ಹೊಸ ವರ್ಷದ ಸಂಭ್ರಮಾಚರಣೆ: 3.50 ಲಕ್ಷ ಬಿರಿಯಾನಿ, 61,000 ಪಿಜ್ಜಾ ಆರ್ಡರ್‌ಗಳನ್ನು ವಿತರಿಸಿದ ಸ್ವಿಗ್ಗಿ
ಹೈದರಾಬಾದ್: ಹೊಸ ವರ್ಷಾಚರಣೆಯಂದು ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ (Swiggy) ಶನಿವಾರ 3.50 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ವಿತರಿಸಿದೆ ಮತ್ತು ರಾತ್ರಿ 10.25 ರ ವೇಳೆಗೆ ದೇಶದಾದ್ಯಂತ 61,000 ಪಿಜ್ಜಾಗಳನ್ನು ರವಾನಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಟ್ವಿಟರ್‌ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಹೈದರಾಬಾದಿ ಬಿರಿಯಾನಿಗೆ ಶೇ 75.4 ರಷ್ಟು ಆರ್ಡರ್‌ಗಳು ಬಂದಿವೆ. ನಂತರ ಲಕ್ನೋವಿ-14.2 ಮತ್ತು ಕೋಲ್ಕತ್ತಾ- ಶೇ 10.4 ರಷ್ಟು ಜನರು ಬೇಡಿಕೆಯಿಟ್ಟಿದ್ದಾರೆ.
'3.50 ಲಕ್ಷ ಆರ್ಡರ್‌ಗಳೊಂದಿಗೆ ಸ್ವಿಗ್ಗಿ ಮೂಲಕ ವಿತರಿಸಲಾದ ಅತ್ಯಧಿಕ ಐಟಂ ಬಿರಿಯಾನಿ' ಎಂದು ಸುದ್ದಿಸಂಸ್ಥೆ ಪಿಟಿಐಗೆ ಮೂಲಗಳು ತಿಳಿಸಿವೆ. ಶನಿವಾರ ಸಂಜೆ 7.20ರ ಹೊತ್ತಿಗೆ ಸ್ವಿಗ್ಗಿ 1.65 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ಗ್ರಾಹಕರಿಗೆ ತಲುಪಿಸಿದೆ.
ಹೈದರಾಬಾದ್‌ನ ಟಾಪ್ ಬಿರಿಯಾನಿ ಮಾರಾಟದ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಬವರ್ಚಿ, 2021ರ ಹೊಸ ವರ್ಷದ ಮುನ್ನಾದಿನದಂದು ನಿಮಿಷಕ್ಕೆ ಎರಡು ಬಿರಿಯಾನಿಗಳನ್ನು ವಿತರಿಸಿತ್ತು ಮತ್ತು 2022ರ ಡಿಸೆಂಬರ್ 31ಕ್ಕೆ ಬೇಡಿಕೆಯನ್ನು ಪೂರೈಸಲು 15 ಟನ್ ಸವಿಯಾದ ಬಿರಿಯಾನಿಯನ್ನು ಸಿದ್ಧಪಡಿಸಿದೆ.
'ಡಾಮಿನೋಸ್ ಇಂಡಿಯಾ 61,287 ಪಿಜ್ಜಾಗಳನ್ನು ವಿತರಿಸಿದೆ. ಡೆಲಿವರಿ ಬಾಯ್‌ಗಳೊಂದಿಗೆ ಹೋಗುವ ಪ್ಯಾಕೆಟ್‌ಗಳ ಸಂಖ್ಯೆಯನ್ನು ಮಾತ್ರ ನಾವು ಊಹಿಸಬಹುದು' ಎಂದು ಸ್ವಿಗ್ಗಿ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ