7 ನಗರ, 8 ಕಾರ್ಯಕ್ರಮ, 36 ಗಂಟೆಗಳಲ್ಲಿ ಪ್ರಧಾನಿ ಮೋದಿ 5300 ಕಿಮೀ ಯಾತ್ರೆ!
ಪ್ರಧಾನಿ ನರೇಂದ್ರ ಮೋದಿ ಸತತ 2 ದಿನಗಳ ಕಾಲ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, 7 ನಗರಗಳಲ್ಲಿ ನಡೆಯಲಿರುವ 8 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
Published: 22nd April 2023 11:35 PM | Last Updated: 22nd April 2023 11:35 PM | A+A A-

ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸತತ 2 ದಿನಗಳ ಕಾಲ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, 7 ನಗರಗಳಲ್ಲಿ ನಡೆಯಲಿರುವ 8 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
ಏಪ್ರಿಲ್ 24 ರಂದು ಬೆಳಗ್ಗೆ ಪ್ರಧಾನಿ ಮೋದಿ ತಮ್ಮ ಪ್ರಯಾಣ ಆರಂಭಿಸಲಿದ್ದು, ಪ್ರಧಾನಿಯವರ ಈ ಪ್ರಯಾಣ ದೆಹಲಿಯಿಂದ ಪ್ರಾರಂಭವಾಗಲಿದೆ. ಇದರಲ್ಲಿ ಅವರು 7 ವಿವಿಧ ನಗರಗಳಲ್ಲಿ 8 ಕಾರ್ಯಕ್ರಮಗಳನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಪ್ರಧಾನಿ ಮೋದಿ ಅವರು ಮೊದಲು ರಾಜಧಾನಿ ದೆಹಲಿಯಿಂದ ಸುಮಾರು ಸುಮಾರು 500 ಕಿ.ಮೀ. ದೂರದಲ್ಲಿರುವ ಖಜುರಾಹೊಗೆ ಪ್ರಯಾಣಿಸಲಿದ್ದು, ಬಳಿಕ ಖಜುರಾಹೊದಿಂದ ರೇವಾಗೆ ತೆರಳಿ ಅಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ವೇಳೆ ಆತ್ಮಾಹುತಿ ಬಾಂಬ್ ದಾಳಿ ಬೆದರಿಕೆ; ಕೇರಳದಲ್ಲಿ ಕಟ್ಟೆಚ್ಚರ
ಇದಾದ ನಂತರ ಪ್ರಧಾನಿ ಮೋದಿ ಅವರು ರೌಂಡ್ ಟ್ರಿಪ್ ಪ್ರಯಾಣದಲ್ಲಿ ಸುಮಾರು 280 ಕಿಮೀ ದೂರವನ್ನು ಕ್ರಮಿಸಲಿದ್ದು, ನಂತರ ಖಜುರಾಹೊಗೆ ಹಿಂದಿರುಗಲಿದ್ದಾರೆ. ಯುವಂ ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಲು ಖಜುರಾಹೊದಿಂದ, ಪ್ರಧಾನಿ ಮೋದಿ ಅವರು ಸುಮಾರು 1700 ಕಿಮೀ ವೈಮಾನಿಕ ದೂರವನ್ನು ಕ್ರಮಿಸುವ ಮೂಲಕ ಕೊಚ್ಚಿಗೆ ತಲುಪಲಿದ್ದಾರೆ ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.
ಮಾರನೇ ದಿನ ಬೆಳಗ್ಗೆ ಕೊಚ್ಚಿಯಿಂದ ತಿರುವನಂತಪುರಂಗೆ ಪ್ರಯಾಣ
ಇನ್ನು ಮಾರನೇ ದಿನ ಬೆಳಗ್ಗೆ ಪ್ರಧಾನಿಯವರ ಈ ಭೇಟಿ ಮುಂದುವರಿಯಲಿದ್ದು, ಇಲ್ಲಿ ಪ್ರಧಾನಿ ಮೋದಿಯವರು ಕೊಚ್ಚಿಯಿಂದ ತಿರುವನಂತಪುರಕ್ಕೆ (ಕೊಚ್ಚಿಯಿಂದ ತಿರುವನಂತಪುರಕ್ಕೆ ಪ್ರಯಾಣ) ಸುಮಾರು 190 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಲಿದ್ದಾರೆ. ಇಲ್ಲಿ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಲಿದ್ದು, ಬಳಿಕ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ. ಇಲ್ಲಿಂದ ಸೂರತ್ ಮೂಲಕ ಸಿಲ್ವಾಸ್ಸಾಗೆ ತೆರಳಲಿದ್ದು, ಇದು ಸುಮಾರು 1570 ಕಿ.ಮೀ. ದೂರದಲ್ಲಿದೆ. ಅಲ್ಲಿ ಅವರು ನಮೋ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ನಂತರ ಅವರು ದೇವ್ಕಾ ಸೀಫ್ರಂಟ್ (ದೇವಕಾ ಸೀಫ್ರಂಟ್ ಉದ್ಘಾಟನೆ) ಉದ್ಘಾಟನೆಗೆ ದಮನ್‌ಗೆ ತೆರಳಲಿದ್ದಾರೆ.
ನಂತರ ಅವರು ಸೂರತ್‌ಗೆ ಸುಮಾರು 110 ಕಿಲೋಮೀಟರ್ ದೂರ ಪ್ರಯಾಣಿಸಲಿದ್ದು, ಸೂರತ್‌ನಿಂದ, ಪ್ರಧಾನಿ ಮೋದಿ ಅವರು ತಮ್ಮ ಪ್ರವಾಸಕ್ಕೆ ಇನ್ನೂ 940 ಕಿಲೋಮೀಟರ್ ಸೇರಿಸುವ ಮೂಲಕ ದೆಹಲಿಗೆ ಹಿಂದಿರುಗಲಿದ್ದಾರೆ.
ಇದನ್ನೂ ಓದಿ: 'ಹೆಮ್ಮೆಯ ಕ್ಷಣ': ಚಾಂಗ್ಲಾಂಗ್ ಜಿಲ್ಲೆಗೆ ಸಾರ್ವಜನಿಕ ಆಡಳಿತದಲ್ಲಿ ಪ್ರಧಾನಮಂತ್ರಿ ಶ್ರೇಷ್ಠತೆ ಪ್ರಶಸ್ತಿ
ಪ್ರಧಾನಿಯವರ ಪವರ್ ಪ್ಯಾಕ್ ವೇಳಾಪಟ್ಟಿ
ಈ ಬಿಡುವಿಲ್ಲದ ಪ್ರವಾಸದಲ್ಲಿ ಪ್ರಧಾನಿ ಮೋದಿ ಅವರು ಒಟ್ಟು ಸುಮಾರು 5300 ಕಿ.ಮೀಗಳಷ್ಟು ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ. ಗಮನಾರ್ಹವಾಗಿ, ಪ್ರಧಾನಿ ಮೋದಿಯವರ ಈ ಭೇಟಿಯು ಸುಮಾರು 36 ಗಂಟೆಗಳಲ್ಲಿ ಕೊನೆಗೊಳ್ಳಲಿದೆ. ಈ ಭೇಟಿಯ ವೇಳೆ ಪ್ರಧಾನಿ ಮೋದಿ ತಮ್ಮ ಕಾರ್ಯಕ್ರಮಗಳ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.