ಅಕ್ಕಿ ಬೆಲೆ ವರ್ಷದಲ್ಲಿ ಶೇ.13 ರಷ್ಟು ಏರಿಕೆ, ಆದರೆ ಸರ್ಕಾರದ ಅಕ್ಕಿ ಕೇಳುವವರೇ ಇಲ್ಲ!

ಅಕ್ಕಿ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.13 ರಷ್ಟು ಹೆಚ್ಚಾಗಿದೆ. ಆದರೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ(ಎಫ್‌ಸಿಐ) ತನಗೆ ಹಂಚಿಕೆ ಮಾಡಲಾದ ಅಕ್ಕಿಯ ಪೈಕಿ ಕಳೆದ 6 ತಿಂಗಳಲ್ಲಿ ಶೇ.5ಕ್ಕಿಂತ ಕಡಿಮೆ ಮಾತ್ರ ಮಾರಾಟ ಮಾಡಿದೆ.
ಅಕ್ಕಿ (ಸಂಗ್ರಹ ಚಿತ್ರ)
ಅಕ್ಕಿ (ಸಂಗ್ರಹ ಚಿತ್ರ)

ನವದೆಹಲಿ: ಅಕ್ಕಿ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.13 ರಷ್ಟು ಹೆಚ್ಚಾಗಿದೆ. ಆದರೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ(ಎಫ್‌ಸಿಐ) ತನಗೆ ಹಂಚಿಕೆ ಮಾಡಲಾದ ಅಕ್ಕಿಯ ಪೈಕಿ ಕಳೆದ 6 ತಿಂಗಳಲ್ಲಿ ಶೇ.5ಕ್ಕಿಂತ ಕಡಿಮೆ ಮಾತ್ರ ಮಾರಾಟ ಮಾಡಿದೆ. 

ಈ ಮಧ್ಯೆ, ಭಾರತೀಯ ರಿಸರ್ವ್ ಬ್ಯಾಂಕ್, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಅಕ್ಕಿಯ ಬೆಲೆ 13% ರಷ್ಟು ಏರಿಕೆಯಾಗಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಭಾರತ ಸರ್ಕಾರ ದೇಶೀಯ ಮಾರುಕಟ್ಟೆಯಲ್ಲಿ (OMSS-D) ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಗಳ ಅಡಿಯಲ್ಲಿ 25 ಲಕ್ಷ ಮೆಟ್ರಿಕ್ ಟನ್‌ಗಳನ್ನು (LMT) ಹಂಚಿಕೆ ಮಾಡಿದೆ. ಆದರೆ FCI ಪ್ರಾದೇಶಿಕ ಕಚೇರಿಗಳು ಇದನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದ್ದರೂ ಸಹ 1.19 LMT ಅಕ್ಕಿಯನ್ನು ಮಾತ್ರ ಮುಕ್ತ ಮಾರುಕಟ್ಟೆಯಲ್ಲಿ ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗಿದೆ. 

ವ್ಯಾಪಾರಸ್ಥರು ಹರಾಜು ಮತ್ತು ಅಕ್ಕಿ ಖರೀದಿಸುವುದರಲ್ಲಿ ಏಕೆ ಭಾಗವಹಿಸುತ್ತಿಲ್ಲ ಎಂಬುದರ ಬಗ್ಗೆ ಸರ್ಕಾರಕ್ಕೆ ಸುಳಿವಿಲ್ಲ. ಭಾಗಿದಾರತ್ವವನ್ನು ಉತ್ತೇಜಿಸುವುದಕ್ಕೆ ಸರ್ಕಾರ ಬಿಡ್ ಮಾಡುವ ಪ್ರಮಾಣವನ್ನು 1 ರಿಂದ 2000 ಮೆಟ್ರಿಕ್ ಟನ್ ಗಳಿಗೆ ಏರಿಕೆ ಮಾಡಿದೆ. 

ಅಕ್ಕಿಗೆ ಬೆಂಬಲ ಬೆಲೆಯನ್ನು 2,900 ರಿಂದ ರೂ. 3100/ಕ್ವಿಂಟಲ್ ನ್ನು ಅಧಿಕಾರಿಗಳು ನಿಗದಿಪಡಿಸಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಅಗ್ಗದ ಮತ್ತು ಉತ್ತಮ ಗುಣಮಟ್ಟದ ಅಕ್ಕಿ ಲಭ್ಯವಿದೆ ಎನ್ನುತ್ತಾರೆ ಸರಕು ತಜ್ಞರು. "OMSS (D) ನೀತಿಯ ಪ್ರಯೋಜನಗಳನ್ನು ಸಾಮಾನ್ಯ ಜನರು ಪಡೆದುಕೊಳ್ಳಬಹುದೆಂಬುದನ್ನು ಖಾತ್ರಿಪಡಿಸಿಕೊಳ್ಳಲು ನಿಯಮಿತ ಜಾಹೀರಾತುಗಳನ್ನು ನೀಡಲಾಗುತ್ತಿದೆ" ಎಂದು ಎಫ್ ಸಿಐ ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಕೆ ಮೀನಾ ಹೇಳಿದ್ದಾರೆ. 

ವರದಿಗಾರರಿಗೆ ಬೇಯಿಸಿದ ಅನ್ನದ ಮಾದರಿಗಳನ್ನು ಬಡಿಸುವ ಮೂಲಕ ಎಫ್ ಸಿಐ ನಿಂದ ಕಳಪೆ ಗುಣಮಟ್ಟದ ಅಕ್ಕಿ ಮಾರಾಟವಾಗುತ್ತಿದೆ ಎಂಬ ತರ್ಕವನ್ನು ಸರ್ಕಾರ ತಳ್ಳಿಹಾಕುವ ಪ್ರಯತ್ನ ಮಾಡಿದೆ.

"ಸೆಂಟ್ರಲ್ ಪೂಲ್ ಅಡಿಯಲ್ಲಿ ನೀಡಲಾಗುವ ಅಕ್ಕಿ ಅತ್ಯುತ್ತಮ ಗುಣಮಟ್ಟದ್ದಾಗಿದೆ ಮತ್ತು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಸುಲಭ ಮತ್ತು ಕೈಗೆಟುಕುವ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಇ-ಹರಾಜಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ವ್ಯಾಪಾರಿಗಳನ್ನು ಆಹ್ವಾನಿಸಲಾಗಿದೆ" ಎಂದು ಮೀನಾ ಹೇಳಿದ್ದಾರೆ. 

ಪ್ರಸ್ತುತ ಎಫ್‌ಸಿಐ ಕೇಂದ್ರೀಯ ಪೂಲ್‌ನಲ್ಲಿ ಗೋಧಿ ಮತ್ತು ಅಕ್ಕಿ ಇದೆ. ಇದು ಸರ್ಕಾರದ ವಿವಿಧ ಯೋಜನೆಗಳನ್ನು ಪೂರೈಸಲು ಬಫರ್ ಅಗತ್ಯಕ್ಕಿಂತ ಹೆಚ್ಚಾಗಿರುತ್ತದೆ. ಡಿಸೆಂಬರ್ 14 ರ ಹೊತ್ತಿಗೆ, ದೇಶದ ಗೋಧಿ ಬಫರ್ ಸ್ಟಾಕ್ 181.79 LMT ಆಗಿದ್ದರೆ, ಅಕ್ಕಿ ಬಫರ್ ಸ್ಟಾಕ್ 420.29 LMT ಆಗಿದೆ.

ಆದಾಗ್ಯೂ, ಗೋಧಿ ಬೆಲೆಯನ್ನು ಸ್ವಲ್ಪಮಟ್ಟಿಗೆ ಇಳಿಸಲು ಸರ್ಕಾರವು ಸುಮಾರು 48.12 LMT ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಯಶಸ್ವಿಯಾಗಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಸರ್ಕಾರ ಇನ್ನೂ 53 ಎಲ್‌ಎಂಟಿ ಗೋಧಿಯನ್ನು ಮಾರಾಟ ಮಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com