ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ; ಬೆಂಗಳೂರಿನಲ್ಲಿ ಆರೋಪಿ ಬಂಧನ ಹೇಗಾಯಿತು!

ಕಳೆದ ವರ್ಷ ನವೆಂಬರ್ 26ರಂದು ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಂಕರ್ ಮಿಶ್ರಾ ಎಂಬಾತನನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಶನಿವಾರ ಬಂಧಿಸಿದ್ದಾರೆ. ಆದರೆ, ಆರೋಪಿ ಬಂಧನ ನಿಜಕ್ಕೂ ರೋಚಕವಾಗಿದೆ.
ಬಂಧಿತ ಆರೋಪಿ ಶಂಕರ್ ಮಿಶ್ರಾ
ಬಂಧಿತ ಆರೋಪಿ ಶಂಕರ್ ಮಿಶ್ರಾ

ನವದೆಹಲಿ: ಕಳೆದ ವರ್ಷ ನವೆಂಬರ್ 26ರಂದು ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಂಕರ್ ಮಿಶ್ರಾ ಎಂಬಾತನನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಶನಿವಾರ ಬಂಧಿಸಿದ್ದಾರೆ. ಆದರೆ, ಆರೋಪಿ ಬಂಧನ ನಿಜಕ್ಕೂ ರೋಚಕವಾಗಿದೆ.

ಈ ವಿಚಾರ ಸಂಬಂಧ ಎಫ್ ಐಆರ್ ದಾಖಲಾದ ನಂತರ ಆರೋಪಿಯ ಲೋಕೇಶನ್ ಪತ್ತೆ ಹಚ್ಚಲು ಆರಂಭಿಸಿದಾಗ ಬೆಂಗಳೂರು ತೋರಿಸುತಿತ್ತು. ಆದರೆ, ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 3 ರಂದು ಆತನ ಕೊನೆಯ ಲೋಕೇಶನ್ ಬೆಂಗಳೂರಿನಲ್ಲಿ ಪತ್ತೆಯಾಗಿತ್ತು. ಆದರೆ, ತದನಂತರ ಫೋನ್ ಸ್ವಿಚ್ ಆಫ್ ಆಗಿತ್ತು. ಆರೋಪಿ ಬೆಂಗಳೂರಿಗೆ ಹೋಗಲು ಟ್ಯಾಕ್ಸಿ ಬಳಸಿದ್ದ. ಆತನ ಟ್ರಾವೆಲ್ ಹಿಸ್ಟರಿ ಬಳಸಿ ಬೆಂಗಳೂರಿಗೆ ಹೋಗಿ ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶುಕ್ರವಾರ ತಡರಾತ್ರಿ ಶಂಕರ್ ಮಿಶ್ರಾ ಲೋಕೇಶನ್ ಮೈಸೂರಿನಲ್ಲಿ ಪತ್ತೆಯಾಯಿತು. ದೆಹಲಿ ಪೊಲೀಸರು ಅಲ್ಲಿಗೆ ತಲುಪುವ ವೇಳೆಗೆ ಶಂಕರ್ ಮಿಶ್ರಾ ಟ್ಯಾಕ್ಸಿಯಿಂದ ಇಳಿದಿದ್ದರು. ನಂತರ ಟ್ಯಾಕ್ಸಿ ಚಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಕೆಲವು ಸುಳಿವು ದೊರೆತಿದ್ದಾಗಿ ಅವರು ಹೇಳಿದರು. 

ಶಂಕರ್ ಮಿಶ್ರಾ  ಬಂಧನಕ್ಕೊಳಗಾದ ಸ್ಥಳದಲ್ಲಿ ಈ ಹಿಂದೆ ಹಲವು ಬಾರಿ ತಂಗಿದ್ದರು. ಆದ್ದರಿಂದ ದೆಹಲಿ ಪೊಲೀಸರು ಅಲ್ಲಿಗೆ ತಲುಪಿ, ಆರೋಪಿಯನ್ನು ಬಂಧಿಸಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಿಶ್ರಾನನ್ನು ದೆಹಲಿಗೆ ಕರೆತಂದಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಇಂದಿರಾಗಾಂಧಿ ವಿಮಾನ ನಿಲ್ದಾಣದ ಡಿಸಿಪಿ ರವಿಸಿಂಗ್ ತಿಳಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com