ಪಾಕಿಸ್ತಾನ ಮೇಲೆ ಭಾರತ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಗೆ ಯಾವುದೇ ಸಾಕ್ಷಿಗಳಿಲ್ಲ: ದಿಗ್ವಿಜಯ್ ಸಿಂಗ್
ಕೇಂದ್ರದ ಬಿಜೆಪಿ ಸರ್ಕಾರ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ಹೇಳಿಕೊಂಡಿದ್ದರೂ, ಅದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಟೀಕಿಸಿದ್ದಾರೆ.
Published: 23rd January 2023 05:39 PM | Last Updated: 23rd January 2023 05:39 PM | A+A A-

ದಿಗ್ವಿಜಯ್ ಸಿಂಗ್
ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ಹೇಳಿಕೊಂಡಿದ್ದರೂ, ಅದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಟೀಕಿಸಿದ್ದಾರೆ.
ಕೇಂದ್ರ ನಾಯಕರು ಸರ್ಜಿಕಲ್ ಸ್ಟ್ರೈಕ್‌ಗಳ ಬಗ್ಗೆ ಮಾತನಾಡುತ್ತಾರೆ. ಪಾಕಿಸ್ತಾನದ ಅನೇಕ ಉಗ್ರರನ್ನು ಕೊಂದಿದ್ದಾರೆ ಎನ್ನುತ್ತಾರೆ, ಆದರೆ ಯಾವುದೇ ಪುರಾವೆಗಳಿಲ್ಲ ಎಂದು ಇಂದು ಜಮ್ಮುವಿನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದರು.
ಮೋದಿ ಸರ್ಕಾರ ಸುಳ್ಳಿನ ಮೇಲೆ ಆಡಳಿತ ನಡೆಸುತ್ತಿದೆ. ಈ ದೇಶ ಎಲ್ಲರಿಗೂ ಸೇರಿದ್ದು. 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಪುಲ್ವಾಮಾ ಭಯೋತ್ಪಾದಕ ದಾಳಿಯ ಬಗ್ಗೆಯೂ ದಿಗ್ವಿಜಯ್ ಸಿಂಗ್ ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ಮಾತನಾಡಿದರು.
ಸಿಆರ್‌ಪಿಎಫ್ ಮೇಲೆ ದಾಳಿ ನಡೆಸಿದ ವಾಹನವನ್ನು ಸರಿಯಾಗಿ ಪರಿಶೀಲಿಸಿದ್ದರೆ 2019ರ ಭಯೋತ್ಪಾದಕ ದಾಳಿಯನ್ನು ತಪ್ಪಿಸಬಹುದಿತ್ತು ಎಂದರು.
ಸಿಆರ್ ಪಿಎಫ್ ಯೋಧರು ಏಕೆ ಹುತಾತ್ಮರಾದರು, ದಾಳಿ ನಡೆದ ತಕ್ಷಣ ಶ್ರೀನಗರದಿಂದ ದೆಹಲಿಗೆ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಏರ್‌ಲಿಫ್ಟ್ ಮಾಡಲು ಪ್ರಯತ್ನಿಸಿದ್ದರು, ಏಕೆಂದರೆ ಜಮ್ಮು-ಕಾಶ್ಮೀರ ಪ್ರದೇಶ ಸೂಕ್ಷ್ಮ ಪ್ರದೇಶವಾಗಿದೆ ಆದರೆ ಪ್ರಧಾನಿ ಮೋದಿ ಅವರ ವಿನಂತಿಯನ್ನು ನಿರಾಕರಿಸಿದರು. ಅವರು ಏಕೆ ನಿರಾಕರಿಸಿದರು ಎಂದು ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.
ಪುಲ್ವಾಮಾ ಭಯೋತ್ಪಾದನೆಯ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿರುವ ಅವರು, ''ಪ್ರದೇಶದಲ್ಲಿ ಪ್ರತಿ ಕಾರನ್ನು ತಪಾಸಣೆ ನಡೆಸಲಾಗುತ್ತಿದೆ. ಆ ನಿರ್ದಿಷ್ಟ ದಿನ ಸ್ಕಾರ್ಪಿಯೋ ಕಾರನ್ನು ಏಕೆ ತಪಾಸಣೆ ಮಾಡಲಿಲ್ಲ, ವಾಹನವು ತಪ್ಪು ದಿಕ್ಕಿನಿಂದ ಬಂದಿದೆ. ಅದನ್ನು ಏಕೆ ಪರಿಶೀಲಿಸಲಿಲ್ಲ ಎಂದು ಕೇಳಿದರು.