ನಾವು ಪಕ್ಷದ ಸಿದ್ಧಾಂತವನ್ನು ಬಲಪಡಿಸುತ್ತೇವೆ, ಅದನ್ನು ಜನರ ಬಳಿಗೆ ಕೊಂಡೊಯ್ಯುತ್ತೇವೆ: ಸಿಡಬ್ಲ್ಯುಸಿ ಪುನರ್ ರಚನೆ ಬಳಿಕ ಸಚಿನ್ ಪೈಲಟ್
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು (ಸಿಡಬ್ಲ್ಯುಸಿ) ಪುನರ್ ರಚಿಸಿದ್ದು, ಸಮಿತಿಯಲ್ಲಿ ತಮ್ಮನ್ನು ಸದಸ್ಯರನ್ನಾಗಿ ಮಾಡಿದ್ದಕ್ಕೆ ಪಕ್ಷದ ಉನ್ನತ ನಾಯಕತ್ವಕ್ಕೆ ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಭಾನುವಾರ ಕೃತಜ್ಞತೆ ಸಲ್ಲಿಸಿದ್ದಾರೆ.
Published: 20th August 2023 04:36 PM | Last Updated: 20th August 2023 04:36 PM | A+A A-

ಸಚಿನ್ ಪೈಲಟ್
ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು (ಸಿಡಬ್ಲ್ಯುಸಿ) ಪುನರ್ ರಚಿಸಿದ್ದು, ಸಮಿತಿಯಲ್ಲಿ ತಮ್ಮನ್ನು ಸದಸ್ಯರನ್ನಾಗಿ ಮಾಡಿದ್ದಕ್ಕೆ ಪಕ್ಷದ ಉನ್ನತ ನಾಯಕತ್ವಕ್ಕೆ ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಭಾನುವಾರ ಕೃತಜ್ಞತೆ ಸಲ್ಲಿಸಿದ್ದಾರೆ. ಪಕ್ಷದ 'ಸಿದ್ಧಾಂತವನ್ನು ಬಲಪಡಿಸಲು' ಮತ್ತು ಅದನ್ನು ಇನ್ನಷ್ಟು ಬಲವಾಗಿ ಜನರ ಬಳಿಗೆ ಕೊಂಡೊಯ್ಯುವ ಪ್ರತಿಜ್ಞೆ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಮನಮೋಹನ್ ಸಿಂಗ್, ಶಶಿ ತರೂರ್, ನಾಸಿರ್ ಹುಸೇನ್, ಅಲ್ಕಾ ಲಂಬಾ, ಸುಪ್ರಿಯಾ ಶ್ರೀನಾಟೆ, ಪವನ್ ಖೇರಾ ಸೇರಿದಂತೆ 39 ಮಂದಿ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದಲ್ಲದೆ ಪಟ್ಟಿಯಲ್ಲಿ 13 ವಿಶೇಷ ಆಹ್ವಾನಿತರು ಸೇರಿದಂತೆ 32 ಖಾಯಂ ಸದಸ್ಯರನ್ನು ಹೊಂದಿದೆ.
ಹೊಸ ಸಿಡಬ್ಲ್ಯುಸಿ ಸದಸ್ಯರ ಪಟ್ಟಿಯಲ್ಲಿ ಸಚಿನ್ ಪೈಲಟ್ ಕೂಡ ಸ್ಥಾನ ಪಡೆದಿದ್ದಾರೆ.
कांग्रेस वर्किंग कमेटी (CWC) का सदस्य बनाए जाने पर मैं आदरणीय कांग्रेस अध्यक्ष श्री मल्लिकार्जुन खरगे जी, CPP चेयरपर्सन श्रीमती सोनिया गांधी जी एवं पूर्व अध्यक्ष श्री राहुल गांधी जी का आभार व्यक्त करता हूं।
— Sachin Pilot (@SachinPilot) August 20, 2023
हम सभी कांग्रेस की रीति-नीति व विचारधारा को सशक्त करते हुए उसे और अधिक… https://t.co/LjK7N8WF4s
'ನನ್ನನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಮಾಡಿದ್ದಕ್ಕಾಗಿ ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಪೈಲಟ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
'ನಾವು ಕಾಂಗ್ರೆಸ್‌ನ ಸಂಪ್ರದಾಯಗಳು, ನೀತಿ ಮತ್ತು ಸಿದ್ಧಾಂತಗಳನ್ನು ಬಲಪಡಿಸುತ್ತೇವೆ. ಅವುಗಳನ್ನು ಹೆಚ್ಚು ಬಲವಾಗಿ ಜನರ ಬಳಿಗೆ ಕೊಂಡೊಯ್ಯುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಡಬ್ಲ್ಯುಸಿ ಪುನರ್ ರಚನೆ ಮಾಡಿದ ಮಲ್ಲಿಕಾರ್ಜುನ ಖರ್ಗೆ: ಶಶಿ ತರೂರ್, ಸಚಿನ್ ಪೈಲಟ್ ಹೊಸ ತಂಡಕ್ಕೆ ಸೇರ್ಪಡೆ
ಈ ವರ್ಷದ ಕೊನೆಯಲ್ಲಿ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಸಿಡಬ್ಲ್ಯುಸಿಯಲ್ಲಿ ಸಚಿನ್ ಪೈಲಟ್ ಅವರಿಗೆ ಸ್ಥಾನ ದೊರೆತಿದೆ.
2018ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದಾಗಿನಿಂದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಬಿನ್ನಾಭಿಪ್ರಾಯಗಳು ಮನೆಮಾಡಿವೆ.
ಇದನ್ನೂ ಓದಿ: ಕಾಂಗ್ರೆಸ್ ನನ್ನ ಸಮಸ್ಯೆ ಗಮನಿಸಿದೆ, ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ: ಸಚಿನ್ ಪೈಲಟ್
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಲಹೆಯ ಮೇರೆಗೆ ಗೆಹ್ಲೋಟ್ ಅವರೊಂದಿಗಿನ ಮನಸ್ತಾಪವನ್ನು ಸಮಾಧಿ ಮಾಡಿದ್ದೇನೆ ಎಂದು ಪೈಲಟ್ ಕಳೆದ ತಿಂಗಳು ಸ್ಪಷ್ಟಪಡಿಸಿದ್ದರು. ವಿಧಾನಸಭೆ ಚುನಾವಣೆಗೆ ಹೋಗಲು ಸಾಮೂಹಿಕ ನಾಯಕತ್ವವೇ 'ಏಕೈಕ ಮಾರ್ಗ' ಎಂದು ಪ್ರತಿಪಾದಿಸಿದ್ದರು.