ಮಹಾರಾಷ್ಟ್ರ ಡಿಸಿಎಂ ಕಚೇರಿ ಎದುರು ಹನುಮಾನ್ ಚಾಲಿಸಾ ಪಠಿಸಲು ಮುಂದಾದ ಮಹಿಳೆಯರನ್ನು ತಡೆದ ಪೊಲೀಸ್

ತಮ್ಮ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಲು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್  ಕಚೇರಿ ಎದುರು ಹನುಮಾನ್ ಚಾಲಿಸಾ ಪಠಿಸಲು ಮುಂದಾದ ನಾಗ್ಪುರ ಪೊಲೀಸ್ ಅಧಿಕಾರಿಗಳು ಮಹಿಳಾ ಸ್ವ ಸಹಾಯ ಗುಂಪುಗಳ (ಎಸ್ ಹೆಚ್ ಜಿ) ಸದಸ್ಯರನ್ನು  ಪೊಲೀಸರು ತಡೆದಿದ್ದಾರೆ. 
ದೇವೇಂದ್ರ ಫಡ್ನವೀಸ್
ದೇವೇಂದ್ರ ಫಡ್ನವೀಸ್

ನವದೆಹಲಿ: ತಮ್ಮ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಲು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್  ಕಚೇರಿ ಎದುರು ಹನುಮಾನ್ ಚಾಲಿಸಾ ಪಠಿಸಲು ಮುಂದಾದ ನಾಗ್ಪುರ ಪೊಲೀಸ್ ಅಧಿಕಾರಿಗಳು ಮಹಿಳಾ ಸ್ವ ಸಹಾಯ ಗುಂಪುಗಳ (ಎಸ್ ಹೆಚ್ ಜಿ) ಸದಸ್ಯರನ್ನು  ಪೊಲೀಸರು ತಡೆದಿದ್ದಾರೆ. 

ವಾರ್ಧಾದಲ್ಲಿನ ಎಸ್ ಹೆಚ್ ಜಿಯ ಮಹಿಳೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಾಗ್ಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ತಡೆ ಹಿಡಿದಿರುವ ಗೌರವಧನದ ಬಿಡುಗಡೆಗಾಗಿ ಆಗ್ರಹಿಸಿ ಮಹಿಳೆಯರು ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಹಿಳೆಯರು ಪ್ರತಿಭಟನೆಗೆ ಕರೆ ನೀಡುತ್ತಿದ್ದಂತೆಯೇ ಪೊಲೀಸರು ದೇವೇಂದ್ರ ಫಡ್ನವೀಸ್ ಅವರ ಕಚೇರಿಗೆ ಹೆಚ್ಚಿನ ಭದ್ರತೆ ಒದಗಿಸಿದ್ದರು. ದೇವೇಂದ್ರ ಫಡ್ನವೀಸ್ ನಾಗ್ಪುರ ನೈಋತ್ಯ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ವಾರ್ಧಾ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ. 

ತಮ್ಮ  ಬೇಡಿಕೆಗಳ ಬಗ್ಗೆ ಗಮನ ಸೆಳೆಯುವುದಕ್ಕಾಗಿ ಸಂವಿಧಾನ್ ಸ್ಕ್ವೇರ್ ನಿಂದ ದೇವೇಂದ್ರ ಫಡ್ನವೀಶ್ ನಿವಾಸದ ಬಳಿ ಇರುವ ತ್ರಿಕೋನಿ ಪಾರ್ಕ್ ಎಸ್ ಹೆಚ್ ಜಿಯ ಪ್ರತಿನಿಧಿ ನಿಹಾಲ್ ಪಾಂಡೇ ತಿಳಿಸಿದ್ದಾರೆ.

ಪ್ರತಿಭಟನಾಕಾರರು ಡಿಸಿಎಂ ಕಚೇರಿಯತ್ತ ನಡಿಗೆ ಪ್ರಾರಂಭಿಸಿದ ಬೆನ್ನಲ್ಲೇ ಅವರನ್ನು ತಡೆಯಲಾಯಿತು.

ಎಸ್ ಹೆಚ್ ಜಿಯ ಮಹಿಳೆಯರಿಗೆ, ಗೌರವ ಧನ ಇಲ್ಲದೇ ಜೀವನ ನಡೆಸುವುದು ಕಷ್ಟವಾಗಿದೆ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರೂ ದೇವೇಂದ್ರ ಫಡ್ನವೀಸ್ ನಮ್ಮನ್ನು ಭೇಟಿ ಮಾಡಿಲ್ಲ ಎಂದು ಪಾಂಡೇ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com