ಅವರು ಮಹಿಳೆಯರನ್ನು ವರ್ಗೀಕರಿಸಲು ಯತ್ನಿಸಿದರು: ವಿಪಕ್ಷಗಳ ವಿರುದ್ಧ ಪ್ರಧಾನಿ ಮೊದಿ ವಾಗ್ದಾಳಿ

ವಿಪಕ್ಷಗಳು ಮಹಿಳೆಯರನ್ನು ವಿವಿಧ ವರ್ಗಗಳಲ್ಲಿ ವರ್ಗೀಕರಿಸಲು ಯತ್ನಿಸಿದವು, ಆದರೆ ಮಹಿಳೆಯರ ಶಕ್ತಿಗೆ ಶರಣಾದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಅಹ್ಮದಾಬಾದ್: ವಿಪಕ್ಷಗಳು ಮಹಿಳೆಯರನ್ನು ವಿವಿಧ ವರ್ಗಗಳಲ್ಲಿ ವರ್ಗೀಕರಿಸಲು ಯತ್ನಿಸಿದವು, ಆದರೆ ಮಹಿಳೆಯರ ಶಕ್ತಿಗೆ ಶರಣಾದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಗುಜರಾತ್ ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಮಹಿಳಾ ಮೀಸಲಾತಿ ಮಸೂದೆ ವಿಷಯವಾಗಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತವರು ರಾಜ್ಯದಲ್ಲಿ ಪ್ರಧಾನಿ ಮೋದಿ, ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಮಹಿಳೆಯರ ತಂಡವೊಂದರ ಜೊತೆ ಸಂವಾದ ನಡೆಸಿದರು. ಕಳೆದ ವಾರ ಸಂಸತ್ ನ ಉಭಯ ಸದನಗಳಲ್ಲಿ ಮಸೂದೆ ಅಂಗೀಕರಿಸಲಾಗಿತ್ತು. 

“ಈ ಮಸೂದೆಯನ್ನು ವರ್ಷಗಳ ಕಾಲ ಹಿಡಿದಿಟ್ಟುಕೊಂಡವರು ಸಹ ನಿಮ್ಮ (ಮಹಿಳೆಯರ) ಭಯದಿಂದಾಗಿ ಅದನ್ನು ಬೆಂಬಲಿಸುವಂತೆ ಒತ್ತಾಯಿಸಿತು. ಮಹಿಳೆಯರ ಶಕ್ತಿಯೇ ಅವರನ್ನು ಬೆಂಬಲಿಸುವಂತೆ ಬಲವಂತಪಡಿಸಿತು. ಅವರು ತಮ್ಮ ಸಮರ್ಥನೆಗಳಲ್ಲಿ ಹಲವು ಕಾರಣಗಳನ್ನು ನೀಡುತ್ತಾರೆ. ಈ ಜನರು ಮಹಿಳೆಯರನ್ನು ವಿವಿಧ ವರ್ಗಗಳಾಗಿ ಪ್ರತ್ಯೇಕಿಸಲು ಮತ್ತು ಮಹಿಳೆಯರ ಶಕ್ತಿಯನ್ನು ಕುಗ್ಗಿಸಲು ಪ್ರಯತ್ನಿಸಿದ್ದಾರೆ, ಆದರೆ ಸರ್ಕಾರ ಈ ಮಸೂದೆಗೆ ಬೆಂಬಲವಾಗಿ ನಿಂತಿದೆ ಹಾಗೂ ಮಹಿಳೆಯರು ಇದನ್ನು ಗಮನಿಸುತ್ತಿದ್ದಾರೆ ಎಂಬುದು ತಿಳಿದ ಕೂಡಲೇ, ಮಸೂದೆಯ ಪರ ಮತ ಹಾಕಲೇಬೇಕಾದ ಪರಿಸ್ಥಿತಿ ಎದುರಾಯ್ತು ಎಂದು ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಸಹ ಮಹಿಳಾ ಶಕ್ತಿಗೆ ಸೂಕ್ತವಾದ ನ್ಯಾಯ ಒದಗಿಸಲಾಗಿರಲಿಲ್ಲ.  ದೇಶದ ಅರ್ಧದಷ್ಟು ಜನಸಂಖ್ಯೆ ತೊಡಗಿಸಿಕೊಳ್ಳದೇ ಇದ್ದಲ್ಲಿ ದೇಶ ವೇಗವಾಗಿ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ.  ಮಹಿಳೆಯರ ಹಕ್ಕುಗಳ ಬಗ್ಗೆ ಚರ್ಚೆ ಮಾಡದೇ ರಾಜಕೀಯ ಕಾರಣಗಳನ್ನು ನೀಡುತ್ತಾ ಮಹಿಳೆಯರು ಎಲ್ಲಾ ರೀತಿಯ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎಂಬ ಕಾರಣ ನೀಡುತ್ತಿದ್ದರು.

‘ನಾರಿ ಶಕ್ತಿ ವಂದನಾ ಕಾಯ್ದೆ’ಗೆ ಸಂಬಂಧಿಸಿದಂತೆ, “ಮಹಿಳೆಯರಿಗೆ ಶಾಸನ ಸಭೆ ಹಾಗೂ ಲೋಕಸಭೆಯಿಂದ ಪ್ರಾತಿನಿಧ್ಯ ಸಿಗಬೇಕು, ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವುದು ಮೋದಿಯ ಗ್ಯಾರಂಟಿ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮಹಿಳಾ ಸಬಲೀಕರಣದ ಗುಜರಾತ್‌ನ ಸುದೀರ್ಘ ಇತಿಹಾಸದ ಕುರಿತು ಮಾತನಾಡಿದ ಅವರು, ಗುಜರಾತ್‌ನಲ್ಲಿ ಮಹಿಳಾ ವಿರೋಧಿ ಸಿದ್ಧಾಂತದ ವಿರುದ್ಧ ಹೋರಾಟವನ್ನು ಪ್ರಾರಂಭಿಸಿದಾಗಿನಿಂದ, ನಾವು ಗುಜರಾತ್‌ನಲ್ಲಿ ಕುಟುಂಬ, ಸಮಾಜ ಮತ್ತು ರಾಜ್ಯ ಎಂಬ ಮೂರು ಹಂತಗಳಲ್ಲಿ ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಅನೇಕ ಯಶಸ್ವಿ ಅಭಿಯಾನಗಳನ್ನು ನಡೆಸಿದ್ದೇವೆ ಎಂದು ತಿಳಿಸಿದ್ದಾರೆ." ರಾಜಕೀಯದಲ್ಲಿ ಮಹಿಳೆಯರ ಉಪಸ್ಥಿತಿಯನ್ನು ಹೆಚ್ಚಿಸುವ ಕುರಿತು ಮಾತನಾಡಿದ ಅವರು, "ಎಲ್ಲಾ ಹಂತಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಲು ನಾನು ಸಮರ ಮಹಿಳಾ ಪಂಚಾಯತ್ ಪ್ರಯೋಗವನ್ನು ಪ್ರಾರಂಭಿಸಿದೆ" ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com