ಗರಗಸದಿಂದ ಶ್ರದ್ಧಾ ದೇಹ ತುಂಡರಿಸಿದ್ದ ಅಫ್ತಾಬ್: ಮರಣೋತ್ತರ ಪರೀಕ್ಷೆಯ ಸ್ಫೋಟಕ ಮಾಹಿತಿ
ದೆಹಲಿಯ ಶ್ರದ್ಧಾವಾಲ್ಕರ್ ಕೊಲೆ ಪ್ರಕರಣ ದಿನಕ್ಕೊಂದು ತಿರುವುಪಡೆಯುತ್ತಿದ್ದು, ಆಕೆಯನ್ನು ಕೊಲೆ ಮಾಡಿದ್ದ ಆಕೆಯ ಪ್ರಿಯಕರ ಅಫ್ತಾಬ್ ಅಮೀವ್ ಪೂನಾವಾಲನ ಭೀಕರತೆಯನ್ನು ಎಳೆಎಳೆಯಾಗಿ ತೆರೆದುಕೊಳ್ಳುತ್ತಿದೆ.
Published: 14th January 2023 12:17 PM | Last Updated: 14th January 2023 12:17 PM | A+A A-

ಶ್ರದ್ಧಾ ವಾಲ್ಕರ್
ನವದೆಹಲಿ: ದೆಹಲಿಯ ಶ್ರದ್ಧಾವಾಲ್ಕರ್ ಕೊಲೆ ಪ್ರಕರಣ ದಿನಕ್ಕೊಂದು ತಿರುವುಪಡೆಯುತ್ತಿದ್ದು, ಆಕೆಯನ್ನು ಕೊಲೆ ಮಾಡಿದ್ದ ಆಕೆಯ ಪ್ರಿಯಕರ ಅಫ್ತಾಬ್ ಅಮೀವ್ ಪೂನಾವಾಲನ ಭೀಕರತೆಯನ್ನು ಎಳೆಎಳೆಯಾಗಿ ತೆರೆದುಕೊಳ್ಳುತ್ತಿದೆ.
ಹೌದು.. ತನ್ನ ಸಹಜೀವನ ಸಂಗಾತಿ ಶ್ರದ್ಧಾ ವಾಲ್ಕರ್ ಅವರನ್ನು ಹತ್ಯೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ದೆಹಲಿಯ ವಿವಿಧೆಡೆ ಎಸೆದಿದ್ದ ಆರೋಪ ಎದುರಿಸುತ್ತಿರುವ ಆಫ್ತಾಬ್ ಅಮೀನ್ ಪೂನಾವಾಲಾ ಪ್ರಕರಣದ ತನಿಖೆ ಮುಂದುವರಿದಂತೆ ಆಘಾತಕಾರಿ ಸಂಗತಿಗಳು ಹೊರಬೀಳುತ್ತಿವೆ. ಹಾಲಿ ಹೊರಬಿದ್ದಿರುವ ಮರಣೋತ್ತರ ಪರೀಕ್ಷೆಯಲ್ಲಿ ಅಫ್ತಾಬ್ ತನ್ನ ಪ್ರಿಯತಮೆಯ ದೇಹ ಕತ್ತರಿಸಲು ಗರಗಸ ಬಳಸಿದ್ದ ಎಂಬ ಅಘಾತಕಾರಿ ಅಂಶವನ್ನು ತಜ್ಞರು ಬಯಲು ಮಾಡಿದ್ದಾರೆ.
ಇದನ್ನೂ ಓದಿ: ಶ್ರದ್ಧಾ ಕೊಲೆ ಪ್ರಕರಣ: ಆರೋಪಿ ಅಫ್ತಾಬ್ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ
ಶ್ರದ್ಧಾ ವಾಲ್ಕರ್ ಅವರ ದೇಹವನ್ನು ಗರಗಸ ಬಳಸಿ ತುಂಡರಿಸಿರುವುದು ಮೂಳೆಗಳ ಪರೀಕ್ಷೆಯಲ್ಲಿ ದೃಢಪಟ್ಟಿದೆ. ದೆಹಲಿಯ ವಿವಿಧೆಡೆ ಸಂಗ್ರಹಿಸಿದ್ದ ಶ್ರದ್ಧಾ ವಾಲಕರ್ ಅವರ 23 ಮೂಳೆಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಏಮ್ಸ್ ಆಸ್ಪತ್ರೆಗೆ ಕಳುಹಿಸಿದ್ದರು. ಗರಗಸ ಬಳಸಿ ತುಂಡರಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಜನವರಿ ಕೊನೆಯ ವಾರದಲ್ಲಿ ಪ್ರಕರಣ ಕುರಿತಂತೆ ಪೊಲೀಸರು ದೆಹಲಿಯ ಸಾಕೆತ್ ಕೋರ್ಟ್‌ಗೆ ದೋಷಾರೋಪಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ.
ಶ್ರದ್ಧಾ ವಾಲಕರ್ ತಂದೆಯ ಡಿಎನ್‌ಎ ಜೊತೆ ದಕ್ಷಿಣ ದೆಹಲಿಯ ಅರಣ್ಯ ಪ್ರದೇಶದಲ್ಲಿ ಸಿಕ್ಕ ಮೂಳೆಗಳ ಡಿಎನ್‌ಎ ಹೊಂದಿಕೆಯಾದ ಹಿನ್ನೆಲೆಯಲ್ಲಿ ಮರಣೋತ್ತರ(ಮೂಳೆಗಳ ಪರೀಕ್ಷೆ) ನಡೆಸಲಾಯಿತು ಎಂದು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ ತಿಳಿಸಿದೆ. ಆರೋಪಿ ಆಫ್ತಾಬ್‌ನ ಪಾಲಿಗ್ರಾಫ್ ಮತ್ತು ನಾರ್ಕೊ ಪರೀಕ್ಷೆಯ ವರದಿಯನ್ನು ದೆಹಲಿ ಪೊಲೀಸರು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ: ಪತ್ತೆಯಾದ ಮಾಂಸ, ತಲೆಕೂದಲು, ಮೂಳೆಯ ಡಿಎನ್ಎ ಶ್ರದ್ಧಾ ತಂದೆಯ ಮಾದರಿಯೊಂದಿಗೆ ಹೊಂದಿಕೆ: ವರದಿ
ಮೇ 18, 2022ರಂದು ಶ್ರದ್ಧಾಳನ್ನು ಉಸಿರುಗಟ್ಟಿಸಿ ಕೊಂದಿದ್ದ ಆಫ್ತಾಬ್, ಆಕೆಯ ಮೃತದೇಹಗಳನ್ನು 35 ತುಂಡಾಗಳಾಗಿ ಕತ್ತರಿಸಿ ದಕ್ಷಿಣ ದೆಹಲಿಯ ಮಹ್ರೌಲಿಯಲ್ಲಿರುವ ತಮ್ಮ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ 300 ಲೀಟರ್ ಸಾಮರ್ಥ್ಯದ ಫ್ರಿಡ್ಜ್‌ನಲ್ಲಿ ಇಟ್ಟಿದ್ದ. ಬಳಿಕ ಅದನ್ನು ತೆಗೆದು, ದೆಹಲಿ ಮತ್ತು ಗುರುಗ್ರಾಮದ ಹಲವೆಡೆ ಎಸೆದು ಬಂದಿದ್ದ. ನವೆಂಬರ್ 12ರಂದು ಪೊಲೀಸರು ಆತನನ್ನು ಬಂಧಿಸಿದ್ದರು.