ಏಕ್ತಾ ದಿವಸ್ ಸ್ಪರ್ಧೆ ವಿಜೇತರನ್ನು ಘೋಷಿಸಿದ ಪ್ರಧಾನಿ; ಕರ್ನಾಟಕದ ವ್ಯಕ್ತಿಗೆ ಪ್ರಶಸ್ತಿ, ಶ್ಲಾಘನೆ

ಪ್ರಧಾನಿ ಮೋದಿ 98 ನೇ ಮಕ್ ಕಿ ಬಾತ್ ಕಾರ್ಯಕ್ರಮದಲ್ಲಿ ಏಕ್ತಾ ದಿವಸ್ ಸ್ಪರ್ಧೆ ವಿಜೇತರನ್ನು ಘೋಷಿಸಿದ್ದು ಕರ್ನಾಟಕದ ವ್ಯಕ್ತಿಗೆ ಪ್ರಶಸ್ತಿ ಒಲಿದಿದೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ಮೋದಿ 98 ನೇ ಮಕ್ ಕಿ ಬಾತ್ ಕಾರ್ಯಕ್ರಮದಲ್ಲಿ ಏಕ್ತಾ ದಿವಸ್ ಸ್ಪರ್ಧೆ ವಿಜೇತರನ್ನು ಘೋಷಿಸಿದ್ದು ಕರ್ನಾಟಕದ ವ್ಯಕ್ತಿಗೆ ಪ್ರಶಸ್ತಿ ಒಲಿದಿದೆ. 

ಸರ್ದಾರ್ ಪಟೇಲ್ ಅವರ ಜನ್ಮದಿನದಂದು ಅಂದರೆ 'ಏಕತಾ ದಿನ'ದ ಅಂಗವಾಗಿ ಗೀತೆ, ಲಾಲಿ ಹಾಡು ಹಾಗೂ ರಂಗೋಲಿ ಎಂಬ 3 ಸ್ಪರ್ಧೆಗಳನ್ನು ನಡೆಸಲಾಗಿತ್ತು. 

ಚಾಮರಾಜನಗರ ಜಿಲ್ಲೆಯ ಬಿಎಂ ಮಂಜುನಾಥ್ ಅವರ "ಮಲಗು ಕಂದ" ಹಾಡನ್ನು ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಬಹುಮಾನ ಒಲಿದಿದೆ. ಈ ಹಾಡನ್ನು ಪ್ರಧಾನಿ ಮೋದಿ ಮನ್ ಕಿ ಬಾತ್ ನಲ್ಲಿ ಕೇಳಿದರು. 

ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಆಂಧ್ರ ಪ್ರದೇಶದ ವಿಜಯದುರ್ಗಾ ಪ್ರಥಮ ಸ್ಥಾನ ಪಡೆದಿದ್ದಾರೆ. ಉಸ್ತಾದ್ ಬಿಸ್ಮಿಲ್ಲಾಖಾನ್ ಪುರಸ್ಕಾರವನ್ನು ಪ್ರತಿಭಾಶಾಲಿ ಕಲಾವಿದರಿಗೆ ಘೋಷಿಸಲಾಯಿತು.

ನಮ್ಮ ದೇಶದಲ್ಲಿ ಕಣ್ಮರೆಯಾಗಿ, ಜನರ ಮನಸ್ಸು ಮತ್ತು ಹೃದಯದಿಂದ ದೂರ ಸರಿದಿರುವ ಇಂತಹ ಅನೇಕ ಶ್ರೇಷ್ಠ ಸಂಪ್ರದಾಯಗಳನ್ನು ಈಗ ಸಾರ್ವಜನಿಕ ಸಹಭಾಗಿತ್ವದ ಶಕ್ತಿಯಿಂದ ಅವುಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮೋದಿ ಮನ್ ಕಿ ಬಾ ನಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com