ಕೇರಳದ ದೇವಸ್ಥಾನವೊಂದಕ್ಕೆ ನಟಿ ಅಮಲಾ ಪೌಲ್‌ಗೆ ಪ್ರವೇಶ ನಿರಾಕರಣೆ; ಧಾರ್ಮಿಕ ತಾರತಮ್ಯ ಆರೋಪ

ದಕ್ಷಿಣ ಭಾರತದ ಜನಪ್ರಿಯ ನಟಿ ಅಮಲಾ ಪೌಲ್ ಅವರಿಗೆ ಇಲ್ಲಿಗೆ ಸಮೀಪದ ತಿರುವೈರಾಣಿಕುಲಂ ಮಹಾದೇವ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಅಮಲಾ ಪೌಲ್
ಅಮಲಾ ಪೌಲ್

ಕೊಚ್ಚಿ: ದಕ್ಷಿಣ ಭಾರತದ ಜನಪ್ರಿಯ ನಟಿ ಅಮಲಾ ಪೌಲ್ ಅವರಿಗೆ ಇಲ್ಲಿಗೆ ಸಮೀಪದ ತಿರುವೈರಾಣಿಕುಲಂ ಮಹಾದೇವ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಆವರಣದೊಳಗೆ ಹಿಂದೂಗಳಿಗೆ ಮಾತ್ರ ಅವಕಾಶ ನೀಡುವ ಸಂಪ್ರದಾಯಗಳನ್ನು ಉಲ್ಲೇಖಿಸಿ ಸೋಮವಾರ ದೇವಾಲಯದ ಅಧಿಕಾರಿಗಳು ತನಗೆ 'ದರ್ಶನ' ನಿರಾಕರಿಸಿದ್ದಾರೆ ಎಂದು ನಟಿ ಹೇಳಿದ್ದಾರೆ.

ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದ ಬಳಿಕ ದೃಢನಿಶ್ಚಯದ ಅಮಲಾ ಅವರು ದೇವಸ್ಥಾನದ ಮುಂಭಾಗದ ರಸ್ತೆಯಿಂದಲೇ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ದೇವಸ್ಥಾನದ ಸಂದರ್ಶಕರ ನೋಂದಣಿಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ಅವರು, 'ದೇವರನ್ನು ನೋಡದಿದ್ದರೂ ಚೈತನ್ಯವನ್ನು ಅನುಭವಿಸಿದೆ' ಎಂದು ಬರೆದಿದ್ದಾರೆ.

2023ನೇ ವರ್ಷವಾದರೂ ಧಾರ್ಮಿಕ ತಾರತಮ್ಯ ಇನ್ನೂ ಅಸ್ತಿತ್ವದಲ್ಲಿದೆ ಎಂಬುದು ದುಃಖ ಮತ್ತು ನಿರಾಶಾದಾಯಕವಾಗಿದೆ. ನಾನು ದೇವಿಯ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ. ಆದರೆ, ದೂರದಿಂದಲೇ ಚೈತನ್ಯವನ್ನು ಅನುಭವಿಸುತ್ತಿದ್ದೆ. ಧಾರ್ಮಿಕ ತಾರತಮ್ಯವು ಶೀಘ್ರದಲ್ಲೇ ಬದಲಾವಣೆ ಕಾಣಲಿದೆ ಎಂದು ನಾನು ಭಾವಿಸುತ್ತೇನೆ. ಸಮಯ ಬರುತ್ತದೆ ಮತ್ತು ನಾವೆಲ್ಲರೂ ಸಮಾನವಾಗಿ ಪರಿಗಣಿಸಲ್ಪಡುತ್ತೇವೆಯೇ ಹೊರತು ಧರ್ಮದ ಆಧಾರದಲ್ಲಿ ಅಲ್ಲ ಎಂದು ಅಮಲಾ ತಿಳಿಸಿದ್ದಾರೆ.

ಆದರೆ, ತಿರುವೈರಾಣಿಕುಲಂ ಮಹಾದೇವ ದೇವಸ್ಥಾನ ಟ್ರಸ್ಟ್‌ನ ದೇವಾಲಯದ ಅಧಿಕಾರಿಗಳು ಕೇವಲ ದೇವಾಲಯದ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಅನೇಕ ಧರ್ಮದ ಭಕ್ತರು ದೇವಾಲಯಕ್ಕೆ ಭೇಟಿ ನೀಡಲು ಬಂದಿದ್ದಾರೆ. ಆದರೆ, ಅದು ಯಾರಿಗೂ ತಿಳಿದಿಲ್ಲ. ಆದರೆ, ಒಬ್ಬ ಸೆಲೆಬ್ರಿಟಿ ಬಂದಾಗ ಅದು ವಿವಾದವಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂವತ್ತೊಂದು ವರ್ಷದ ನಟಿ ಅಮಲಾ ಪೌಲ್ ಅವರು ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಜನಪ್ರಿಯ ನಟಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com