ಶಿವಸೇನೆ ಲಾಂಛನ, ಹೆಸರು ಪಡೆಯಲು 2 ಸಾವಿರ ಕೋಟಿ ರೂ ಲಂಚ: ಸಂಜಯ್ ರಾವತ್ ಆರೋಪ
ಮೂಲ 'ಶಿವಸೇನಾ' ಹೆಸರು ಮತ್ತು ಬಿಲ್ಲು-ಬಾಣದ ಚಿಹ್ನೆಗಾಗಿ 2,000 ಕೋಟಿಗೂ ಅಧಿಕ ಹಣಕಾಸು ಅವ್ಯವಹಾರ ನಡೆದಿದೆ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣದ) ಸಂಸದ ಹಾಗೂ ವಕ್ತಾರ ಸಂಜಯ್ ರಾವತ್ ಗಂಭೀರ ಆರೋಪ ಮಾಡಿದ್ದಾರೆ.
Published: 19th February 2023 12:43 PM | Last Updated: 19th February 2023 12:43 PM | A+A A-

ಸಂಜಯ್ ರಾವುತ್
ಮುಂಬೈ: ಮೂಲ 'ಶಿವಸೇನಾ' ಹೆಸರು ಮತ್ತು ಬಿಲ್ಲು-ಬಾಣದ ಚಿಹ್ನೆಗಾಗಿ 2,000 ಕೋಟಿಗೂ ಅಧಿಕ ಹಣಕಾಸು ಅವ್ಯವಹಾರ ನಡೆದಿದೆ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣದ) ಸಂಸದ ಹಾಗೂ ವಕ್ತಾರ ಸಂಜಯ್ ರಾವತ್ ಗಂಭೀರ ಆರೋಪ ಮಾಡಿದ್ದಾರೆ.
ಭಾನುವಾರ ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ರಾವತ್, '‘ನನಗೆ ಖಚಿತ ಮಾಹಿತಿ ಸಿಕ್ಕಿದೆ, ನನಗೆ ವಿಶ್ವಾಸವಿದೆ, ಇದು ಕೇವಲ ಪ್ರಾಥಮಿಕ ಅಂಕಿ ಅಂಶ ಮಾತ್ರವೇ ಅಲ್ಲ ಬದಲಿಗೆ ಇದು ಶೇ. 100ರಷ್ಟು ದೃಢ ಮಾಹಿತಿ ಎಂದು ಹೇಳಿದ್ದಾರೆ.
माझी खात्रीची माहिती आहे....
चिन्ह आणि नाव मिळवण्यासाठी आता पर्यंत 2000 कोटींचा सौदा आणि व्यवहार झाले आहेत...
हा प्राथमिक आकडा आहे आणि 100 टक्के सत्य आहे..
बऱ्याच गोष्टी लवकरच उघड होतील..
देशाच्या इतिहासात असे कधीच घडले नव्हते.. pic.twitter.com/3Siiro6O9b— Sanjay Raut (@rautsanjay61) February 19, 2023
ಇದೇ ವಿಚಾರವಾಗಿ ಸರಣಿ ಟ್ವೀಟ್ ಕೂಡ ಮಾಡಿರುವ ರಾವತ್, 'ಇದು ದೇಶದ ಇತಿಹಾಸದಲ್ಲೇ ಹಿಂದೆಂದೂ ಕಂಡುಕೇಳರಿಯದ ಸಂಗತಿ. ಇನ್ನೂ ಕೆಲವು ವಿಷಯಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಏಕನಾಥ್ ಶಿಂಧೆ ಬಣಕ್ಕೆ ಶಿವಸೇನೆಯ 'ಬಿಲ್ಲು ಬಾಣ' ಚಿಹ್ನೆ; ಉದ್ಧವ್ ಠಾಕ್ರೆಗೆ ತೀವ್ರ ಮುಖಭಂಗ
ಸಂಜಯ್ ರಾವುತ್ ಆರೋಪಗಳಿಂದಾಗಿ ಭಾರತೀಯ ಚುನಾವಣಾ ಆಯೋಗದ (ಇಸಿಐ)ದ ನಿರ್ಧಾರದ ಮೇಲೆ ಅನುಮಾನ ಮೂಡುವಂತಾಗಿದೆ. ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಬಣಕ್ಕೆ ಮೂಲ ಶಿವಸೇನಾದ ಹೆಸರು ಮತ್ತು 'ಬಿಲ್ಲು-ಬಾಣ'ದ ಚಿಹ್ನೆಯನ್ನು ಮಂಜೂರು ಮಾಡಿ ಚುನಾವಣಾ ಆಯೋಗ ಇತ್ತೀಚೆಗೆ ಆದೇಶಿಸಿತ್ತು. ಇದರ ಹಿನ್ನೆಲೆಯಲ್ಲಿ ರಾವತ್ ಈ ಹೇಳಿಕೆ ನೀಡಿದ್ದಾರೆ.