ಪ್ರಧಾನಿ ಮೋದಿ 'ಮನ್ ಕಿ ಬಾತ್' 100ನೇ ಸಂಚಿಕೆ: ವಿಶ್ವ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರ, ದೇಶದ 4 ಲಕ್ಷ ಸ್ಥಳಗಳಲ್ಲಿ ಕೇಳಲು ಬಿಜೆಪಿ ವ್ಯವಸ್ಥೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಸಿದ್ಧ ಮನ್ ಕಿ ಬಾತ್'ನ 100ನೇ ಕಂತಿನ ವಿಶೇಷ ಭಾಷಣ ಭಾನುವಾರ ಬೆಳಿಗ್ಗೆ 11 ಗಂಟೆಗೆ ಅಕಾಶವಾಣಿಯಲ್ಲಿ ಪ್ರಸಾರವಾಗಲಿದೆ. ಈ ನೂರನೇ ಸಂಚಿಕೆಯ ಮನ್​ ಕೀ ಬಾತ್​​ ಯುಎಸ್​​ನ ನ್ಯೂಯಾರ್ಕ್​​ನಲ್ಲಿರುವ ವಿಶ್ವ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರಗೊಳ್ಳಲಿದೆ. ಈ ಮೂಲಕ ಐತಿಹಾಸಿಕ-ಅಭೂತಪೂರ್ವ ಎನ್ನಿಸಿಕೊಳ್ಳಲಿದೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಸಿದ್ಧ ಮನ್ ಕಿ ಬಾತ್'ನ 100ನೇ ಕಂತಿನ ವಿಶೇಷ ಭಾಷಣ ಭಾನುವಾರ ಬೆಳಿಗ್ಗೆ 11 ಗಂಟೆಗೆ ಅಕಾಶವಾಣಿಯಲ್ಲಿ ಪ್ರಸಾರವಾಗಲಿದೆ. ಈ ನೂರನೇ ಸಂಚಿಕೆಯ ಮನ್​ ಕೀ ಬಾತ್​​ ಯುಎಸ್​​ನ ನ್ಯೂಯಾರ್ಕ್​​ನಲ್ಲಿರುವ ವಿಶ್ವ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರಗೊಳ್ಳಲಿದೆ. ಈ ಮೂಲಕ ಐತಿಹಾಸಿಕ-ಅಭೂತಪೂರ್ವ ಎನ್ನಿಸಿಕೊಳ್ಳಲಿದೆ.

ವಿಶ್ವ ಸಂಸ್ಥೆಯ ಭಾರತದ ಶಾಶ್ವತ ಆಯೋಗ ಈ ಬಗ್ಗೆ ಟ್ವೀಟ್ ಮಾಡಿದ್ದು ‘ಯುನ್​​​ ಪ್ರಧಾನ ಕಚೇರಿಯ ಟ್ರಸ್ಟ್​ಶಿಪ್​ ಕೌನ್ಸಿಲ್​ ಚೇಂಬರ್​​ನಲ್ಲಿ ಏಪ್ರಿಲ್​ 30ರಂದು ಪ್ರಧಾನಿ ಮೋದಿಯವರ ಮನ್​ ಕೀ ಬಾತ್​ ನೇರ ಪ್ರಸಾರಗೊಳ್ಳಲಿದೆ’ ಎಂದು ಹೇಳಿದೆ.

ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್, ಸಮುದಾಯ ಸಂಸ್ಥೆಗಳ ಜೊತೆಗೆ, ನ್ಯೂಜೆರ್ಸಿಯಲ್ಲಿರುವ ಭಾರತೀಯ-ಅಮೆರಿಕನ್ ಮತ್ತು ಡಯಾಸ್ಪೊರಾ ಸಮುದಾಯದ ಸದಸ್ಯರಿಗೆ 1:30 ಕ್ಕೆ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ‘ಮನ್ ಕಿ ಬಾತ್’ ನ 100 ನೇ ಸಂಚಿಕೆಯ ಪ್ರಸಾರವನ್ನು ಆಯೋಜಿಸುತ್ತಿದೆ.

ಏಪ್ರಿಲ್ 30, 2023 ರಂದು 01.30 ಗಂಟೆಗೆ #MannKiBaat100 ಅನ್ನು ಮಿಸ್ ಮಾಡಿಕೊಳ್ಳಬೇಡಿ! ಗೌರವಾನ್ವಿತ ಪ್ರಧಾನಿ ಮೋದಿ, ಭಾರತೀಯರು, ಭಾರತೀಯ ವಲಸಿಗರು ಮತ್ತು ಪ್ರಪಂಚದಾದ್ಯಂತದ ಕೇಳುಗರೊಂದಿಗೆ ಮನ್ ಕಿ ಬಾತ್ ನನ ಹೆಗ್ಗುರುತು 100 ನೇ ಸಂಚಿಕೆಯನ್ನು ಆಚರಿಸೋಣ ಎಂದು ಕಾನ್ಸುಲೇಟ್‌ ಟ್ವೀಟ್​​ನಲ್ಲಿ ಹೇಳಿದೆ.

2014ರ ಅಕ್ಟೋಬರ್​ 3ರ ವಿಜಯದಶಮಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಮನ್​ ಕೀ ಬಾತ್ ಶುರು ಮಾಡಿದ್ದಾರೆ. ಪ್ರತಿ ತಿಂಗಳ ಕೊನೇ ಭಾನುವಾರ ಅವರು ಈ ರೇಡಿಯೊ ಕಾರ್ಯಕ್ರಮದ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಕಾರ್ಯಕ್ರಮವು ರಾಜಕೀಯೇತರವಾಗಿದ್ದು, ಆರೋಗ್ಯ, ಪರಿಸರ, ನೀರು ರಕ್ಷಣೆ, ಹವಾಮಾನ ವೈಪರೀತ್ಯ, ಸಾಮಾಜಿಕ ಕಾರ್ಯಕ್ರಮಗಳು, ವಿವಿಧ ಕ್ಷೇತ್ರದ ಸಾಧಕರ ಬಗ್ಗೆ ಜನರೊಂದಿಗೆ ಮೋದಿಯವರು ಮಾಹಿತಿ ಹಂಚಿಕೊಳ್ಳುತ್ತಾರೆ.

2014ರಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಮೋದಿಯವರು ಒಮ್ಮೆಯೂ ಇದನ್ನು ತಪ್ಪಿಸದೆ ನಡೆಸಿಕೊಂಡು ಬಂದಿದ್ದು ವಿಶೇಷವಾಗಿದೆ.

ಪ್ರಧಾನಿಯೆಂಬ ಘನ ಹುದ್ದೆಯ ಜವಾಬ್ದಾರಿಗಳು, ಪಕ್ಷಕ್ಕೆ ನೀಡಬೇಕಾದ ಗಮನಗಳು, ಪ್ರವಾಸ, ಸಭೆಗಳು ಏನೇ ಇರಲಿ, ಎಷ್ಟೆಲ್ಲ ಕೆಲಸಗಳೇ ಇರಲಿ ಮೋದಿಯವರು ತಮ್ಮನ್ನು ಜನರೊಂದಿಗೆ ನೇರವಾಗಿ ಸಂಪರ್ಕಿಸುವ ಮನ್​ ಕೀ ಬಾತ್​ನ್ನು ಒಮ್ಮೆಯೂ ಬಿಡಲಿಲ್ಲ. ಇಂತಹ ಮನ್​ ಕೀ ಬಾತ್​ ಏಪ್ರಿಲ್ 30ರಂದು ನೂರನೇ ಆವೃತ್ತಿಗೆ ಕಾಲಿಡುತ್ತಿರುವುದನ್ನು ಕೇಂದ್ರ ಸರ್ಕಾರ ವಿಶೇಷವಾಗಿ ಸಂಭ್ರಮಿಸುತ್ತಿದೆ ಮತ್ತು ಅದಕ್ಕಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನೂ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com