೊಂಡಿದ್ದೇವೆ. ತೃತೀಯಲಿಂಗಿಗಳಿಗೆ ನ್ಯಾಯ ಒದಗಿಸುವ ಕಾನೂನುಗಳನ್ನು ಜಾರಿಗೊಳಿಸಿದೆ, ಇದೀಗ ಅವರು ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಇತರ ಸೌಲಭ್ಯಗಳನ್ನು ಗೌರವದಿಂದ ಪಡೆಯುತ್ತಿದ್ದಾರೆಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com