ಗುಜರಾತ್ CMO ಅಧಿಕಾರಿಯಂತೆ ಪೋಸು ಕೊಟ್ಟು ಮಾಡೆಲ್ ಮೇಲೆ ಅತ್ಯಾಚಾರ: ಆರೋಪಿ ಬಂಧನ!
ಗುಜರಾತ್ ಮುಖ್ಯಮಂತ್ರಿ ಕಚೇರಿಯ (CMO) ಅಧಿಕಾರಿ ಮತ್ತು ಗುಜರಾತ್ ಇಂಟರ್‌ನ್ಯಾಶನಲ್ ಫೈನಾನ್ಸ್ ಟೆಕ್ (GIFT) ಸಿಟಿಯ ಮುಖ್ಯಸ್ಥನಂತೆ ಪೋಸು ಕೊಟ್ಟು ಕೆಲಸ ಕೊಡಿಸುವ ನೆಪದಲ್ಲಿ ಮಾಡೆಲ್ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.
Published: 30th April 2023 08:02 PM | Last Updated: 30th April 2023 08:02 PM | A+A A-

ವಿರಾಜ್ ಪಟೇಲ್
ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ಕಚೇರಿಯ (CMO) ಅಧಿಕಾರಿ ಮತ್ತು ಗುಜರಾತ್ ಇಂಟರ್‌ನ್ಯಾಶನಲ್ ಫೈನಾನ್ಸ್ ಟೆಕ್ (GIFT) ಸಿಟಿಯ ಮುಖ್ಯಸ್ಥನಂತೆ ಪೋಸು ಕೊಟ್ಟು ಕೆಲಸ ಕೊಡಿಸುವ ನೆಪದಲ್ಲಿ ಮಾಡೆಲ್ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.
ಆರೋಪಿ ಕೊಲೆಗಡುಕ ವಿರಾಜ್ ಪಟೇಲ್‌ನನ್ನು ಬಂಧಿಸಲಾಗಿದೆ. ಮಹಿಳೆಯೊಂದಿಗೆ ವಿರಾಜ್ ಪಟೇಲ್ ಜಗಳವಾಡಿದ್ದು ಈ ಹಿನ್ನೆಲೆಯಲ್ಲಿ ವಡೋದರಾದ ಪೊಲೀಸ್ ಠಾಣೆಗೆ ಆತನನ್ನು ಕರೆತಂದು ವಿಚಾರಣೆ ನಡೆಸಿದಾಗ ಆತನ ನಿಜವಾದ ಗುರುತು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದರು.
ಮಲ್ಟಿಪ್ಲೆಕ್ಸ್‌ನಲ್ಲಿ ಮಾಡೆಲ್ ಜೊತೆ ವಿರಾಜ್ ಪಟೇಲ್ ಜಗಳವಾಡುತ್ತಿದ್ದು ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸ್ ಠಾಣೆಗೆ ಕರೆತರಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಯು ಆರಂಭದಲ್ಲಿ ಪೊಲೀಸರಿಗೆ ತಾನು ಸಿಎಂಒ ಅಧಿಕಾರಿಯಾಗಿದ್ದು, ಮಹಿಳೆಯೊಂದಿಗೆ ಚಿತ್ರ ವೀಕ್ಷಿಸಲು ಬಂದಿದ್ದಾಗಿ ತಿಳಿಸಿದ್ದನು.
ಇದನ್ನೂ ಓದಿ: ವಿವಿ ಸಾಂಸ್ಕೃತಿಕ ಉತ್ಸವದ ವೇಳೆ 2 ಗುಂಪುಗಳ ನಡುವೆ ಘರ್ಷಣೆ: ಹೊಡೆದಾಟದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಸಾವು
ವಿರಾಜ್ ಪಟೇಲ್ ತಾನು ಗಿಫ್ಟ್ ಸಿಟಿಯ ಅಧ್ಯಕ್ಷರು ಎಂದು ಹೇಳಿಕೊಂಡಿದ್ದನು ಎಂದು ಸಹಾಯಕ ಪೊಲೀಸ್ ಕಮಿಷನರ್(ಎಸಿಪಿ) ಎ.ವಿ.ಕಟ್ಕಡ್ ಹೇಳಿದರು. ಆತನ ನಿಜವಾದ ಚಹರೆ ಬಯಲಿಗೆ ಬಂದ ನಂತರ ಆತನ ಜೊತೆಗಿದ್ದ ಮುಂಬೈ ಮೂಲದ ಮಾಡೆಲ್, ಗಿಫ್ಟ್ ಸಿಟಿಯ ಬ್ರಾಂಡ್ ಅಂಬಾಸಿಡರ್ ಆಗಿ ಕೆಲಸ ಕೊಡಿಸುವ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಿದ್ದಳು.
ಈತ ಗಾಂಧಿನಗರದ ನಿವಾಸಿ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ನಗರ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 170 (ನಿರ್ದಿಷ್ಟ ಸ್ಥಾನದಲ್ಲಿ ಸಾರ್ವಜನಿಕ ಸೇವಕನಂತೆ ನಟಿಸುವುದು), 417 (ವಂಚನೆ), 467 (ನಕಲಿ) ಮತ್ತು 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.