ಹೆರಾಯಿನ್, ಪಿಸ್ತೂಲ್ ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ BSF

ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಹೆರಾಯಿನ್, ಪಿಸ್ತೂಲ್ ಸಾಗಿಸುತ್ತಿದ್ದ  ಡ್ರೋನ್ ವೊಂದನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್)ಯೋಧರು ಶುಕ್ರವಾರ ಹೊಡೆದುರುಳಿಸಿದ್ದಾರೆ.
ಡ್ರೋನ್ ನಲ್ಲಿ ಪತ್ತೆಯಾದ ಹೆರಾಯಿನ್-ಪಿಸ್ತೂಲ್
ಡ್ರೋನ್ ನಲ್ಲಿ ಪತ್ತೆಯಾದ ಹೆರಾಯಿನ್-ಪಿಸ್ತೂಲ್

ನವದೆಹಲಿ: ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಹೆರಾಯಿನ್, ಪಿಸ್ತೂಲ್ ಸಾಗಿಸುತ್ತಿದ್ದ  ಡ್ರೋನ್ ವೊಂದನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್)ಯೋಧರು ಶುಕ್ರವಾರ ಹೊಡೆದುರುಳಿಸಿದ್ದಾರೆ.

ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪಾಕಿಸ್ತಾನದ ಕಡೆಯಿಂದ ಭಾರತದ ಭೂಪ್ರದೇಶಕ್ಕೆ ಒಳನುಗ್ಗಲು ಪ್ರಯತ್ನಿಸುತ್ತಿದ್ದ ಡ್ರೋನ್ ಅನ್ನು ಹೊಡೆದುರುಳಿಸಿದೆ ಎಂದು ಬಿಎಸ್‌ಎಫ್ ಅಧಿಕಾರಿ ಶುಕ್ರವಾರ ತಿಳಿಸಿದ್ದು, ಬಿಎಸ್‌ಎಫ್ ನೆಲಕ್ಕುರುಳಿದ ಡ್ರೋನ್‌ನಿಂದ 3 ಕೆಜಿ ಹೆರಾಯಿನ್, ಒಂದು ಚೀನಾ ನಿರ್ಮಿತ ಪಿಸ್ತೂಲ್, ಕಾರ್ಟ್ರಿಡ್ಜ್‌ಗಳು ಮತ್ತು ಮ್ಯಾಗಜೀನ್ ಅನ್ನು ವಶಪಡಿಸಿಕೊಂಡಿದೆ ಎಂದು  ಹೇಳಿದ್ದಾರೆ. 

ಪಂಜಾಬ್‌ನ ಸೆಕ್ಟರ್ ಫಿರೋಜ್‌ಪುರದ BOP MW ಉತ್ತರದ AOR ನಲ್ಲಿ ಪಾಕಿಸ್ತಾನದೊಂದಿಗಿನ ಅಂತರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಅನ್ನು ನಿಯೋಜಿಸಲಾಗಿದೆ ಎಂದು BSF ಹೇಳಿದೆ. ಡ್ರೋನ್ ಪತ್ತೆಯಾಗುತ್ತಿದ್ದಂತೆಯೇ ಕೌಂಟರ್-ಡ್ರೋನ್ ಕ್ರಮಗಳನ್ನು ಪ್ರಾರಂಭಿಸಲಾಯಿತು ಮತ್ತು ಡ್ರೋನ್ ಮೇಲೆ ಗುಂಡು ಹಾರಿಸಲಾಯಿತು.

ಬಿಎಸ್ಎಫ್ ಪಡೆಗಳು ನಂತರದ ಹುಡುಕಾಟದ ಸಮಯದಲ್ಲಿ, ಸುಮಾರು 3 ಕೆಜಿ ಹೆರಾಯಿನ್, ಒಂದು ಚೀನಾ ನಿರ್ಮಿತ ಪಿಸ್ತೂಲ್, ಕಾರ್ಟ್ರಿಡ್ಜ್ಗಳು ಮತ್ತು ಮ್ಯಾಗಜೀನ್ಗಳನ್ನು ಒಳಗೊಂಡಿರುವ ಒಳನುಗ್ಗಿದ ಡ್ರೋನ್ನಿಂದ ರವಾನೆಯ ಪ್ಯಾಕೆಟ್ ಅನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಬಿಎಸ್ಎಫ್ ಹೇಳಿಕೆ ತಿಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com