ಮೊರ್ಬಿ ತೂಗು ಸೇತುವೆ ದುರಂತ: ತಲಾ 10 ಲಕ್ಷ ರೂ 'ಮಧ್ಯಂತರ ಪರಿಹಾರ' ನೀಡುವಂತೆ ಒರೆವಾ ಸಂಸ್ಥೆಗೆ ಹೈಕೋರ್ಟ್ ಆದೇಶ

ಇಡೀ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಗುಜರಾತ್ ನ ಮೊರ್ಬಿ ತೂಗು ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ದುರಂತದ ಸಂತ್ರಸ್ಥರಿಗೆ ತಲಾ 10 ಲಕ್ಷ ರೂ ಮಧ್ಯಂತರ ಪರಿಹಾರ ನೀಡುವಂತೆ ಆದೇಶಿಸಿದೆ.
ಮೊರ್ಬಿ ತೂಗು ಸೇತುವೆ ದುರಂತ
ಮೊರ್ಬಿ ತೂಗು ಸೇತುವೆ ದುರಂತ

ಅಹ್ಮದಾಬಾದ್: ಇಡೀ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಗುಜರಾತ್ ನ ಮೊರ್ಬಿ ತೂಗು ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ದುರಂತದ ಸಂತ್ರಸ್ಥರಿಗೆ ತಲಾ 10 ಲಕ್ಷ ರೂ ಮಧ್ಯಂತರ ಪರಿಹಾರ ನೀಡುವಂತೆ ಆದೇಶಿಸಿದೆ.

ಮೊರ್ಬಿ ತೂಗುಸೇತುವೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ತಲಾ 10 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ಎರಡು ಲಕ್ಷ ರೂಪಾಯಿ ಮಧ್ಯಂತರ ಪರಿಹಾರ ನೀಡುವಂತೆ ಗಡಿಯಾರ ತಯಾರಕ ಒರೆವಾ ಗ್ರೂಪ್‌ಗೆ ಗುಜರಾತ್ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ. ಅಲ್ಲದೆ ಈ ಪರಿಹಾರ ನೀಡಿಕೆಗೆ ಕೋರ್ಟ್  ನಾಲ್ಕು ವಾರಗಳ ಗಡುವು ಕೂಡ ನೀಡಿದೆ. 

ಸೇತುವೆಯ ನಿರ್ವಹಣೆಯ ಜವಾಬ್ದಾರಿಯನ್ನುಇದೇ ಒರೆವಾ ಕಂಪನಿಯು ಹೊಂದಿತ್ತು. ಮುಖ್ಯ ನ್ಯಾಯಮೂರ್ತಿ ಸೋನಿಯಾ ಗೋಕನಿ ಮತ್ತು ನ್ಯಾಯಮೂರ್ತಿ ಸಂದೀಪ್ ಭಟ್ ಅವರ ಪೀಠವು ಮಧ್ಯಂತರ ಪರಿಹಾರವನ್ನು ನೀಡುವಂತೆ ಕಂಪನಿಗೆ ಸೂಚಿಸಿದೆ. ಮಧ್ಯಂತರ ಪರಿಹಾರವಾಗಿ ಗಾಯಾಳುಗಳಿಗೆ ತಲಾ ಎರಡು ಲಕ್ಷ ರೂಪಾಯಿ ನೀಡುವಂತೆ ಕೋರ್ಟ್ ಆದೇಶಿಸಿದೆ. 

ಗುಜರಾತ್ ರಾಜ್ಯದ ಮೊರ್ಬಿ ಪಟ್ಟಣದ ಮಚ್ಚು ನದಿಯ ಮೇಲಿರುವ ತೂಗು ಸೇತುವೆ ಕಳೆದ ವರ್ಷ ಅಕ್ಟೋಬರ್ 30 ರಂದು ಕುಸಿದಿತ್ತು. ಈ ಅವಘಡದಲ್ಲಿ 135 ಮಂದಿ ಸಾವನ್ನಪ್ಪಿದ್ದು, 56 ಮಂದಿ ಗಾಯಗೊಂಡಿದ್ದರು. ಮಂಗಳವಾರ, ಒರೆವಾ ಗ್ರೂಪ್ ಹೈಕೋರ್ಟಿನ ಮುಂದೆ ಒಟ್ಟು ಐದು ಕೋಟಿ ರೂಪಾಯಿಗಳನ್ನು ಮಧ್ಯಂತರ ಪರಿಹಾರವಾಗಿ ತಮ್ಮ ಪ್ರಾಣ ಕಳೆದುಕೊಂಡವರು ಮತ್ತು ಗಾಯಗೊಂಡವರ ಮುಂದಿನ ಸಂಬಂಧಿಕರಿಗೆ ಪಾವತಿಸಲು ಪ್ರಸ್ತಾಪವನ್ನು ಮಾಡಿತು. ಆದರೆ, ಕಂಪನಿ ನೀಡಿರುವ ಪರಿಹಾರ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com