ಕಳ್ಳನಿಗೆ ಪಾಠ ಕಲಿಸಬೇಕಾಗಿದೆ: ಮಹಾ ಸಿಎಂ ಶಿಂಧೆ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ

ನಮ್ಮ ಪಕ್ಷದ 'ಬಿಲ್ಲು ಮತ್ತು ಬಾಣ' ಚಿಹ್ನೆಯನ್ನು ಕದ್ದಿದ್ದಾರೆ. ಆ ಕಳ್ಳನಿಗೆ ನಾವು ಪಾಠ  ಕಲಿಸಬೇಕಾಗಿದೆ ಎಂದು ಶಿವಸೇನೆ-ಯುಬಿಟಿ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಶನಿವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು...
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ನಮ್ಮ ಪಕ್ಷದ 'ಬಿಲ್ಲು ಮತ್ತು ಬಾಣ' ಚಿಹ್ನೆಯನ್ನು ಕದ್ದಿದ್ದಾರೆ. ಆ ಕಳ್ಳನಿಗೆ ನಾವು ಪಾಠ  ಕಲಿಸಬೇಕಾಗಿದೆ ಎಂದು ಶಿವಸೇನೆ-ಯುಬಿಟಿ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಶನಿವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಿದರು.

ಪಕ್ಷದ ನಾಯಕರ ಸಭೆಯ ಅಧ್ಯಕ್ಷತೆ ವಹಿಸುವ ಮೊದಲು ಇಲ್ಲಿನ ಬಾಂದ್ರಾದಲ್ಲಿರುವ ತಮ್ಮ ನಿವಾಸ 'ಮಾತೋಶ್ರೀ' ಹೊರಗೆ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, "ನಮ್ಮ ಬಿಲ್ಲು ಮತ್ತು ಬಾಣವನ್ನು ಕದ್ದಿದ್ದಾರೆ. ಆ ಕಳ್ಳನಿಗೆ ಪಾಠ ಕಲಿಸಬೇಕಾಗಿದೆ. ಆ ಕಳ್ಳ ಸಿಕ್ಕಿಬಿದ್ದಿದ್ದಾನೆ. ನಾನು ಕಳ್ಳನಿಗೆ ಬಿಲ್ಲು ಮತ್ತು ಬಾಣದೊಂದಿಗೆ ಮೈದಾನಕ್ಕೆ ಬರುವಂತೆ ಸವಾಲು ಹಾಕುತ್ತೇನೆ ಮತ್ತು ನಾವು ಕಳ್ಳನನ್ನು ಉರಿಯುತ್ತಿರುವ ಟಾರ್ಚ್‌ನಿಂದ ಎದುರಿಸುತ್ತೇವೆ" ಎಂದು ಠಾಕ್ರೆ ಹೇಳಿದರು.

ಚುನಾವಣಾ ಆಯೋಗ ಶುಕ್ರವಾರ ಶಿವಸೇನೆಯ ಮೂಲ ಚಿಹ್ನೆಯಾದ 'ಬಿಲ್ಲು ಬಾಣ'ವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ನೀಡುವ ಮೂಲಕ ಉದ್ಧವ್ ಠಾಕ್ರೆ ಬಣಕ್ಕೆ ಶಾಕ್ ನೀಡಿದೆ.

1966ರಲ್ಲಿ ಬಾಳ್ ಠಾಕ್ರೆ ಅವರು ಈ ಮಣ್ಣಿನ ಪುತ್ರರಿಗೆ ನ್ಯಾಯ ಎಂಬ ತತ್ವದಡಿ ಸ್ಥಾಪಿಸಿದ ಪಕ್ಷದ ಮೇಲೆ ಠಾಕ್ರೆ ಕುಟುಂಬದ ಹಿಡಿತ ತಪ್ಪಿದ್ದು ಇದೇ ಮೊದಲು.

ಚುನಾವಣಾ ಆಯೋಗದ ಆದೇಶದ ನಂತರ ಠಾಕ್ರೆ ನಿಷ್ಠಾವಂತರು ಶಕ್ತಿ ಪ್ರದರ್ಶಿಸಲು 'ಮಾತೋಶ್ರೀ' ಹೊರಗೆ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು ಮತ್ತು ಏಕನಾಥ್ ಶಿಂಧೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com