ಒಡಿಶಾ: ಸೈಬರ್ ವಂಚನೆಯಲ್ಲಿ 1.5 ಲಕ್ಷ ಕಳೆದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ!

ಸೈಬರ್ ವಂಚನೆಗೆ ಬಲಿಯಾಗಿ 1.5 ಲಕ್ಷ  ರೂಪಾಯಿ ಕಳೆದುಕೊಂಡ ತನ್ನ ಪತ್ನಿಗೆ 45 ವರ್ಷದ ವ್ಯಕ್ತಿಯೊಬ್ಬ ತ್ರಿವಳಿ ತಲಾಖ್ ನೀಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. 
ತ್ರಿವಳಿ ತಲಾಖ್
ತ್ರಿವಳಿ ತಲಾಖ್

ಭುವನೇಶ್ವರ್: ಸೈಬರ್ ವಂಚನೆಗೆ ಬಲಿಯಾಗಿ 1.5 ಲಕ್ಷ  ರೂಪಾಯಿ ಕಳೆದುಕೊಂಡ ತನ್ನ ಪತ್ನಿಗೆ 45 ವರ್ಷದ ವ್ಯಕ್ತಿಯೊಬ್ಬ ತ್ರಿವಳಿ ತಲಾಖ್ ನೀಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. 

ತ್ರಿವಳಿ ತಲಾಖ್ ನೀಡಿದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 2017 ರಿಂದ ಭಾರತದಲ್ಲಿ ತ್ರಿವಳಿ ತಲಾಖ್ ನೀಡುವುದು  ಅಕ್ರಮವಾಗಿದೆ.  ಕೇಂದ್ರಪಾರ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು 32 ವರ್ಷದ ಸಂತ್ರಸ್ತೆ,  ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತಾನು ಸೈಬರ್ ವಂಚನೆಗೆ ಸಿಲುಕಿ 1.5 ಲಕ್ಷ ರೂಪಾಯಿ ಕಳೆದುಕೊಂಡಿದ್ದಕ್ಕೆ ಗುಜರಾತ್ ನಲ್ಲಿರುವ ತನ್ನ ಪತಿ ಏ.1 ರಂದು 3 ಬಾರಿ ತಲಾಖ್ ಘೋಷಣೆ ಕೂಗಿದ್ದು, ಅಕ್ರಮವಾಗಿ ವಿಚ್ಛೇದನ ನೀಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.

ಈ ಮಹಿಳೆಗೆ 15 ವರ್ಷದ ಹಿಂದೆ ವಿವಾಹವಾಗಿದ್ದು 3 ಮಂದಿ ಹದಿಹರೆಯದ ಮಕ್ಕಳಿದ್ದಾರೆ. ಮುಸ್ಲಿಮ್ ಮಹಿಳೆಯರ ವಿವಾಹ ರಕ್ಷಣೆಯ ಕಾಯ್ದೆಯಡಿ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ತನಗೆ ಪತಿಯಿಂದ ವರದಕ್ಷಿಣೆ ಕಿರುಕುಳವೂ ಇತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com