ಸ್ವಿಗ್ಗಿಯಲ್ಲಿ ಅತೀ ಹೆಚ್ಚು ವ್ಯಯಿಸಿದ ಬೆಂಗಳೂರಿಗರು: ಹಣ್ಣು, ಮಾಂಸ, ಐಸ್ ಕ್ಯೂಬ್ ಅತೀ ಹೆಚ್ಚು ಆರ್ಡರ್ ಮಾಡಿದ ತಿನಿಸುಗಳು!

ಆನ್‌ಲೈನ್‌ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ 2022ರ ವಾರ್ಷಿಕ ಪಟ್ಟಿಯ 7ನೇ ಆವೃತ್ತಿ 'ಹೌ ಇಂಡಿಯಾ ಸ್ವಿಗ್ಗಿ ಡಿ 2022'ರನ್ನು ಬಿಡುಗಡೆ ಮಾಡಿದ್ದು, ಸಮೀಕ್ಷೆಯಲ್ಲಿ ಆಹಾರ ಮತ್ತು ಇತರ ಅಗತ್ಯ ವಸ್ತುಗಳಿಗೆ ಅತಿ ಹೆಚ್ಚು ಆರ್ಡರ್ ಮಾಡಿದ ಪ್ರಮುಖ ಮೂರು ಭಾರತೀಯ ನಾಗರಿಕರಲ್ಲಿ ಬೆಂಗಳೂರಿಗರು ಸೇರಿದ್ದಾರೆಂಬುದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆನ್‌ಲೈನ್‌ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ 2022ರ ವಾರ್ಷಿಕ ಪಟ್ಟಿಯ 7ನೇ ಆವೃತ್ತಿ 'ಹೌ ಇಂಡಿಯಾ ಸ್ವಿಗ್ಗಿ ಡಿ 2022'ರನ್ನು ಬಿಡುಗಡೆ ಮಾಡಿದ್ದು, ಸಮೀಕ್ಷೆಯಲ್ಲಿ ಆಹಾರ ಮತ್ತು ಇತರ ಅಗತ್ಯ ವಸ್ತುಗಳಿಗೆ ಅತಿ ಹೆಚ್ಚು ಆರ್ಡರ್ ಮಾಡಿದ ಪ್ರಮುಖ ಮೂರು ಭಾರತೀಯ ನಾಗರಿಕರಲ್ಲಿ ಬೆಂಗಳೂರಿಗರು ಸೇರಿದ್ದಾರೆಂಬುದು ತಿಳಿದುಬಂದಿದೆ.

ಬೆಂಗಳೂರಿನ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಬಳಕೆದಾರರು ದಿನಸಿ ಮತ್ತು ಇತರೆ ಅಗತ್ಯ ವಸ್ತುಗಳ ಖರೀದಿಗೆ 16.6 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ವರದಿಯು ತಿಳಿಸಿದೆ.

ಬೆಂಗಳೂರಿನ ಗ್ರಾಹಕರೊಬ್ಬರು ದೀಪಾವಳಿ ಸಂದರ್ಭದಲ್ಲಿ 75,378 ರೂ ಮೌಲ್ಯದ ಆರ್ಡರ್ ಮಾಡಿದ್ದಾರೆ. ನಂತರದ ಸ್ಥಾನದಲ್ಲಿ ಪುಣೆಯ ಗ್ರಾಹಕರಿದ್ದು, ಇವರು ತಾವು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ತಮ್ಮ ಇಡೀ ತಂಡಕ್ಕೆ ಬರ್ಗರ್ ಮತ್ತು ಫ್ರೈಸ್ ಗಳನ್ನು ಆರ್ಡರ್ ಮಾಡಿದ್ದಾರೆ. ಇದರ ಬಿಲ್ ಮೊತ್ತ 71,229 ರೂ ಆಗಿದೆ. ಇನ್ನೋರ್ವ ಬೆಂಗಳೂರಿನ ಗ್ರಾಹಕರೊಬ್ಬರು ವಾರದಲ್ಲೇ 118 ಬಾರಿ ಆಹಾರವನ್ನು ಆರ್ಡರ್ ಮಾಡಿದ್ದಾರೆ,

ಬೆಂಗಳೂರು ಅಧಿಕವಾಗಿ ಐಸ್‌ ಕ್ಯೂಬ್ ಆರ್ಡರ್ ಮಾಡಿರುವುದು ಕಂಡು ಬಂದಿದೆ. ನಂತರದ ಸ್ಥಾನದಲ್ಲಿ ಮುಂಬೈ, ಚೆನ್ನೈ, ದೆಹಲಿ ಇೆ. ಇನ್ನು ಅತೀ ಶೀಘ್ರದ ಆರ್ಡರ್ ಕೂಡಾ ಬೆಂಗಳೂರಿನಲ್ಲೇ ಮಾಡಲಾಗಿದೆ. 50 ಮೀಟರ್ ದೂರದಲ್ಲಿದ್ದ ಗ್ರಾಹಕರಿಗೆ 1.03 ನಿಮಿಷದಲ್ಲಿಯೇ ಆರ್ಡರ್ ಅನ್ನು ತಲುಪಿಸಲಾಗಿದೆ. ಕೋಳಿಯ ಮಾಂಸವನ್ನು ಭಾರತದಾದ್ಯಂತ ಅಧಿಕವಾಗಿ ಆರ್ಡರ್ ಮಾಡಲಾಗಿದೆ. ಸುಮಾರು 29.86 ಲಕ್ಷ ಬಾರಿ ಕೋಳಿಯ ಮಾಂಸ ಆರ್ಡರ್ ಮಾಡಲಾಗಿದೆ. ಈ ಪಟ್ಟಿಯಲ್ಲಿಯೂ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಅದಾದ ಬಳಿಕ ಹೈದಾರಾಬಾದ್, ಚೆನ್ನೈನಲ್ಲಿ ಅಧಿಕ ಕೋಳಿ ಮಾಂಸ ಆರ್ಡರ್ ಮಾಡಲಾಗಿದೆ. ಇನ್ನು ಬೇರೆ ಮಾಂಸವನ್ನು ಕೂಡಾ ಮುಂಬೈ ಅಧಿಕ ಆರ್ಡರ್ ಮಾಡಿದೆ. ಮುಂಬೈ, ದೆಹಲಿ-ಎನ್‌ಸಿಆರ್, ಕೋಲ್ಕತ್ತಾ, ಪುಣೆ, ಕೊಯಮತ್ತೂರಿಗಿಂತ ಅಧಿಕವಾಗಿ ಬೇರೆ ಮಾಂಸವನ್ನು ಬೆಂಗಳೂರಿಗರು ಆರ್ಡರ್ ಮಾಡಿದ್ದಾರೆ.

ಬೆಂಗಳೂರಿಗರು ಮುಂಬೈ, ದೆಹಲಿ/ಎನ್‌ಸಿಆರ್, ಕೋಲ್ಕತ್ತಾ, ಪುಣೆ ಮತ್ತು ಕೊಯಮತ್ತೂರಿಗಿಂತ ಹೆಚ್ಚು ಮಾಂಸವನ್ನು ಆರ್ಡರ್ ಮಾಡಿದ್ದಾರೆ,

2022ರ ವರ್ಷವೂ ಕೋವಿಡ್ ಬಳಿಕ ಸಾಮಾನ್ಯ ಸ್ಥಿತಿಗೆ ಬಂದ ವರ್ಷವಾಗಿದೆ. ಬಿರಿಯಾನಿಯನ್ನು ಅಧಿಕವಾಗಿ ಆರ್ಡರ್ ಮಾಡಲಾಗುತ್ತಿದೆ. ಪ್ರತಿ ನಿಮಿಷಕ್ಕೂ 137 ಬಿರಿಯಾನಿ ಆರ್ಡರ್ ಮಾಡಲಾಗುತ್ತಿದೆ. ಪ್ರತಿ ಸೆಕೆಂಡಿಗೆ 2.28 ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಭಾರತದಲ್ಲಿ ಅಧಿಕವಾಗಿ ವಿದೇಶಿ ಆಹಾರವನ್ನು ಆರ್ಡರ್ ಮಾಡಲಾಗುತ್ತಿದೆ. ರವಾಲಿ (ಇಟಾಲಿಯನ್) ಹಾಗೂ ಬಿಬಿಮ್‌ಬಾಪ್ (ಕೊರಿಯನ್) ಆಹಾವನ್ನು ಅಧಿಕವಾಗಿ ಆರ್ಡರ್ ಮಾಡುತ್ತಿದ್ದಾರೆ. ಚಹಾ, ಪಾನೀಯ, ರೊಟ್ಟಿ, ಪದಾರ್ಥವನ್ನು ಆರ್ಡರ್ ಹೆಚ್ಚಾಗಿ ಮಾಡಿದ್ದಾರೆ.

ಇನ್ನು ಆರೋಗ್ಯಕರ ಆಹಾರದ ವಿಚಾರಕ್ಕೆ ಬಂದಾಗಲೂ ಕೂಡಾ ಬೆಂಗಳೂರಿಗರು ಪ್ರಥಮ ಸ್ಥಾನದಲ್ಲಿದ್ದಾರೆ. ಬೆಂಗಳೂರು, ಮುಂಬೈ, ಹೈದಾರಾಬಾದ್ ಹಾಗೂ ಪುಣೆಯಲ್ಲಿ ಅಧಿಕವಾಗಿ ಆರೋಗ್ಯಕರ ಆಹಾರವನ್ನು ಖರೀದಿ ಮಾಡಲಾಗುತ್ತಿದೆ. ಡ್ರ್ಯಾಗನ್ ಪ್ರೂಟ್, ಕಿತ್ತಳೆ, ಬೆರೀಸ್, ವುಡ್ ಆಪಲ್ ಅನ್ನು ಅಧಿಕವಾಗಿ ಆರ್ಡರ್ ಮಾಡಲಾಗುತ್ತಿದೆ. ಸುಮಾರು 17 ಲಕ್ಷ ಕಿಲೋ ಗ್ರಾಮ್‌ನಷ್ಟು ಹಣ್ಣುಗಳನ್ನು ಆರ್ಡರ್ ಮಾಡಲಾಗಿದೆ. ಇನ್ನು ಶ್ರೀನಗರ, ಪೋರ್ಟ್ ಬ್ಲೈರ್, ಮುನ್ನಾರ್, ಅಜ್ವಾಲ್, ಜಲ್ನಾ, ಬಿಲಾವರ ಮೊದಲಾದ ಪ್ರದೇಶದಲ್ಲಿ ಮೊದಲ ಬಾರಿಗೆ ಆಹಾರವನ್ನು ಆರ್ಡರ್ ಮಾಡಲಾಗಿದೆ.

ಸ್ವಿಗ್ಗಿ ಆರ್ಡರ್‌ನಲ್ಲಿ ಅಧಿಕವಾಗಿ ಸೇವಿಂಗ್ಸ್ ಮಾಡಿರುವ ಗ್ರಾಹಕರು ಕೂಡಾ ಬೆಂಗಳೂರಿಗೆ ಸೇರಿದವರು ಆಗಿದ್ದಾರೆ. ಬೆಂಗಳೂರಿಗರು ಆಫರ್, ವೋಚರ್ ಮೂಲಕ ಸುಮಾರು 100 ಕೋಟಿ ರೂಪಾಯಿ ಉಳಿತಾಯ ಮಾಡಿದ್ದಾರೆಂದು ತಿಳಿದುಬಂದಿದೆ.

ನಂತರದ ಸ್ಥಾನದಲ್ಲಿ ಮುಂಬೈ, ಹೈದಾರಾಬಾದ್, ದೆಹಲಿ ಇದೆ. ಇನ್ನು ಜನರು ಅಧಿಕವಾಗಿ ಚಹಾ ಕಾಫಿಯನ್ನು ಆರ್ಡರ್ ಮಾಡಿದ್ದಾರೆ. ಸ್ವಿಗ್ಗಿಯಲ್ಲಿ ಚಹಾ ಆರ್ಡರ್ 305.55 ಶೇಕಡ ಹೆಚ್ಚಾಗಿದೆ. ಕಾಫಿ ಆರ್ಡರ್ 273.67 ಶೇಕಡ ಅಧಿಕವಾಗಿದೆ. ಹಾಗೆಯೇ ಈರುಳ್ಳಿ, ಟೊಮೊಟೊ, ಆಲೂಗಡ್ಡೆ, ಕಲ್ಲಂಗಡಿ, ಬಾಳೆಹಣ್ಣು, ಎಳನೀರು ಅಧಿಕವಾಗಿ ಆರ್ಡರ್ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com