ಗುಜರಾತ್: ಮುಂಬೈ ನಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಬಳಿಕ ಬಾಲಕಿಗೆ ಹೊಸ 'ಕೈ' ಕಸಿ!

ಜನ್ಮತಃ ಕೈ ನ ಸಮಸ್ಯೆ ಹೊಂದಿದ್ದ ಬಾಲಕಿಗೆ ಮುಂಬೈ ನ ಆಸ್ಪತ್ರೆಯಲ್ಲಿ ನಡೆದ ಶಸ್ತ್ರ ಚಿಕಿತ್ಸೆ ಅತ್ಯಪರೂಪದ್ದಾಗಿದ್ದು ದೇಶದಲ್ಲೇ ಮೊದಲು ಎಂಬ ಹೆಗ್ಗಳಿಕೆ ಪಡೆದಿದೆ. 
ಮುಂಬೈ ನಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಬಳಿಕ ಬಾಲಕಿಗೆ ಹೊಸ 'ಕೈ'
ಮುಂಬೈ ನಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಬಳಿಕ ಬಾಲಕಿಗೆ ಹೊಸ 'ಕೈ'

ಮುಂಬೈ: ಜನ್ಮತಃ ಕೈ ನ ಸಮಸ್ಯೆ ಹೊಂದಿದ್ದ ಬಾಲಕಿಗೆ ಮುಂಬೈ ನ ಆಸ್ಪತ್ರೆಯಲ್ಲಿ ನಡೆದ ಶಸ್ತ್ರ ಚಿಕಿತ್ಸೆ ಅತ್ಯಪರೂಪದ್ದಾಗಿದ್ದು ದೇಶದಲ್ಲೇ ಮೊದಲು ಎಂಬ ಹೆಗ್ಗಳಿಕೆ ಪಡೆದಿದೆ. 

ಅತ್ಯಂತ ಸಂಕೀರ್ಣ ಹಾಗೂ ಪ್ರಯಾಸದ ಶಸ್ತ್ರ ಚಿಕಿತ್ಸೆ ಇದಾಗಿದ್ದು, 13 ಗಂಟೆಗಳ ಕಾಲ ವೈದ್ಯರು ನಡೆಸಿದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.

18 ವರ್ಷಗಳ ಬಾಲಕಿ ಸಮಿಯಾ ಮನ್ಸೂರಿ ಮೂಲತಃ ಗುಜರಾತ್ ನ ಭರೂಚ್ ನವರಾಗಿದ್ದು, ಜನ್ಮಜಾತ ಸಮಸ್ಯೆಯಾಗಿದ್ದ ಹ್ಯಾಂಡ್ ಅಪ್ಲಾಸಿಯಾದಿಂದ ಬಳಲುತ್ತಿದ್ದರು. ಈ ಸಮಸ್ಯೆಯಿಂದಾಗಿ ಆಕೆಯ ಬಲಗೈ ಬೆಳವಣಿಗೆ ಸಾಧ್ಯವಾಗಿರಲಿಲ್ಲ. 

ಆಕೆಯ ಮುಂದೋಳು, ಮಣಿಕಟ್ಟು ಮತ್ತು ಕೈ ಬೆಳವಣಿಗೆಯಲ್ಲಿ ತೀವ್ರವಾಗಿ ಕೊರತೆ ಎದುರಿಸುತ್ತಿದ್ದವು. ಆಕೆ ಚಿಕ್ಕ ಬೆರಳುಗಳನ್ನು ಹೊಂದಿದ್ದಳು ವಿರೂಪತೆಯ ಕಾರಣದಿಂದಾಗಿ ಆಕೆಯ ಕೈ ನ ಎಲ್ಲಾ ರಕ್ತ ನಾಳಗಳು,  ಸ್ನಾಯುಗಳು, ಮೂಳೆಗಳು ಮತ್ತು ನರಗಳು ಸಾಮಾನ್ಯಕ್ಕಿಂತ ಚಿಕ್ಕದಾಗಿದ್ದವು ಎಂದು ಶಸ್ತ್ರ ಚಿಕಿತ್ಸೆಯ ನೇತೃತ್ವ ವಹಿಸಿದ್ದ ಗ್ಲೋಬಲ್ ಆಸ್ಪತ್ರೆಗಳ ಹಿರಿಯ ಸಲಹೆಗಾರ, ಪ್ಲಾಸ್ಟಿಕ್, ಕೈ ಮತ್ತು ಪುನರ್ನಿರ್ಮಾಣ ಮೈಕ್ರೋಸರ್ಜನ್ ವೈದ್ಯರಾದ ಡಾ. ನೀಲೇಶ್ ಸತ್ಭಾಯ್ ಹೇಳಿದ್ದಾರೆ. 

ಬಾಲಕಿಯ ಕುಟುಂಬ ಸದಸ್ಯರು, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು ಆದರೆ ಸೂಕ್ತ ಚಿಕಿತ್ಸೆ ಸಾಧ್ಯವಾಗಿರಲಿಲ್ಲ. ಮಗುವಿನ ಕೈ ಸರಿಹೋಗುವ ನಿರೀಕ್ಷೆಯನ್ನೇ ಆಕೆಯ ಪೋಷಕರು ಬಿಟ್ಟಿದ್ದರು. 

ಆದರೆ 2 ವರ್ಷಗಳ ಹಿಂದೆ, ಅವರು ಡಾ. ಸತ್ಭಾಯ್ ಅವರನ್ನು ಭೇಟಿ ಮಾಡಿ, ಕೈ ಕಸಿ ಮಾಡುವ ಬಗ್ಗೆ ಸಲಹೆ ಕೇಳಿದರು. ಸರಣಿಸಭೆಗಳ ಬಳಿಕ ಸಮಿಯಾಗೆ 18 ವರ್ಷಗಳಾಗುತ್ತಿದ್ದಂತೆಯೇ ಅಧಿಕೃತವಾಗಿ ಆಕೆಯ ಅನುಮತಿ ಪಡೆದು ಕೈ ಜೋಡಿಸಲು ಶಸ್ತ್ರಚಿಕಿತ್ಸೆ ನಡೆಸಬೇಕೆಂದು ತೀರ್ಮಾನಿಸಲಾಗಿತ್ತು. 

ಜ.10 ರಂದು ಸಮಿಯಾಗೆ 18 ವರ್ಷಗಳು ತುಂಬಿತ್ತು. ಅದೃಷ್ಟವೆಂಬಂತೆ 52 ವರ್ಷಗಳ, ಬ್ರೆನ್ ಡೆಡ್ ಮಹಿಳೆಯೊಬ್ಬರ ತೋಳು ಸಮಿಯಾ ಬಳಕೆಗೆ ಯೋಗ್ಯವಾಗಿತ್ತು. 

ಭರೂಚ್ ನಿಂದ ಮುಂಬೈ ನ ಗ್ಲೋಬಲ್ ಆಸ್ಪತ್ರೆಗೆ ಆಕೆಯನ್ನು ದೇಶದಲ್ಲೇ ಮೊದಲ ಬಾರಿ ನಡೆಯಲಿದ್ದ ಅಂಗ ಕಸಿ ವಿಧಾನ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು.
 
ಸ್ವಲ್ಪ ದೊಡ್ಡದಾದರೂ ದಾನಿಯ ಕೈ ಬಣ್ಣ ಸಮಿಯಾಗೆ ಹೋಲಿಕೆಯಾಗುತ್ತಿತ್ತು. ನಾವು ಮೂಳೆಯನ್ನು ಮೊಣಕೈ ಕೆಳಗೆ ಸೇರುವ ಕೆಲಸವನ್ನು ಮಾಡಿದ್ದೇವೆ ಮತ್ತು ಮೇಲಿನ ತೋಳಿನ ಮೇಲಿನ ರಕ್ತನಾಳಗಳು ಮತ್ತು ನರಗಳನ್ನು ಮಾರ್ಪಡಿಸಿದ್ದೇವೆ ಎಂದು ಡಾ. ಸತ್ಭಾಯ್ ಹೇಳಿದ್ದು, ಕೆಲವು ತಿಂಗಳ ಚಿಕಿತ್ಸೆ, ಫಿಸಿಯೋಥೆರೆಪಿ ಮೂಲಕ ಆಕೆಯ ಕೈ ಶೇ.90 ಕ್ಕಿಂತ ಹೆಚ್ಚು ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com