
ಪ್ರಧಾನಿ ನರೇಂದ್ರ ಮೋದಿ ಅವರು ಸಿಕಂದರಾಬಾದ್ ಮತ್ತು ತಿರುಪತಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡುತ್ತಿರುವುದು.
ಹೈದರಾಬಾದ್: ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದರು.
ಹೈದರಾಬಾದ್'ಗೆ ಬೇಟಿ ನೀಡಿರುವ ಮೋದಿಯವರು, ಸಿಕಂದರಾಬಾದ್ ರೈಲು ನಿಲ್ದಾಣದಿಂದ ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಬಳಿಕ ಸ್ಟೇಷನರಿ ರೈಲು ಹತ್ತಿದ ಮೋದಿಯವರು ಶಾಲಾ ಮಕ್ಕಳೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು.
ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತೆಲಂಗಾಣದ ಸಿಕಂದರಾಬಾದ್ ಮತ್ತು ನೆರೆಯ ಆಂಧ್ರಪ್ರದೇಶದ ತಿರುಪತಿ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ. ಇದರಿಂದ ಜನರಿಗೆ ವಿಶೇಷವಾಗಿ ಯಾತ್ರಿಕರಿಗೆ ಪ್ರಯೋಜನಕರವಾಗಲಿದೆ.
ಜನವರಿ 15 ರಂದು, ಮೋದಿ ಅವರು ಸಿಕಂದರಾಬಾದ್ ಮತ್ತು ಎಪಿಯ ಬಂದರು ನಗರವಾದ ವಿಶಾಖಪಟ್ಟಣಂ ನಡುವಿನ ವಂದೇ ಭಾರತ್ ರೈಲು ಸೇವೆಯನ್ನು ವಾಸ್ತವಿಕವಾಗಿ ಫ್ಲ್ಯಾಗ್ ಮಾಡಿದರು, ಇದು ಎರಡು ತೆಲುಗು ಮಾತನಾಡುವ ರಾಜ್ಯಗಳನ್ನು ಸಂಪರ್ಕಿಸುವ ಮೊದಲ ಸೇವೆಯಾಗಿದೆ.
#WATCH | Telangana | PM Narendra Modi flags off Vande Bharat Express between Secunderabad and Tirupati.
— ANI (@ANI) April 8, 2023
It will reduce the travel time between the two cities by almost three and a half hours. pic.twitter.com/UCMd6yuWqC
ಸಿಕಂದರಾಬಾದ್- ತಿರುಪತಿ ವಂದೇ ಭಾರತ್ ರೈಲು (20701) ಸಿಕಂದರಾಬಾದ್ ರೈಲು ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 2.30ಕ್ಕೆ ತಿರುಪತಿ ತಲುಪುತ್ತದೆ. ತಿರುಪತಿ - ಸಿಕಂದರಾಬಾದ್ ವಂದೇ ಭಾರತ್ ರೈಲು (20702) ತಿರುಪತಿ ರೈಲು ನಿಲ್ದಾಣದಿಂದ ಮಧ್ಯಾಹ್ನ 3.15 ಕ್ಕೆ ಹೊರಡುತ್ತದೆ. ರಾತ್ರಿ 11.45ಕ್ಕೆ ಸಿಕಂದರಾಬಾದ್ ತಲುಪುತ್ತದೆ.
ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣವನ್ನು 720 ಕೋಟಿ ರೂಪಾಯಿ ವೆಚ್ಚದಲ್ಲಿ ಮರು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದ್ದು, ಏರ್ಪೋರ್ಟ್ ಮಾದರಿಯ ಭವ್ಯ ನಿಲ್ದಾಣ ಮುಂದಿನ ದಿನಗಳಲ್ಲಿ ತಲೆಯೆತ್ತಲಿದೆ. ನೂತನ ರೈಲು ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.
ಮರು ನಿರ್ಮಾಣ ಯೋಜನೆಯಡಿ ಅಸ್ತಿತ್ವದಲ್ಲಿರುವ ಪ್ಲಾಟ್ಫಾರ್ಮ್ಗಳನ್ನು ಹೊಸ ನಿಲ್ದಾಣದ ಆಧುನಿಕತೆಗೆ ತಕ್ಕುದಾಗಿ ನವೀಕರಿಸಲಾಗುತ್ತದೆ. 5000 ಕೆವಿಪಿ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವನ್ನೂ ನಿಲ್ದಾಣ ಹೊಂದಿರಲಿದೆ.
ಹೈದರಾಬಾದ್'ಗೆ ಭೇಟಿ ನೀಡಿದ ಮೋದಿಯವರು, ಹೈದರಾಬಾದ್-ಸಿಕಂದರಾಬಾದ್ ಅವಳಿ ನಗರ ಪ್ರದೇಶದ ಉಪನಗರ ವಿಭಾಗದಲ್ಲಿ 13 ಹೊಸ ಎಂಎಂಟಿ ಎಎಸ್ ಸೇವೆಗಳಿಗೂ ಚಾಲನೆ ನೀಡಿದರು.
ಬಹು-ಮಾದರಿ ಸಾರಿಗೆ ಸೇವೆಯು ಅವಳಿ ನಗರ ಪ್ರದೇಶದ ಪ್ರಯಾಣಿಕರಿಗೆ ವೇಗದ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣ ಒದಗಿಸುತ್ತದೆ. ಈ ಹೊಸ ರೈಲು ಸೇವೆಗಳು ಅವಳಿ ನಗರದ ಜನರಿಗೆ ಕಡಿಮೆ ವೆಚ್ಚದಲ್ಲಿ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣ ಸೌಲಭ್ಯವನ್ನು ಒದಗಿಸುತ್ತವೆ.