'RRR' 'ನಾಟು ನಾಟು' ಹಾಡಿಗೆ ಕೊರಿಯನ್ ರಾಯಭಾರ ಕಚೇರಿ ಸಿಬ್ಬಂದಿ ಮಸ್ತು ಡ್ಯಾನ್ಸ್! ಪ್ರಧಾನಿ ಮೋದಿ ಫಿದಾ; ವಿಡಿಯೋ
'RRR' ಸಿನಿಮಾದ 'ನಾಟು ನಾಟು' ಹಾಡು ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದು, ಗೋಲ್ಡನ್ ಗ್ಲೋಬ್ಸ್, ಕ್ರಿಟಿಕ್ಸ್ ಚಾಯ್ಸ್ ನಂತಹ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ. ಈ ಹಾಡನ್ನು ಆಸ್ಕರ್ ಪ್ರಶಸ್ತಿಗೂ ನಾಮನಿರ್ದೇಶನ ಮಾಡಲಾಗಿದೆ.
Published: 26th February 2023 04:18 PM | Last Updated: 10th March 2023 08:24 PM | A+A A-

ನಾಟು ನಾಟು ಹಾಡಿಗೆ ಕೊರಿಯನ್ ರಾಯಭಾರಿ ಕಚೇರಿ ಸಿಬ್ಬಂದಿ ಡ್ಯಾನ್ಸ್ ವಿಡಿಯೋ
ನವದೆಹಲಿ: 'RRR' ಸಿನಿಮಾದ 'ನಾಟು ನಾಟು' ಹಾಡು ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದು, ಗೋಲ್ಡನ್ ಗ್ಲೋಬ್ಸ್, ಕ್ರಿಟಿಕ್ಸ್ ಚಾಯ್ಸ್ ನಂತಹ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ. ಈ ಹಾಡನ್ನು ಆಸ್ಕರ್ ಪ್ರಶಸ್ತಿಗೂ ನಾಮನಿರ್ದೇಶನ ಮಾಡಲಾಗಿದೆ.
ಈ ಹಾಡಿನ ಜನಪ್ರಿಯತೆ ದಕ್ಷಿಣ ಕೊರಿಯಾಕ್ಕೂ ತಲುಪಿದೆ. ಭಾರತದಲ್ಲಿರುವ ದಕ್ಷಿಣ ಕೊರಿಯಾದ ರಾಯಭಾರಿ ಕಚೇರಿಯಲ್ಲಿನ ಸಿಬ್ಬಂದಿ ಹಿಟ್ ಟ್ರ್ಯಾಕ್ ಗೆ ಗುಂಪಾಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಆರ್ ಆರ್ ಆರ್ ನಿಂದ ಮತ್ತೊಂದು ದಾಖಲೆ, ನಾಟು ನಾಟು ಹಾಡು ಆಸ್ಕರ್ ಗೆ ನಾಮನಿರ್ದೇಶನ
ಕೊರಿಯಾದ ರಾಯಭಾರಿ ಚಾಂಗ್ ಜೇ-ಬೊಕ್ ಜೊತೆಗೆ ರಾಯಭಾರ ಕಚೇರಿಯ ಸಿಬ್ಬಂದಿ ಮಸ್ತು ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗೆ ಪ್ರಧಾನಿ ಮೋದಿ ಕೂಡಾ ಫಿದಾ ಆಗಿದ್ದು, ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೀಡಿಯೊಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಥಂಬ್ಸ್-ಅಪ್ ಎಮೋಜಿಯೊಂದಿಗೆ 'ಗೌರವಾನ್ವಿತ ತಂಡದ ಪ್ರಯತ್ನ' ಎಂದು ಬರೆದುಕೊಂಡಿದ್ದಾರೆ.
Lively and adorable team effort. https://t.co/K2YqN2obJ2
— Narendra Modi (@narendramodi) February 26, 2023