ಗುಜರಾತ್‌ನಲ್ಲಿ ಪಕ್ಷದೊಳಗೆ ತೀವ್ರಗೊಂಡ ಪೈಪೋಟಿ; ಪಕ್ಷದ ಸದಸ್ಯರಿಂದಲೇ ಬಿಜೆಪಿ ನಾಯಕನ ಹತ್ಯೆ ಆರೋಪ!

ಇತ್ತೀಚೆಗಷ್ಟೇ ಪಾಟಿದಾರ್ ನಾಯಕ ಮತ್ತು ಪಕ್ಷದ ಶಾಸಕ ಹಾರ್ದಿಕ್ ಪಟೇಲ್ ಅವರನ್ನು ಬೆಂಬಲಿಸಿದ ವಿರಂಗಾಮ್‌ನ 45 ವರ್ಷದ ಬಿಜೆಪಿ ಮುಖಂಡ ಹರ್ಷದ್ ಗಮೋಟ್ ಅವರನ್ನು ರಾಜಕೀಯ ದ್ವೇಷದ ಕಾರಣ ಮತ್ತೋರ್ವ ಬಿಜೆಪಿ ಸದಸ್ಯರೇ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಹಮದಾಬಾದ್: ಇತ್ತೀಚೆಗಷ್ಟೇ ಪಾಟಿದಾರ್ ನಾಯಕ ಮತ್ತು ಪಕ್ಷದ ಶಾಸಕ ಹಾರ್ದಿಕ್ ಪಟೇಲ್ ಅವರನ್ನು ಬೆಂಬಲಿಸಿದ ವಿರಂಗಾಮ್‌ನ 45 ವರ್ಷದ ಬಿಜೆಪಿ ಮುಖಂಡ ಹರ್ಷದ್ ಗಮೋಟ್ ಅವರನ್ನು ರಾಜಕೀಯ ದ್ವೇಷದ ಕಾರಣ ಮತ್ತೋರ್ವ ಬಿಜೆಪಿ ಸದಸ್ಯರೇ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಬಿಜೆಪಿ ಕಾರ್ಯಕರ್ತ ಭರತ್ ಕಥಿ ಸೇರಿದಂತೆ ಏಳು ಮಂದಿಯನ್ನು ಬುಧವಾರ ಬಂಧಿಸಲಾಗಿದೆ.

ಒಂದು ವರ್ಷದ ಹಿಂದೆ ಗಮೋಟ್ ಅವರ ಪತ್ನಿ ಸೋನಾಲ್ ಅವರು ಪುರಸಭೆಯ ಕೌನ್ಸಿಲರ್ ಸ್ಥಾನಕ್ಕೆ ಅಭ್ಯರ್ಥಿಯಾದ ಬಳಿಕ ಗಮೋಟ್ ಮತ್ತು ಕಥಿ ನಡುವೆ ಭಿನ್ನಮತ ಆರಂಭವಾಯಿತು.

'ಮಂಗಳವಾರ ಸಂಜೆ, ಹರ್ಷದ್‌ಕುಮಾರ್ ಗಮೋಟ್ ಅವರ ಬ್ಯುಸಿನೆಸ್ ಮತ್ತು ರಾಜಕೀಯ ಪ್ರತಿಸ್ಫರ್ಧಿಯಾದ ಭರತ್ ಕಥಿ ಮತ್ತು ಅವರ ಆರು ಸಹಚರರು ಹಲವು ಬಾರಿ ಇರಿದಿದ್ದಾರೆ. ಗಾಯಾಳು ಗಮೋಟ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಅವರು ಮೃತಪಟ್ಟರು' ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಡಿಎಸ್ ಚೌಹಾಣ್ ತಿಳಿಸಿದ್ದಾರೆ.

ಆದಾಗ್ಯೂ, ದೂರಿನಲ್ಲಿ ರಾಜಕೀಯ ಪೈಪೋಟಿಯ ನೇರ ಉಲ್ಲೇಖವಿಲ್ಲದಿದ್ದರೂ, ಭರತ್ ಕಥಿ ಅವರಿಗೆ ಈ ಪ್ರದೇಶ ಭದ್ರಕೋಟೆ ಎನಿಸಿತ್ತು. ಆದರೆ, ಸೋನಾಲ್ ಅವರು ಪುರಸಭೆಯ ಕೌನ್ಸಿಲರ್ ಆಗಿ ಆಯ್ಕೆಯಾದ ಬಳಿಕ, ಹರ್ಷದ್ ಅವರು ಸರ್ಕಾರದ ನೀತಿಗಳು ಮತ್ತು ಇತರ ವ್ಯವಹಾರಗಳ ಮೇಲೆ ಪ್ರಭಾವ ಬೀರಲು ಮುಂದಾಗಿದ್ದರು. ಈವೇಳೆ ಭರತ್ ಕಥಿ ಅವರ ಪ್ರಾಬಲ್ಯ ಕ್ಷಿಣಿಸಲು ಪ್ರಾರಂಭಿಸಿತು. ಇದುವೇ ಅಪರಾಧವನ್ನು ಪ್ರಚೋದಿಸಿರಬಹುದು ಎಂದು ಚೌಹಾಣ್ ಹೇಳಿದರು.

ಕಥಿ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯರಾಗಿದ್ದರೂ ಕೂಡ, ಪಕ್ಷ ಅವರಿಗೆ ಯಾವುದೇ ಕೆಲಸ ಅಥವಾ ಹುದ್ದೆಯನ್ನು ನೀಡಿರಲಿಲ್ಲ ಎಂದು ವಿರಾಂಗಮ್ ಬಿಜೆಪಿ ನಗರ ಅಧ್ಯಕ್ಷ ನರೇಶ್ ಶಾ ಹೇಳಿದರು.

'ಕಾರ್ಪೊರೇಷನ್ ಚುನಾವಣೆಯಲ್ಲಿ, ಕಥಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹರ್ಷದ್ ಗಮೋಟ್ ಮತ್ತು ಅವರ ಪತ್ನಿ ಸೋನಾಲ್ ವಿರುದ್ಧ ಕೆಲವು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಆದರೆ, ಅವರ ನಡುವೆ ಯಾವುದೇ ಜಗಳ ನಡೆದಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮೃತರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು' ಎಂದು ಶಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com