ಕರ್ನಾಟಕ ಕಾವೇರಿ ನದಿಯ ಮಾಲೀಕನಲ್ಲ: ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ನಿಲ್ಲಿಸುವಂತೆ ಕರ್ನಾಟಕಗಳಲ್ಲಿ ಭಾರೀ ಹೋರಾಟ ನಡೆಯುತ್ತಿದ್ದು, ಈ ನಡುವಲ್ಲೇ ಕನ್ನಡಿಗರ ಕಣ್ಣು ಮತ್ತಷ್ಟು ಕೆಂಪಗಾಗುವಂತಹ ಹೇಳಿಯೊಂದನ್ನು ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ಅವರು ನೀಡಿದ್ದಾರೆ.
ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್
ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್

ಚೆನ್ನೈ: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ನಿಲ್ಲಿಸುವಂತೆ ಕರ್ನಾಟಕಗಳಲ್ಲಿ ಭಾರೀ ಹೋರಾಟ ನಡೆಯುತ್ತಿದ್ದು, ಈ ನಡುವಲ್ಲೇ ಕನ್ನಡಿಗರ ಕಣ್ಣು ಮತ್ತಷ್ಟು ಕೆಂಪಗಾಗುವಂತಹ ಹೇಳಿಯೊಂದನ್ನು ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ಅವರು ನೀಡಿದ್ದಾರೆ.

ಕಾವೇರಿ ವಿವಾದ ಹೇಳಿಕೆ ನೀಡಿರುವ ಅವರು, ಕಾವೇರಿ ನದಿ ಕರ್ನಾಟಕಕ್ಕೆ ಸೇರಿದ್ದಲ್ಲ, ಕರ್ನಾಟಕ ಕಾವೇರಿ ನದಿಯ ಮಾಲೀಕನಲ್ಲ ಎಂದು ಹೇಳಿದ್ದಾರೆ.

ಒಂದು ರಾಜ್ಯದಿಂದ ಪ್ರಾರಂಭವಾಗುವ ಯಾವುದೇ ನದಿಯನ್ನು ಆ ರಾಜ್ಯವು ತನ್ನದು ಎಂದು ಹೇಳಲು ಸಾಧ್ಯವಿಲ್ಲ, ನದಿಗಳು ಹರಿಯಬೇಕು. ನದಿಯ ತಗ್ಗು ಪ್ರದೇಶಗಳನ್ನು ಬೆಂಬಲಿಸಬೇಕುಯ ಅದು ಅಂತರರಾಷ್ಟ್ರೀಯ ಒಪ್ಪಂದವಾಗಿದೆ. ನದಿಯು ಪ್ರಾರಂಭವಾಗಿ ಆ ರಾಜ್ಯದಲ್ಲಿ ನಿಂತರೆ ಅವರು ನೀರನ್ನು ತೆಗೆದುಕೊಳ್ಳಬಹುದು. ಆದರೆ, ಅದು ಅಲ್ಲಿಂದ ಪ್ರಾರಂಭವಾಗಿ ಹರಿದರೆ, ನದಿಯ ಮಾಲೀಕನೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com