ಕಾಶ್ಮೀರಿ ಬಂಡುಕೋರರನ್ನು ಎದುರಿಸಲು ಹಿಂದೂ ಗ್ರಾಮ ಸೇನಾಪಡೆಗಳಿಗೆ ಶಸ್ತ್ರಾಸ್ತ್ರ ಪೂರೈಕೆ!

ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರದ ಭಾಗಗಳಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಮಾಜಿ ಯೋಧರು ಶಾಶ್ವತವಾಗಿ ನೆಲೆಸಿದ್ದಾರೆ. ಹೀಗಾಗಿ ಇದನ್ನೇ ಬಳಸಿಕೊಂಡು ದಶಕಗಳ ಕಾಲದಿಂದಲೂ ದಂಗೆಗಳನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಸರ್ಕಾರವು ಒತ್ತು ನೀಡುತ್ತಿದೆ.
ಹಿಂದೂ ಗ್ರಾಮ ಸೇನಾಪಡೆ
ಹಿಂದೂ ಗ್ರಾಮ ಸೇನಾಪಡೆ

ಧಂಗ್ರಿ: ಬೋಲ್ಟ್-ಆಕ್ಷನ್ ರೈಫಲ್ ಅನ್ನು ಬಲಿಷ್ಠವನ್ನಾಗಿಸುವ ಪ್ರಯತ್ನಗಳು ನಡೆಯುತ್ತಿದ್ದು ಇದರ ಭಾಗವಾಗಿ ಕಾಶ್ಮೀರದಲ್ಲಿರುವ 5000 ಹಿಂದೂಗಳಲ್ಲಿ ಒಬ್ಬರಾಗಿರುವ ನಾಗರಿಕ ಸೇವಕ ಸಂಜೀತ್ ಕುಮಾರ್ ಅವರು ಭಾರತೀಯ ಪಡೆಗಳಿಂದ ಶಸ್ತ್ರಸಜ್ಜಿತಪಾಗಿದ್ದು ಮತ್ತು ತರಬೇತಿ ಪಡೆದಿದ್ದು ಇದೀಗ ಅವರು ಬಂಡುಕೋರರ ದಾಳಿಯನ್ನು ಎದುರಿಸಲು  ಅಖಿಲ-ಹಿಂದೂ ಸೇನಾ ಘಟಕಗಳನ್ನು ಸೇರಿಕೊಂಡಿದ್ದಾರೆ.

ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರದ ಭಾಗಗಳಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಮಾಜಿ ಯೋಧರು ಶಾಶ್ವತವಾಗಿ ನೆಲೆಸಿದ್ದಾರೆ. ಹೀಗಾಗಿ ಇದನ್ನೇ ಬಳಸಿಕೊಂಡು ದಶಕಗಳ ಕಾಲದಿಂದಲೂ ದಂಗೆಗಳನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಸರ್ಕಾರವು ಒತ್ತು ನೀಡುತ್ತಿದೆ.

ಕಳೆದ ಜನವರಿಯಲ್ಲಿ ಗಡಿನಾಡಿನ ಗ್ರಾಮದಲ್ಲಿ ನಡೆದ ಹಿಂದೂಗಳ ಮೇಲಿನ ಮಾರಣಾಂತಿಕ ಉಗ್ರ ದಾಳಿ ನಂತರ ಹೊಸ ಸೇನಾಪಡೆ ಕಟ್ಟುವುದಾಗಿ ಅಧಿಕಾರಿಗಳು ಘೋಷಿಸಿದ್ದರು. ಈ ದಾಳಿಯಿಂದ ನಾವು ಸಂಪೂರ್ಣವಾಗಿ ಭಯಭೀತರಾಗಿದ್ದೇವೆ ಎಂದು ವಿದ್ಯುತ್ ಇಲಾಖೆಯ 32 ವರ್ಷದ ಪುರಸಭೆಯ ಕೆಲಸಗಾರರೊಬ್ಬರು ಹೇಳಿದ್ದಾರೆ.

ತನ್ನನ್ನು ಹಿಂದೂ ನಿಷ್ಠಾವಂತ ಸದಸ್ಯ ಎಂದು ಗುರುತಿಸಲು ಹಣೆಯ ಮೇಲೆ ಕೇಸರಿ ಬಣ್ಣದ ತಿಲಕವನ್ನು ಧರಿಸಿದ ದೀಪಕ್ ಕುಮಾರ್ ಅವರು ನಾನು ಸಿದ್ಧ ಮತ್ತು ತನ್ನ ಮನೆಯನ್ನು ರಕ್ಷಿಸಲು ಸಮರ್ಥನಾಗಿದ್ದೇನೆ. ನಮ್ಮ ದೇಶಕ್ಕೆ ದೇಶದ್ರೋಹ ಮಾಡುವವರೇ ನನ್ನ ಗುರಿ ಎಂದು ಅವರು ಹೇಳಿದರು.

75 ವರ್ಷಗಳ ಹಿಂದೆ ಎರಡೂ ದೇಶಗಳು ವಿಭಜನಗೊಂಡಾಗಿನಿಂದಲೂ ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದದಲ್ಲಿದೆ. ಅಜಾದಿ ಕಾಶ್ಮೀರಕ್ಕಾಗಿ ನಡೆದ ಅನೇಕ ದಂಗೆಗಳಲ್ಲಿ ಸಾಕಷ್ಟು ಪ್ರಾಣ ಹಾನಿ ಸಂಭವಿಸಿದೆ. ಇನ್ನು ಪಾಕಿಸ್ತಾನದೊಂದಿಗೆ ವಿಲೀನಕ್ಕಾಗಿ ಒತ್ತಾಯಿಸುವ ಬಂಡಾಯ ಗುಂಪುಗಳ ವಿರುದ್ಧ ಭಾರತ ಹೋರಾಡುತ್ತಿದೆ. ಕಳೆದ ವರ್ಷ ಪೊಲೀಸ್ ಅಧಿಕಾರಿಗಳು ಮತ್ತು ಕಾಶ್ಮೀರದ ಹಿಂದೂ ನಿವಾಸಿಗಳನ್ನು ಗುರಿಯಾಗಿಸಿಕೊಂಡು ನಡೆದ ಸರಣಿ ಕೊಲೆಗಳ ಹಿನ್ನೆಲೆಯಲ್ಲಿ ವಿಲೇಜ್ ಡಿಫೆನ್ಸ್ ಗಾರ್ಡ್ಸ್ ಎಂದು ಕರೆಯಲ್ಪಡುವ ಹೊಸ ಸೇನಾ ಘಟಕಗಳನ್ನು ರಚಿಸಲಾಗಿದೆ. 

ಈ ಯೋಜನೆಯು ಪ್ರದೇಶದ ಹಿಂದೂ ನಿವಾಸಿಗಳಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದೆ. ಆದರೆ ಮುಸ್ಲಿಂ ಗ್ರಾಮಸ್ಥರು ಇಂತಹ ಯೋಜನೆಯು ಕಾಶ್ಮೀರದಲ್ಲಿ ಉಗ್ರದಾಳಿಗಳು ಮತ್ತಷ್ಟು ಉಲ್ಬಣಗೊಳಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈಗ ಕೇವಲ ಒಂದು ಸಮುದಾಯಕ್ಕೆ ಶಸ್ತ್ರಾಸ್ತ್ರಗಳನ್ನು ವಿತರಿಸುವ ವಿಧಾನದ ಬಗ್ಗೆ ನನ್ನ ಚಿಂತೆಯಿದೆ. ಈಗ ಯುವಕರು ಶಸ್ತ್ರಾಸ್ತ್ರಗಳನ್ನು ಕೈಯಲ್ಲಿ ಹಿಡಿಯುತ್ತಿದ್ದಾರೆ, ಇದು ನಮ್ಮಲ್ಲಿ ಯಾರಿಗೂ ಒಳ್ಳೆಯದಲ್ಲ. ನಾನು ಬೆಳೆಯುತ್ತಿರುವ ಉದ್ವೇಗವನ್ನು ಅನುಭವಿಸುತ್ತಿದ್ದೇನೆ ಎಂದು ಹೆಸರು ಹೇಳಲು ಬಯಸದ ಧಾಂಗ್ರಿಯಲ್ಲಿ ವಾಸಿಸುವ ಒಬ್ಬ ಹಿರಿಯ ಮುಸ್ಲಿಂ ಹೇಳಿದರು.

ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಕಾಶ್ಮೀರದಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು. ಈ ಘಟನೆಯಿಂದ ಕುಮಾರ್ ವಾಸಿಸುವ ದೂರದ ಕುಗ್ರಾಮವಾದ ಧಂಗ್ರಿಯ ಅನೇಕ ನಿವಾಸಿಗಳು ಈಗಲು ತಮ್ಮ ನೋವನ್ನು ಹೊರಹಾಕುತ್ತಾರೆ. ಆಯುಧಗಳಿದ್ದರೂ ಅಥವಾ ಇಲ್ಲದಿದ್ದರೂ ನಾವು ಭಯಭೀತರಾಗಿದ್ದೇವೆ ಎಂದು 55 ವರ್ಷದ ರೈತ ಮುರಾರಿ ಲಾಲ್ ಶರ್ಮಾ ತಮ್ಮ ಲೋಡ್ ಮಾಡಿದ 303 ಕ್ಯಾಲಿಬರ್ ರೈಫಲ್ ಅನ್ನು ತೋರಿಸಿದ್ದಾರೆ.

1990ರ ದಶಕದ ಮಧ್ಯಭಾಗದಲ್ಲಿ ಕಾಶ್ಮೀರದಲ್ಲಿ ಭಾರತವು ಮೊದಲು ಸಿವಿಲ್ ಮಿಲಿಷಿಯಾ ಪಡೆಯನ್ನು ರಚಿಸಿತು. ಭಾರತದ ಆಡಳಿತದ ವಿರುದ್ಧ ಸಶಸ್ತ್ರ ದಂಗೆಯು ಉತ್ತುಂಗದಲ್ಲಿದ್ದಾಗ ರಕ್ಷಣೆಯ ಪ್ರಮುಖ ಭಾಗವಾಗಿ ಇದನ್ನು ರಚಿಸಲಾಗಿತ್ತು. ಹದಿಹರೆಯದವರು ಮತ್ತು ಕೆಲವು ಮುಸ್ಲಿಮರು ಸೇರಿದಂತೆ ಸುಮಾರು 25,000 ಪುರುಷರು ಮತ್ತು ಮಹಿಳೆಯರಿಗೆ ಶಸ್ತ್ರಾಸ್ತ್ರಗಳನ್ನು ನೀಡಲಾಯಿತು. ಅಲ್ಲದೆ ಜಮ್ಮು ಪ್ರದೇಶದಲ್ಲಿ ಗ್ರಾಮ ರಕ್ಷಣಾ ಸಮಿತಿಗಳಾಗಿ ಸಂಘಟಿಸಲಾಯಿತು. ಆದರೆ ಈ ಸಮಿತಿಗಳ ಸದಸ್ಯರು ನಾಗರಿಕರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಹಕ್ಕುಗಳ ಗುಂಪುಗಳು ಆರೋಪಿಸಿತ್ತು. 

ಕನಿಷ್ಠ 210 ಕೊಲೆ, ಅತ್ಯಾಚಾರ ಮತ್ತು ಸುಲಿಗೆ ಪ್ರಕರಣಗಳನ್ನು ಸೇನಾಪಡೆಗಳ ಮೇಲೆ ಆರೋಪಿಸಲಾಯಿತು. ಆದರೆ ಅಧಿಕೃತ ದಾಖಲೆಗಲ್ಲಿ ಎರಡು ಪ್ರತಿಶತಕ್ಕಿಂತ ಕಡಿಮೆ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ತೋರಿಸುತ್ತಿದೆ. ಈ ಪ್ರಕರಣಗಳು ವೈಯಕ್ತಿಕ ಕೃತ್ಯಗಳು ಮತ್ತು ಉಗ್ರಗಾಮಿಗಳು ಸಂಘಟಿತ ಅಪರಾಧದ ಯಾವುದೇ ದಾಖಲೆಗಳಿಲ್ಲ. ಕೆಲವರು ರಾಕ್ಷಸರಾಗುವ ಅವಕಾಶ ಯಾವಾಗಲೂ ಇರುತ್ತದೆ. ಎಲ್ಲರನ್ನೂ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಗುಪ್ತಾ ಎಂಬುವರು ಹೇಳಿದರು.

ಭಾರತೀಯ ಪಡೆಗಳು ಕ್ರಮೇಣ ದಂಗೆಯನ್ನು ಹತ್ತಿಕ್ಕುತ್ತಿದ್ದಂತೆ ಮತ್ತು ಭದ್ರತಾ ಪರಿಸ್ಥಿತಿ ಸುಧಾರಿಸಿದ ಕಾರಣ ಹೆಚ್ಚಿನ ಸಮಿತಿಗಳು ನಿಷ್ಕ್ರಿಯಗೊಂಡವು. ಈ ಸಮಯದಲ್ಲಿ, ಸೇನಾಪಡೆಯ ಸದಸ್ಯರು ತಮ್ಮ ರೈಫಲ್‌ಗಳನ್ನು ದುರುಪಯೋಗಪಡಿಸಿಕೊಂಡರೆ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಅರೆಸೇನಾ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ತರಬೇತುದಾರರು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com