ಪಂಜಾಬ್: ಪಾಕ್ ಗಡಿಯಲ್ಲಿ ಕಳ್ಳಸಾಗಣೆದಾರರೊಂದಿಗೆ ಗುಂಡಿನ ಚಕಮಕಿ; ಡ್ರಗ್ಸ್, ಶಸ್ತ್ರಾಸ್ತ್ರ ಜಪ್ತಿ

ಪಂಜಾಬ್‌ನ ಗುರುದಾಸ್‌ಪುರದ ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಕಳ್ಳಸಾಗಣೆದಾರರೊಂದಿಗೆ ಶನಿವಾರ ನಡೆದ ಗುಂಡಿನ ಚಕಮಕಿಯ ನಂತರ ಬಿಎಸ್‌ಎಫ್ 20 ಹೆರಾಯಿನ್ ಪ್ಯಾಕೆಟ್‌ಗಳು ಮತ್ತು....
ಡ್ರಗ್ಸ್, ಶಸ್ತ್ರಾಸ್ತ್ರ ಜಪ್ತಿ
ಡ್ರಗ್ಸ್, ಶಸ್ತ್ರಾಸ್ತ್ರ ಜಪ್ತಿ

ಚಂಡೀಗಢ: ಪಂಜಾಬ್‌ನ ಗುರುದಾಸ್‌ಪುರದ ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಕಳ್ಳಸಾಗಣೆದಾರರೊಂದಿಗೆ ಶನಿವಾರ ನಡೆದ ಗುಂಡಿನ ಚಕಮಕಿಯ ನಂತರ ಬಿಎಸ್‌ಎಫ್ 20 ಹೆರಾಯಿನ್ ಪ್ಯಾಕೆಟ್‌ಗಳು ಮತ್ತು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಡಿ ಭದ್ರತಾ ಪಡೆಯ 113ನೇ ಬೆಟಾಲಿಯನ್ ಗುರುದಾಸ್‌ಪುರ ಜಿಲ್ಲೆಯ ಖಾಸಾವಲಿ ಗ್ರಾಮದ ಬಳಿ  ಕಳ್ಳಸಾಗಾಣಿಕೆದಾರರ ಅನುಮಾನಾಸ್ಪದ ಚಲನವಲನವನ್ನು ಗಮನಿಸಿ ಗುಂಡಿನ ದಾಳಿ ನಡೆಸಿದೆ. ಪ್ರತಿಯಾಗಿ ಕಳ್ಳಸಾಗಾಣಿಕೆದಾರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

"ಇಂದು ಬೆಳಗ್ಗೆ 5.30ರ ಸುಮಾರಿಗೆ ದಟ್ಟವಾದ ಮಂಜಿನಲ್ಲಿ ಗಸ್ತು ತಿರುಗುತ್ತಿದ್ದಾಗ, ಬಿಎಸ್ಎಫ್ ಕಾನ್‌ಸ್ಟೆಬಲ್ ಹೇಮ್ ರಾಮ್ ಕೆಲವು ಅನುಮಾನಾಸ್ಪದ ವ್ಯಕ್ತಿಗಳನ್ನು ಗಮನಿಸಿದ್ದಾರೆ. ನಂತರ ಪಾಕಿಸ್ತಾನದ ಕಡೆಯಿಂದ ಕಳ್ಳಸಾಗಣೆದಾರರು ಗುಂಡು ಹಾರಿಸಿದ್ದು, ನಮ್ಮ ಜವಾನರು 25 ಸುತ್ತುಗಳ ಮೂಲಕ ಪ್ರತಿದಾಳಿ ನಡೆಸಿದರು" ಎಂದು ಬಿಎಸ್ಎಫ್ ಉಪ ಇನ್ಸ್‌ಪೆಕ್ಟರ್ ಜನರಲ್ ಪ್ರಭಾಕರ್ ಜೋಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಂತರ ಗಸ್ತು ಕಮಾಂಡರ್ ನೇತೃತ್ವದ ತಂಡ ಜವಾನರೊಂದಿಗೆ ಸೇರಿಕೊಂಡು ಗುಂಡಿನ ದಾಳಿ ನಡೆಸಿದರು ಮತ್ತು ಇಬ್ಬರು ನಡುವೆ "ದೀರ್ಘಕಾಲ" ಗುಂಡಿನ ಚಕಮಕಿ ನಡೆಯಿತು ಎಂದು ಜೋಶಿ ಹೇಳಿದ್ದಾರೆ.

ನಂತರ ನಡೆದ, ಶೋಧ ಕಾರ್ಯಾಚರಣೆಯಲ್ಲಿ, ಫೆನ್ಸಿಂಗ್‌ನಿಂದ ಸುಮಾರು 30 ಮೀಟರ್ ದೂರದಲ್ಲಿ 15 ಅಡಿ ಉದ್ದದ ಪೈಪ್ ಅನ್ನು ಪತ್ತೆ ಮಾಡಿದ್ದು, ಅದರಲ್ಲಿ 20 ಹೆರಾಯಿನ್ ಪ್ಯಾಕೆಟ್‌ಗಳಿದ್ದವು ಎಂದು ಜೋಶಿ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಹೆಚ್ಚಿನ ಶೋಧ ನಡೆಸಿದ ನಂತರ ಎರಡು ಪಿಸ್ತೂಲ್‌ಗಳನ್ನು (ಒಂದು ಟರ್ಕಿಯಲ್ಲಿ ತಯಾರಿಸಲ್ಪಟ್ಟಿದೆ ಮತ್ತು ಇನ್ನೊಂದು ಚೀನಾದಲ್ಲಿ ತಯಾರಿಸಲ್ಪಟ್ಟಿದೆ), ಆರು ಮ್ಯಾಗ್ಜಿನ್ ಮತ್ತು 242 ಲೈವ್ ರೌಂಡ್‌ಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಬಿಎಸ್‌ಎಫ್ ಡಿಐಜಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com