ಆರ್ಥಿಕ ಅಪರಾಧಿಗಳಿಗೆ ಯುನೈಟೆಡ್ ಕಿಂಗ್‌ಡಮ್ ಅಡಗಿಕೊಳ್ಳುವ ತಾಣವಾಗಲು ಬಿಡಲ್ಲ: ಬ್ರಿಟನ್ ಸಚಿವ

ದೇಶ ಬಿಟ್ಟು ಬಿದ್ದಿರುವ ಆರ್ಥಿಕ ಅಪರಾಧಿಗಳು ವಿಜಯ್ ಮಲ್ಯ ಮತ್ತು ನೀರವ್ ಮೋದಿಯ ಹಸ್ತಾಂತರಕ್ಕೆ ಭಾರತದ ನಿರಂತರ ಒತ್ತಡದ ಮಧ್ಯೆ, ನ್ಯಾಯದಿಂದ ತಪ್ಪಿಸಿಕೊಳ್ಳಲು ಬಯಸುವವರು ಅಡಗಿಕೊಳ್ಳಲು ಬ್ರಿಟನ್ ಸುರಕ್ಷಿತ ತಾಣವಾಗಲು ಬಿಡುವುದಿಲ್ಲ ಎಂದು ಬ್ರಿಟಿಷ್ ಭದ್ರತಾ ಸಚಿವ ಟಾಮ್ ತುಗೆಂಧತ್ ಹೇಳಿದ್ದಾರೆ.
ವಿಜಯ್ ಮಲ್ಯ-ನೀರವ್ ಮೋದಿ
ವಿಜಯ್ ಮಲ್ಯ-ನೀರವ್ ಮೋದಿ

ನವದೆಹಲಿ: ದೇಶ ಬಿಟ್ಟು ಬಿದ್ದಿರುವ ಆರ್ಥಿಕ ಅಪರಾಧಿಗಳು ವಿಜಯ್ ಮಲ್ಯ ಮತ್ತು ನೀರವ್ ಮೋದಿಯ ಹಸ್ತಾಂತರಕ್ಕೆ ಭಾರತದ ನಿರಂತರ ಒತ್ತಡದ ಮಧ್ಯೆ, ನ್ಯಾಯದಿಂದ ತಪ್ಪಿಸಿಕೊಳ್ಳಲು ಬಯಸುವವರು ಅಡಗಿಕೊಳ್ಳಲು ಬ್ರಿಟನ್ ಸುರಕ್ಷಿತ ತಾಣವಾಗಲು ಬಿಡುವುದಿಲ್ಲ ಎಂದು ಬ್ರಿಟಿಷ್ ಭದ್ರತಾ ಸಚಿವ ಟಾಮ್ ತುಗೆಂಧತ್ ಹೇಳಿದ್ದಾರೆ.

ನಿರ್ದಿಷ್ಟ ಪ್ರಕರಣಗಳನ್ನು ಉಲ್ಲೇಖಿಸದೆ, ಹಸ್ತಾಂತರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕಾನೂನು ಪ್ರಕ್ರಿಯೆಗಳಿಗೆ ಬದ್ಧವಾಗಿರಬೇಕು ಎಂದು ತುಗೆಂಧರ್ ಹೇಳಿದರು. ಭಾರತ ಮತ್ತು ಬ್ರಿಟನ್ ಕಾನೂನು ಪ್ರಕ್ರಿಯೆಗಳನ್ನು ಹೊಂದಿದ್ದೇವೆ. ಆದರೆ ಯುಕೆ ಸರ್ಕಾರವು ಸಂಪೂರ್ಣವಾಗಿ ಸ್ಪಷ್ಟವಾಗಿದೆ. ನ್ಯಾಯದಿಂದ ತಪ್ಪಿಸಿಕೊಳ್ಳಲು ಬಯಸುವವರು ಅಡಗಿಕೊಳ್ಳುವ ಸ್ಥಳವಾಗಲು ನಮಗೆ ಯಾವುದೇ ಉದ್ದೇಶವಿಲ್ಲ ಎಂದು ಅವರು ತಿಳಿಸಿದರು. 

ಆಗಸ್ಟ್ 10-12ರವರೆಗೆ ಮೂರು ದಿನಗಳ ಕಾಲ ಕೋಲ್ಕತ್ತಾದಲ್ಲಿ ನಡೆದ ಜಿ20 ಭ್ರಷ್ಟಾಚಾರ ವಿರೋಧಿ ಸಚಿವರ ಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದ ತುಗೆಂಧರ್ ಅವರು ದೆಹಲಿಯಲ್ಲಿ ಅವರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಾತುಕತೆ ನಡೆಸಿದರು.

ಯುಕೆಯಲ್ಲಿ ನೆಲೆಸಿರುವ ಮಲ್ಯ ಮತ್ತು ನೀರವ್ ಮೋದಿ ಸೇರಿದಂತೆ ಹಲವಾರು ಆರ್ಥಿಕ ಅಪರಾಧಿಗಳನ್ನು ಹಸ್ತಾಂತರಿಸಬೇಕೆಂಬ ಭಾರತದ ನಿರಂತರ ಬೇಡಿಕೆಯ ಕುರಿತ ಪ್ರಶ್ನೆಗೆ ಬ್ರಿಟಿಷ್ ಭದ್ರತಾ ಸಚಿವರು ಉತ್ತರಿಸುತ್ತಿದ್ದರು.

ದೇಶ ಬಿಟ್ಟು ಪಲಾಯನವಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಭಾರತದಲ್ಲಿ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ವಿಚಾರಣೆಗೆ ಹಾಜರಾಗಲು ಬಯಸಿದ್ದಾರೆ. ಇನ್ನು 52 ವರ್ಷದ ಉದ್ಯಮಿ ಕಳೆದ ವರ್ಷ ಅಂದಾಜು USD 2 ಶತಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ಹಗರಣ ಪ್ರಕರಣದಲ್ಲಿ ಭಾರತಕ್ಕೆ ಹಸ್ತಾಂತರಿಸುವುದರ ವಿರುದ್ಧ ಬಿಟ್ರನ್ ಅತ್ಯುನ್ನತ ನ್ಯಾಯಾಲಯದಲ್ಲಿ ಕಾನೂನು ಹೋರಾಟದಲ್ಲಿ ಸೋತಿದ್ದರು.

ಕಿಂಗ್‌ಫಿಶರ್ ಏರ್‌ಲೈನ್ಸ್‌ಗಾಗಿ ಹಲವು ಬ್ಯಾಂಕ್ ಗಳಿಂದ 9,000 ಕೋಟಿ ರೂಪಾಯಿ ಸಾಲ ಪಡೆದಿರುವ ವಿಜಯ್ ಮಲ್ಯ 2016ರ ಮಾರ್ಚ್ ನಲ್ಲಿ ಭಾರತ ಬಿಟ್ಟು ಯುಕೆಗೆ ಪಲಾಯನ ಮಾಡಿದ್ದರು.

NSA ದೋವಲ್ ಅವರೊಂದಿಗಿನ ಮಾತುಕತೆಯ ಕುರಿತ ಪ್ರಶ್ನೆಗೆ ಬ್ರಿಟಿಷ್ ಭದ್ರತಾ ಸಚಿವರು ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದರು. ಆದರೆ ವಿಶಾಲ ದ್ವಿಪಕ್ಷೀಯ ಸಹಕಾರವು ಎರಡು ರಾಷ್ಟ್ರಗಳ ಭದ್ರತೆ ಮತ್ತು ನಾಗರಿಕರ ಸಮೃದ್ಧಿಯ ಮೇಲೆ ಕೇಂದ್ರೀಕೃತವಾಗಿದೆ ಎಂದರು. 'ನಾವು ನಮ್ಮ ಎರಡು ರಾಷ್ಟ್ರಗಳ ಭದ್ರತೆ ಮತ್ತು ನಮ್ಮ ನಾಗರಿಕರ ಏಳಿಗೆ, ದೇಶ ಮತ್ತು ವಿದೇಶಗಳಲ್ಲಿ ತಮ್ಮ ವ್ಯವಹಾರವನ್ನು ನಡೆಸುವ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಅವರು ಹೇಳಿದರು.

"ಆದರೆ ನಾವು ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಮಾತನಾಡುತ್ತಿದ್ದೇವೆ. ಚೀನಾದ ಸವಾಲು ನಮ್ಮಿಬ್ಬರನ್ನೂ ಎದುರಿಸುತ್ತಿದೆ. ನಿಮ್ಮ ಉತ್ತರದ ಗಡಿಯಲ್ಲಿನ ಸಮಸ್ಯೆಗಳನ್ನು ನಾವು ನೋಡಿದ್ದೇವೆ. ತಂತ್ರಜ್ಞಾನವು ಬದಲಾಗಿರುವ ಮಾರ್ಗವನ್ನು ಪರಿಶೀಲಿಸಿದ್ದೇವೆ. ನಾವು ಹೆಚ್ಚಿನ ಸಹಕಾರವನ್ನು ಹೊಂದಬೇಕಾದ ಕ್ಷೇತ್ರಗಳಾಗಿ ಅದನ್ನು ಪರಿಹರಿಸಬೇಕಾದ ವಿಧಾನವನ್ನು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.

ಕೃತಕ ಬುದ್ಧಿಮತ್ತೆಗೆ (AI) ಸಂಬಂಧಿಸಿದ ಹೊಸ ತಂತ್ರಜ್ಞಾನಗಳಲ್ಲಿ ಭಾರತ ಮತ್ತು ಯುಕೆ ಹೇಗೆ ಸಹಕರಿಸುತ್ತಿವೆ ಎಂಬುದನ್ನು ತುಗೆಂಧತ್ ಎತ್ತಿ ತೋರಿಸಿದರು. "ಭಾರತವು ಕೇವಲ ಭಾರತೀಯ AI ಯ ಕೇಂದ್ರವಲ್ಲ, ಇದು ಬ್ರಿಟಿಷ್ AI ನ ಕೇಂದ್ರವಾಗಿದೆ ಎಂದು ನಾವು ಇಂದು ನೋಡುತ್ತೇವೆ. ಭಾರತದಲ್ಲಿ ಅನೇಕ ಸಂಸ್ಥೆಗಳ ಡೇಟಾ ಪಾಯಿಂಟ್‌ಗಳಿವೆ. ಅವರ ಡೇಟಾ ಮೂಲಗಳು ಇಲ್ಲಿ ಹೆಚ್ಚಾಗಿ ಬೆಂಗಳೂರಿನಲ್ಲಿವೆ. ಡೇಟಾವನ್ನು ವಿಶ್ಲೇಷಿಸಲು ಮತ್ತು ತಮ್ಮ ವ್ಯವಹಾರಗಳ ಉತ್ಪಾದಕತೆಯನ್ನು ಸುಧಾರಿಸಲು ಭಾರತೀಯ AI ತಜ್ಞರ ಅಸಾಧಾರಣ ತಾಂತ್ರಿಕ ಸಾಮರ್ಥ್ಯಗಳನ್ನು ಬಳಸುತ್ತವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com