INDIA ಮೈತ್ರಿಕೂಟಕ್ಕೆ ಇನ್ನೂ ಎರಡು ಪ್ರಾದೇಶಿಕ ಪಕ್ಷಗಳ ಸೇರ್ಪಡೆ

ಮುಂಬೈನಲ್ಲಿ ಗುರುವಾರ ನಡೆಯಲಿರುವ ಪ್ರತಿಪಕ್ಷಗಳ ನಿರ್ಣಾಯಕ ಮೂರನೇ ಸುತ್ತಿನ ಸಭೆಗೂ ಮುಂಚಿತವಾಗಿ, ಮತ್ತೆ ಎರಡು ಪ್ರಾದೇಶಿಕ ಪಕ್ಷಗಳು ಬುಧವಾರ INDIA ಮೈತ್ರಿಕೂಟ ಸೇರಿವೆ. ಇದರೊಂದಿಗೆ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.
ವಿಪಕ್ಷಗಳ ಮಿತ್ರಕೂಟ INDIA
ವಿಪಕ್ಷಗಳ ಮಿತ್ರಕೂಟ INDIA

ಮುಂಬೈ: ಮುಂಬೈನಲ್ಲಿ ಗುರುವಾರ ನಡೆಯಲಿರುವ ಪ್ರತಿಪಕ್ಷಗಳ ನಿರ್ಣಾಯಕ ಮೂರನೇ ಸುತ್ತಿನ ಸಭೆಗೂ ಮುಂಚಿತವಾಗಿ, ಮತ್ತೆ ಎರಡು ಪ್ರಾದೇಶಿಕ ಪಕ್ಷಗಳು ಬುಧವಾರ INDIA ಮೈತ್ರಿಕೂಟ ಸೇರಿವೆ. ಇದರೊಂದಿಗೆ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.

ಭಾರತೀಯ ರೈತರು ಮತ್ತು ಕಾರ್ಮಿಕರ ಪಕ್ಷ(PWP), ಮಹಾರಾಷ್ಟ್ರದ ಮಾರ್ಕ್ಸ್‌ವಾದಿ ರಾಜಕೀಯ ಪಕ್ಷ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟ ಸೇರಿವೆ.

28 ರಾಜಕೀಯ ಪಕ್ಷಗಳ 63 ಪ್ರತಿನಿಧಿಗಳು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ INDIA ಸಭೆಯಲ್ಲಿ ಭಾಗವಹಿಸಲಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಎದುರಿಸಲು ತಮ್ಮ ಸಾಮಾನ್ಯ ಪ್ರಚಾರ ಕಾರ್ಯತಂತ್ರವನ್ನು ರೂಪಿಸಲು ಪಾಟ್ನಾ ಮತ್ತು ಬೆಂಗಳೂರಿನಲ್ಲಿ ಸಭೆ ನಡೆಸಿದ್ದ ಪ್ರತಿಪಕ್ಷಗಳು ಈಗ ಮೂರನೇ ಸುತ್ತಿನ ಚಿಂತನ-ಮಂಥನ ಸಭೆಯನ್ನು ಮುಂಬೈನಲ್ಲಿ ನಡೆಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com