ನಿಲ್ದಾಣಗಳ ಮರು ನಿರ್ಮಾಣ, ಇನ್ನಷ್ಟು ವಂದೇ ಭಾರತ್ ರೈಲು: ರೈಲ್ವೆ ಸಚಿವರು ನೀಡಿದ ಬಜೆಟ್ ಬಳಕೆಯ ವಿವರ ಹೀಗಿದೆ...
ರೈಲ್ವೆ ಇಲಾಖೆಗೆ ಈ ವರೆಗಿನ ಅನುದಾನದಲ್ಲಿ ಅತಿ ಹೆಚ್ಚಿನ ಅನುದಾನವನ್ನು 2023-24 ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಲಾಗಿದ್ದು, ಬಂಡವಾಳದ ವೆಚ್ಚವನ್ನು 2.41 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
Published: 01st February 2023 08:23 PM | Last Updated: 01st February 2023 08:23 PM | A+A A-

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ನವದೆಹಲಿ: ರೈಲ್ವೆ ಇಲಾಖೆಗೆ ಈ ವರೆಗಿನ ಅನುದಾನದಲ್ಲಿ ಅತಿ ಹೆಚ್ಚಿನ ಅನುದಾನವನ್ನು 2023-24 ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಲಾಗಿದ್ದು, ಬಂಡವಾಳದ ವೆಚ್ಚವನ್ನು 2.41 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಬಜೆಟ್ ಬಳಿಕ ಮಾತನಾಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಬಜೆಟ್ ನ ಅನುದಾನವನ್ನು ರೈಲ್ವೆ ಹೇಗೆಲ್ಲಾ ಬಳಸಿಕೊಳ್ಳಲು ಯೋಜನೆ ಹೊಂದಿದೆ ಎಂಬ ಬಗ್ಗೆ ಮಾತನಾಡಿದ್ದಾರೆ.
1,275 ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸಲಾಗುತ್ತಿದೆ. ವಂದೇ ಭಾರತ್ ರೈಲುಗಳ ಉತ್ಪಾದನೆಯನ್ನು ನವೀಕರಿಸಲಾಗುತ್ತದೆ. ರೈಲ್ವೆಗೆ 2.41 ಕೋಟಿ ರೂಪಾಯಿ ಕೊಟ್ಟಿರುವುದು ಬಹುದೊಡ್ಡ ಬದಲಾವಣೆಯಾಗಿದ್ದು, ಪ್ರಯಾಣಿಕರ ನಿರೀಕ್ಷೆಗಳನ್ನು ಈಡೇರಿಸುತ್ತದೆ.
ಇದನ್ನೂ ಓದಿ: ಕೇಂದ್ರ ಬಜೆಟ್ 2023: ರೈಲ್ವೆಗೆ ಅತಿ ಹೆಚ್ಚು 2.4 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ
ಆತ್ಮನಿರ್ಭರ್ ಭಾರತ್ ಯೋಜನೆಯಡಿ 1,275 ನಿಲ್ದಾಣಗಳನ್ನು ಮರು ನಿರ್ಮಾಣ ಮಾಡಲಾಗುತ್ತಿದೆ. ಹರ್ಯಾಣದ ಸೋನಿಪಾಟ್ ಹಾಗೂ ಮಹಾರಾಷ್ಟ್ರದ ಲಾತೂರ್ ನಲ್ಲಿ ವಂದೇ ಭಾರತ್ ರೈಲುಗಳನ್ನು ಚೆನ್ನೈ ನ ಐಸಿಎಫ್ ನ ಹೊರತಾಗಿ ವಂದೇ ಭಾರತ್ ರೈಲುಗಳನ್ನು ಇನ್ನು ಮುಂದೆ ಹರ್ಯಾಣ ಹಾಗೂ ಮಹಾರಾಷ್ಟ್ರಗಳಲ್ಲಿಯೂ ನಿರ್ಮಾಣ ಮಾಡಲಾಗುತ್ತದೆ. ಇದು ವಂದೇ ಭಾರತ್ ರೈಲುಗಳ ಮೂಲಕ ದೇಶದ ಪ್ರತಿ ಮೂಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಧಾನಿ ಮೋದಿ ಅವರ ಕನಸನ್ನು ಈಡೇರಿಸುತ್ತದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಡಿಸೆಂಬರ್ ವೇಳೆಗೆ ಹೈಡ್ರೋಜನ್ ಚಾಲಿತ ಪ್ರಯಾಣಿಕ ರೈಲುಗಳಿಗೆ ಚಾಲನೆ ಸಿಗಲಿದೆ. ಹೈಡ್ರೋಜನ್ ಚಾಲಿತ ರೈಲನ್ನು ಭಾರತದಲ್ಲೇ ವಿನ್ಯಾಸಗೊಳಿಸಿ ತಯಾರಿಸಲಾಗುತ್ತದೆ. ಮೊದಲ ಬಾರಿಗೆ ಅದನ್ನು ಕಲ್ಕಾ-ಶಿಮ್ಲಾ ಮಾದರಿಯ ಪಾರಂಪರಿಕ ಸರ್ಕ್ಯೂಟ್ ನಲ್ಲಿ ಓಡಿಸಲಾಗುತ್ತದೆ. ನಂತರದ ದಿನಗಳಲ್ಲಿ ಅದನ್ನು ಬೇರೆಡೆಗೆ ವಿಸ್ತರಿಸಲಾಗುತ್ತದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.