ಬಟಿಂಡಾದಲ್ಲಿ ಮತ್ತೊರ್ವ ಸೈನಿಕ ಸಾವು, ನಿನ್ನೆಯ ಗುಂಡಿನ ದಾಳಿಗೆ ಸಂಬಂಧಿಸಿದ್ದಲ್ಲ ಎಂದ ಸೇನಾಪಡೆ

ಬಟಿಂಡಾದಲ್ಲಿ ಮತ್ತೊರ್ವ ಸೈನಿಕ ಸಾವುನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಯೋಧನೊಬ್ಬ ಗುಂಡೇಟಿನ ಗಾಯದಿಂದ ಸಾವನ್ನಪ್ಪಿದ್ದಾನೆ ಎಂದು ಸೇನೆ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಂಜಾಬ್: ಬಟಿಂಡಾದಲ್ಲಿ ಮತ್ತೊರ್ವ ಸೈನಿಕ ಸಾವುನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಯೋಧನೊಬ್ಬ ಗುಂಡೇಟಿನ ಗಾಯದಿಂದ ಸಾವನ್ನಪ್ಪಿದ್ದಾನೆ ಎಂದು ಸೇನೆ ತಿಳಿಸಿದೆ.

ಆದರೆ, ಈ ಪ್ರಕರಣ ನಿನ್ನೆಯ ಸೇನಾ ನೆಲೆಯಲ್ಲಿ ನಾಲ್ವರು ಸೈನಿಕರ ಸಾವಿಗೆ ಕಾರಣವಾದ ಗುಂಡಿನ ದಾಳಿಗೂ ಸಂಬಂಧಿಸಿದ್ದಲ್ಲ ಎಂದು ಸೇನಾಪಡೆ ಸ್ಪಷ್ಟಪಡಿಸಿದೆ.

ಇನ್ಸಾಸ್ ರೈಫಲ್​ನಿಂದ ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಬಟಿಂಡಾ ಸೇನಾ ನೆಲೆಯಲ್ಲಿ 12 ಏಪ್ರಿಲ್ 2023 ರಂದು ಸಂಜೆ ಸುಮಾರು 4:30ಕ್ಕೆ ಸೈನಿಕನೊಬ್ಬ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಮೃತ ಸೈನಿಕ ಸೇವಾ ಶಸ್ತ್ರಾಸ್ತ್ರದೊಂದಿಗೆ ಸೆಂಟ್ರಿ ಡ್ಯೂಟಿಯಲ್ಲಿದ್ದನು. ಇದೇ ರೈಫಲ್ ಆತನ ಪಕ್ಕದಲ್ಲಿ ಕಂಡು ಬಂದಿತ್ತು. ಕೂಡಲೇ ಆತನನ್ನು ಸೇನಾಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಕೆಲ ದಿನಗಳಿಂದ ರಜೆ ಪಡೆದಿದ್ದ ಯೋಧ 11 ಏಪ್ರಿಲ್ 2023 ರಂದು ಕರ್ತವ್ಯಕ್ಕೆ ಮರಳಿದ್ದರು. ಇದು ಆತ್ಮಹತ್ಯೆ ಪ್ರಕರಣವಾಗಿದ್ದು, ಇದಕ್ಕೂ ನಿನ್ನೆಯ ಗುಂಡಿನ ದಾಳಿ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com